Saturday, 20 December 2014
Wednesday, 10 December 2014
"ಸಾಕ್ಷರ ಘೋಷಣೆ"
10-12-2014 ರಂದು "ಸಾಕ್ಷರ ಘೋಷಣೆ" ಕಾರ್ಯಕ್ರಮ ಜರುಗಿತು. ಶಾಲಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ನಮ್ಮ ಶಾಲಾ ಪಿ.ಟಿ.ಎ. ಅಧ್ಯಕ್ಷರಾದ ಶ್ರೀಯುತ ಪುತ್ತಬ್ಬ ಕುಂಜತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿಯ ಸಲಹಾ ಸಮಿತಿಯ ಸದಸ್ಯರಾದ ಶ್ರೀಮತಿ ಲಿಲ್ಲೀ ಟೀಚರ್ ರವರು ಅತಿಥಿಗಳಾಗಿ ಉಪಸ್ಥಿತರಿದ್ದು ಭಾಷಾ ಕಲಿಕೆಯ ನಾಲ್ಕು ಹಂತಗಳಾದ ಆಲಿಸುವಿಕೆ, ಮಾತುಗಾರಿಕೆ, ಬರವಣಿಗೆ ಮತ್ತು ಓದುವಿಕೆಯ ಪ್ರಾಧಾನ್ಯತೆಯನ್ನು ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಸುದತಿ ಬಿ. ಯವರು ಸಾಕ್ಷರತೆಯ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಶಿಕ್ಷಕರಾದ ಮಹೇಶರವರು ಸಾಕ್ಷರತೆಗೆ ಸಂಬಂಧಿಸಿದ ಘೋಷಣೆಗಳನ್ನು ಬೋಧಿಸಿದರು. ಶಿಕ್ಷಕ ತೇಜಸ್ ರವರು ಸ್ವಾಗತಿಸಿದರು. ಶಿಕ್ಷಕರಾದ ಶ್ರೀಕೃಷ್ಣರವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದವನಿತ್ತರು.
Saturday, 6 December 2014
ಕಲೋತ್ಸವ ವಿಜಯೋತ್ಸವ...........
04-12-2014 ರಂದು ಕಲೋತ್ಸವದಲ್ಲಿ ಬಹುಮಾನ ಗಳಿಸಿದ ವಿದ್ಯಾರ್ಥಿಗಳು ಶಾಲಾ ವಿದ್ಯಾರ್ಥಿಗಳು ಜೊತೆಗೂಡಿ ಬ್ಯಾಂಡ್ ಮೇಳಗಳೊಂದಿಗೆ ವಿಜಯೋತ್ಸವ ಮೆರವಣಿಗೆಯನ್ನು ನಡೆಸಲಾಯಿತು.
ಚಾಂಪಿಯನ್ಸ್...........
ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ದೇಶಭಕ್ತಿಗೀತೆ, ಗುಂಪು ಸಂಗೀತ, ಕಂಠಪಾಠ, ಚಿತ್ರ ರಚನೆ, ಜಲವರ್ಣ, ಲಘ ಸಂಗೀತ, ಶಾಸ್ತ್ರೀಯ ಸಂಗೀತ ಈ ಎಲ್ಲಾ ಸ್ಪರ್ಧೆಗಳಲ್ಲಿ 'A' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಹಾಗೂ ಒಗಟು ಸ್ಪರ್ಧೆ, ಭರತನಾಟ್ಯ ಹಾಗೂ ಜಾನಪದ ನೃತ್ಯ ಸ್ಪರ್ಧೆಗಳಲ್ಲಿ 'A' ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದು L.P. ಕನ್ನಡ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ ಹಾಗೂ L.P. ಜನರಲ್ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ತಂದು ಕೊಟ್ಟ S.A.T.L.P. ಶಾಲೆ ಮಂಜೇಶ್ವರದ ವಿದ್ಯಾರ್ಥಿಗಳು ಅಧ್ಯಾಪಕ ವೃಂದದವರೊಂದಿಗೆ.
Monday, 1 December 2014
Friday, 14 November 2014
ರಕ್ಷಕರ ಸಮ್ಮೇಳನ
ಮಾಹಿತಿ ಶಿಬಿರ 2014-2015
14-11-2014 ರಂದು ಮಕ್ಕಳ ದಿನಾಚರಣೆಯ ಪ್ರಯುಕ್ತ ಹೆತ್ತವರಿಗಾಗಿ ವಿಶೇಷ ಮಾಹಿತಿ ಶಿಬಿರ ಅಪರಾಹ್ನ 2 ಗಂಟೆ ಸರಿಯಾಗಿ ಆರಂಭವಾಯಿತು. ವಾರ್ಡು ಸದಸ್ಯ ಆನಂದ ಮಾಸ್ತರ್ ಶಿಬಿರವನ್ನು ಉದ್ಘಾಟಿಸಿದರು. PTA ಅಧ್ಯಕ್ಷರುಗಳಾದ ನಿತೀನ್ ಚಂದ್ರ ಪೈ, ಪುತ್ತಬ್ಬ ಕುಂಜತ್ತೂರು, ಆಡಳಿತ ಮಂಡಳಿಯ ಸಲಹಾ ಸಮಿತಿಯ ಸದಸ್ಯೆ ಲಿಲ್ಲಿ ಟೀಚರ್, LP ಶಾಲಾ ಮುಖ್ಯೋಪಾಧ್ಯಾಯಿನಿ ಸುದತಿ ಬಿ. ಉಪಸ್ಥಿತರಿದ್ದರು. ಹಿರಿಯ ಶಿಕ್ಷಕ ಪುಂಡಲೀಕ ನಾಯಕ್ ಕಾರ್ಯಕ್ರಮದ ನೇತೃತ್ವ ವಹಿಸಿದರು. ಮಹೇಶ ಕೆ. ಸಹಕಾರ ನೀಡಿದರು. ಶಿಬಿರದಲ್ಲಿ ಉದ್ದೇಶಗಳು, ಮೌಲ್ಯಗಳು, ಮನೋಭಾವಗಳು, ಅಭ್ಯಾಸಗಳು ಕಲಿಕೆಗೆ ಬೆಂಬಲ ನೀಡುವುದು ಹೇಗೆ ಇತ್ಯಾದಿ ವಿಚಾರಗಳ ಬಗ್ಗೆ ಹೆತ್ತವರಿಗೆ ಮಾಹಿತಿ ನೀಡಲಾಯಿತು. ಮನೆಯ ವಾತಾವರಣ, ಭಾವನಾತ್ಮಕ ಬೆಂಬಲ, ಮಗನೋ ಮಗಳೋ ಒಂದೇ ಇತ್ಯಾದಿ ವಿಚಾರಗಳನ್ನು ವಿವರಿಸಲಾಯಿತು. ಹೆತ್ತವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಸಾಕ್ಷರ 2014-2015
ಸಾಂಸ್ಕೃತಿಕ ಕಾರ್ಯಕ್ರಮಗಳು
ಸಾಕ್ಷರ ಮಕ್ಕಳಿಗಾಗಿ 14-11-2014 ಶುಕ್ರವಾರದಂದು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. PTA ಅಧ್ಯಕ್ಷ ಪುತ್ತಬ್ಬ ಕುಂಜತ್ತೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುದತಿ ಬಿ. ಉಪಸ್ಥಿತರಿದ್ದರು. ಮಕ್ಕಳು ಗುಂಪು ಸಂಗೀತ, ಕತೆ ಹೇಳುವುದು, ಪದ್ಯ ಹಾಡುವುದು ಇತ್ಯಾದಿ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಪ್ರಹಸನ, ಸ್ಮರಣಶಕ್ತಿ ಪರೀಕ್ಷೆ, ಮಂಜಟ್ಟಿ ಹೆಕ್ಕುವ ಆಟ, ಭಾಷಾ ಆಟ ಮೊದಲಾದ ಚಟುವಟಿಕೆಗಳು ನಡೆದವು. ಶಿಕ್ಷಕರಾದ ಮಹೇಶ ಕೆ., ಶ್ರೀಕೃಷ್ಣ, ತೇಜಸ್, ಪದ್ಮಿನಿ, ಅನಸೂಯ ಚಟುವಟಿಕೆಗಳನ್ನು ನಡೆಸಿಕೊಟ್ಟರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮಕ್ಕಳ ದಿನಾಚರಣೆ
14-11-2014 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಬೆಳಗ್ಗೆ 10 ಗಂಟೆಗೆ ಸರಿಯಾಗಿ ಆರಂಭವಾದ ಸಭಾಕಾರ್ಯಕ್ರಮದಲ್ಲಿ PTA ಅಧ್ಯಕ್ಷರಾದ ಶ್ರೀಯುತ ಪುತ್ತಬ್ಬ ಕುಂಜತ್ತೂರು ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಲಿಲ್ಲಿ ಟೀಚರ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುದತಿ ಬಿ. ಯವರು ಮಕ್ಕಳ ದಿನಾಚರಣೆಯ ಸಂದೇಶವನ್ನು ನೀಡಿದರು. ಈ ಸಂದರ್ಭದಲ್ಲಿ ಶಾಲಾ ಕ್ರೀಡೋತ್ಸವ ಹಾಗೂ ಕಲೋತ್ಸವದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅದಲ್ಲದೆ ದಿ. ವಿಟ್ಟಪ್ಪ ಶೆಣೈ ಹಾಗೂ ಚಂದ್ರಕಲಾ ಭಾೈ(ನಿವೃತ್ತ ಶಿಕ್ಷಕಿ) ಇವರು ಕೊಡಮಾಡಿದ ನಗದು ಬಹುಮಾನವನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು (ಉತ್ತಮ ನಡತೆ ಮತ್ತು ಕನ್ನಡದಲ್ಲಿ ಹೆಚ್ಚು ಅಂಕ). ನಾಲ್ಕನೇ ತರಗತಿಯ ಅಶ್ರಿಫ ಕಾರ್ಯಕ್ರಮ ನಿರೂಪಿಸಿದರು. ಶಿಲ್ಪ IV B ಸ್ವಾಗತಿಸಿ ಪ್ರಜ್ಞ IV B ಧನ್ಯವಾದ ನೀಡಿದರು.
Wednesday, 12 November 2014
ಅರಳಿದ ಪ್ರತಿಭೆಗಳು.......
12-11-2014 ರಂದು ಶಾಲಾ ಮಟ್ಟದ ಕಲೋತ್ಸವವು ಬಹಳ ವಿಜೃಂಭಣೆಯಿಂದ ಜರುಗಿತು. ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
Thursday, 6 November 2014
ಕಾರ್ತಿಕ ಹುಣ್ಣಿಮೆ
06-11-2014 ರಂದು ಕಾರ್ತಿಕ ಹುಣ್ಣಿಮೆಯ ಪ್ರಯುಕ್ತ ಶ್ರೀ ಮದನಂತೇಶ್ವರ ದೇವಳದ ದೇವರು ಶಾಲೆಗೆ ಪಲ್ಲಕ್ಕಿಯನ್ನು ಏರಿ ಬರುವ ಕಾರ್ಯಕ್ರಮವು ಜರುಗಿತು. ಶೀ ದೇವರಿಗೆ ಶಾಲೆಯಲ್ಲಿ ವಿಶೇಷ ಪೂಜೆ ಜರಗಿತು. ಅಧ್ಯಾಪಕರು, ಸಿಬ್ಬಂದಿ ವರ್ಗದವರು ವಿವಿಧ ಸಮಿತಿಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
Tuesday, 4 November 2014
Wednesday, 29 October 2014
"ರಸೋಯಿ ಘರ್"
29-10-2014 ರಂದು ಹಿಂದಿ ಪಾಠ ಭಾಗದ"ಅಡುಗೆ ಮನೆ"ಎಂಬ ಚಟುವಟಿಕೆಯನ್ನು ನಡೆಸಲಾಯಿತು. ವಿದ್ಯಾರ್ಥಿಗಳನ್ನು ಐದು ಗುಂಪುಗಳಾಗಿ ವಿಂಗಡಿಸಲಾಯಿತು. ವಿವಿಧ ಗುಂಪುಗಳಲ್ಲಿ ಕುಳಿತ ವಿದ್ಯಾರ್ಥಿಗಳು ಅವಲಕ್ಕಿ, ಚಹಾ ಮತ್ತು ಕಾಫಿಯನ್ನು ಸಿದ್ಧಪಡಿಸಿ ಸವಿದರು. ಉತ್ತಮ ರೀತಿಯಲ್ಲಿತಿಂಡಿ ತಯಾರಿಸಿದ ಗುಂಪುಗಳಿಗೆ ಬಹುಮಾನ ನೀಡಲಾಯಿತು. ಈ ಚಟುವಟಿಕೆಯನ್ನು ಸಲಹಾ ಸಮಿತಿಯ ಸದಸ್ಯೆಯಾದ ಶ್ರೀಮತಿ ಲಿಲ್ಲಿ ಟೀಚರ್ ರವರು ನಡೆಸಿಕೊಟ್ಟರು.
Thursday, 23 October 2014
Friday, 17 October 2014
Sunday, 5 October 2014
ಶ್ರೀ ಶಾರದಾ ಮಹೋತ್ಸವ
ನಮ್ಮ ಶಾಲೆಯಲ್ಲಿ ಶ್ರೀ ಶಾರದಾ ಮಹೋತ್ಸವವು
ತಾ 30-9-2014 ರಿಂದ 4-10-2014 ತನಕ ಜರುಗಿತು. ಅಧ್ಯಾಪಕರು
ಮತ್ತು ವಿದ್ಯಾರ್ಥಿಗಳು ಭಕ್ತಿ ಶ್ರದ್ಧೆಯಿಂದ ಪಾಲ್ಗೊಂಡರು.
Friday, 3 October 2014
ಗಾಂಧೀ ಜಯಂತಿ ಆಚರಣೆ
02-10-2014ರಂದು ಗಾಂಧೀಜಯಂತಿಯನ್ನು ಆಚರಿಸಲಾಯಿತು. ಸ್ಕೌಟ್ ಗೈಡ್ ದಳದವರು ಮತ್ತು ಅಧ್ಯಾಪಕ ವೃಂದದವರಿಂದ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಶಾಲಾ ಪ್ರಾರ್ಥನೆಯೊಂದಿಗೆ ಸಭಾಕಾರ್ಯಕ್ರಮ ಪ್ರಾರಂಭವಾಯಿತು. LP ಶಾಲಾ ಮುಖ್ಯೋಪಾಧ್ಯಾಯಿನಿ ಸುದತಿ ಬಿ. ಯವರು ಗಾಂಧೀಜೀಯವರ ಭಾವಾಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಸ್ವಚ್ಛ ಭಾರತದ ಕುರಿತಾದ ಪ್ರತಿಜ್ಞೆಯನ್ನು ಬೋಧಿಸಿದರು. ವಿದ್ಯಾರ್ಥಿಗಳಿಂದ ದೇಶಭಕ್ಕಿಗೀತೆ ಸ್ಪರ್ಧೆ, ತಕಲಿಯಿಂದ ನೂಲು ತೆಗೆಯುವ ಸ್ಪರ್ಧೆ ನಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಅಧಾಪಕರು ಜೊತೆಗೂಡಿ ಶಾಲಾ ಪರಿಸರವನ್ನು ಶುಚಿಗೊಳಿಸುವ ಕಾರ್ಯಕ್ರಮ ಜರುಗಿತು.
Tuesday, 30 September 2014
ನಾಡ ಹಬ್ಬ ದಸರಾ ಆಚರಣೆ
ನಾಡ ಹಬ್ಬ ದಸರಾ ವನ್ನು ಬಹಳ ವಿಜೃಭಣೆಯಿಂದ ಆಚರಿಸಲಾಯಿತು. ಮಂಜೇಶ್ವರದ ಶ್ರೀಮತ್ ಅನಂತೇಶ್ವರ ದೇವಳದ ಕೋಶಾಧಿಕಾರಿಯಾದ ಸುರೇಶ್ ಶೆಣೈ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರೌಢ ಶಾಲಾ ವಿಭಾಗದ ಪ್ರಭಾರ ಮುಖ್ಯೋಪಾಧ್ಯಾಯಿನಿ ಕೆ. ಕೃಷ್ಣ ಕುಮಾರಿ ಟೀಚರ್ ಅಧ್ಯಕ್ಷತೆ ವಹಿಸಿದರು. ವಿದ್ಯಾರ್ಥಿಗಳಿಂದ ಕುವೆಂಪು ರಚಿಸಿದ ನಾಡಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಮಕ್ಕಳಿಂದ ವಿವಿಧ ರೀತಿಯ ವಿನೋದಾವಳಿಗಳು ನಡೆಯಿತು. ಈ ಸಂದರ್ಭದಲ್ಲಿ ಪ್ರೌಢ ಶಾಲಾ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ನಿತಿನ್ ಚಂದ್ರ ಪೈ , ಶಾಲಾ ಆಡಳಿತ ಮಂಡಳಿಯ ಸಲಹ ಸಮಿತಿಯ ಸದಸ್ಯೆ ಲಿಲ್ಲಿ ಬಾಯಿ ಟೀಚರ್ , ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸುದತಿ ಟೀಚರ್, ವಿದ್ಯಾರಂಗ ಸಾಹಿತ್ಯ ವೇದಿಕೆಯ ಸಂಚಾಲಕರಾದ ಪರಮೇಶ್ವರಿ ಟೀಚರ್, ಶಾಲಾ ನಾಡಹಬ್ಬದ ಸಂಯೋಜಕರಾದ ಕಿರಣ್ ಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯಾದ ಕುಮಾರಿ ನಿಶ್ಮಿತ ಸ್ವಾಗತಿಸಿದಳು, ಕುಮಾರಿ ಆಯಿಷತ್ ಸಫ್ ವಾನ ಕಾರ್ಯಕ್ರಮವನ್ನು ನಿರೂಪಿಸಿದಳು.
ತರಗತಿಯ ರಕ್ಷಕ – ಶಿಕ್ಷಕ ಸಂಘದ ಸಭೆ
ತರಗತಿಯ ರಕ್ಷಕ – ಶಿಕ್ಷಕ ಸಂಘದ ಸಭೆಗಳು 30.09.2014 ರಂದು ಜರಗಿತು. ಎಲ್ಲಾ ತರಗತಿಯಲ್ಲೂ ಆಯಾ ತರಗತಿ ಅಧ್ಯಾಪಕರು ಸಭೆಯ ನೇತೃತ್ವವನ್ನು ವಹಿಸಿದರು. ಪ್ರಥಮ ಹಂತದ ಮೌಲ್ಯ ಮಾಪನದ ಉತ್ತರ ಪತ್ರಿಕೆಯನ್ನು ಹೆತ್ತವರಿಗೆ ನೀಡಲಾಯಿತು. ಅಲ್ಲದೆ ಮಕ್ಕಳ ಕಲಿಕಾ ಮಟ್ಟದ ಬಗ್ಗೆ ವಿವರಿಸಿ ಹೇಳಲಾಯಿತು. ಮಕ್ಕಳ ಬಗ್ಗೆ ಹೆಚ್ಚಿನ ಜವಾಬ್ದಾರಿಯನ್ನು ವಹಿಸುವಂತೆ ತಿಳಿಸಲಾಯಿತು. ಕಲಿಕಾ ಅಭಿವೃದ್ದಿ ದಾಖಲೆಗೆ ಹೆತ್ತವರ ಸಹಿ ಪಡೆಯಲಾಯಿತು.ಹೆತ್ತವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಜಗತ್ತಿಗೆ ಅನಾವರಣಗೊಂಡ ಶಾಲಾ ಬ್ಲಾಗ್
ಶಾಲಾ ಬ್ಲಾಗ್ ನ ಉದ್ಘಾಟನೆಯು 30.9.2014 ಬೆಳಗ್ಗೆ 11 ಗಂಟೆಗೆ ಜರಗಿತು. ಶಾಲಾ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಪುತ್ತಬ್ಬ ಕುಂಜತ್ತೂರು ಅಧ್ಯಕ್ಷತೆ ವಹಿಸಿದರು. ಮಾತೆಯರ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಶಾರದ ಬ್ಲಾಗನ್ನು ಉದ್ಘಾಟಿಸಿದರು. ಶಿಕ್ಷಕರಾದ ತೇಜಸ್ ಕಿರಣ್ ಬ್ಲಾಗ್ ನ ಬಗ್ಗೆ ಮಾಹಿತಿಯನ್ನು ನೀಡಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುದತಿ ಬಿ. ಕಲಿಕಾ ಚಟುವಟಿಕೆಗಳು ಹಾಗೂ ಮುಂದಿನ ತಿಂಗಳ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಶ್ರೀಮತಿ ಲಿಲ್ಲಿ ಬಾಯಿ ಟೀಚರ್ ಕಂಪ್ಯೂಟರ್ ಶಿಕ್ಷಣದ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು. ಶಿಕ್ಷಕರಾದ ತೇಜಸ್ ಕಿರಣ್ ಸ್ವಾಗತಿಸಿ, ಎಸ್ ಆರ್. ಜಿ ಸಂಚಾಲಕಿಯಾದ ಶ್ರೀಮತಿ ಅನಸೂಯ ಟೀಚರ್ ವಂದಿಸಿದರು. ಶ್ರೀಕೃಷ್ಣ ಡಿ.ಕೆ ಕಾರ್ಯಕ್ರಮವನ್ನು ನಿರೂಪಿಸಿದರು.
Monday, 29 September 2014
ಮಂಗಳನತ್ತ ಭಾರತದ ದಾಪುಗಾಲು............
25-09-2014 ನೇ ಸೋಮವಾರ ಮಂಗಳಯಾನ ನಡೆಸಿ ಯಶಸ್ವಿಯಾದ ಭಾರತದ ಸಾಧನೆಯನ್ನು ಶಿಕ್ಷಕರಾದ ನಾಗೇಶ್ ವಿ. ಯವರು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಸುದತಿ.ಬಿ ಯವರು ಮತ್ತು ಪ್ರೌಢ ಶಾಲಾ ಮುಖ್ಯೋಪಾಧ್ಯಾಯನಿ ಮನೋರಮ ಕಿಣಿಯವರು ಉಪಸ್ಥಿತರಿದ್ದರು.
Monday, 15 September 2014
ಸಾಕ್ಷರ 2014 ಶಿಬಿರದ ಉದ್ಘಾಟನೆ
ಸಾಕ್ಷರ – 2014 ಇದರ ಅಂಗವಾಗಿ ಡಯಟ್ ಕಾಸರಗೋಡು ಇದರ ನಿರ್ದೇಶನದಂತೆ ಶಿಬಿರ ವನ್ನು ಹಮ್ಮಿಕೊಳ್ಳಲಾಯಿತು. ಸಂಸ್ಥೆಯ ಅನಂತ ವಿದ್ಯಾ ಸಭಾಂಗಣದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತು ಅಧ್ಯಕ್ಷೆ ಮುಶ್ರತ್ ಜಹಾನ್ ಶಿಬಿರವನ್ನು ಉದ್ಘಾಟಿಸಿದರು. ಬಿ.ಆರ್.ಸಿ ತರಬೇತುದಾರರಾದ ವಿಜಯ ಕುಮಾರ್ ಶಿಬಿರದ ಉದ್ದೇಶವನ್ನು ವಿವರಿಸಿದರು. ಶಾಲಾ ಪ್ರಬಂಧಕರಾದ ಎಂ. ದಿನೇಶ್ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶುಭಕೋರಿದರು. ಆಡಳಿತ ಮಂಡಳಿಯ ಸಲಹಾ ಸಮಿತಿ ಸದಸ್ಯೆ ಲಿಲ್ಲಿ ಬಾಯಿ ಟೀಚರ್ , ಪ್ರೌಢ ಶಾಲಾ ವಿಭಾಗದ ರಕ್ಷಕ – ಶಿಕ್ಷಕ ಸಂಘದ ಉಪಾಧ್ಯಕ್ಷೆ ಹೇಮಲತ , ಕಿರಿಯ ಪ್ರಾಥಮಿಕ ಶಾಲೆಯ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷ ಪುತ್ತಬ್ಬ ಕುಂಜತ್ತೂರು, ಪ್ರೌಢ ಶಾಲಾ ಮುಖ್ಯೋಪಾಧ್ಯಾಯನಿ ಮನೋರಮ ಕಿಣಿ , ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಸುದತಿ.ಬಿ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕರಾದ ಪುಂಡಲಿಕ ನಾಯಕ್ ಸ್ವಾಗತಿಸಿ , ಶಿಕ್ಷಕ ಕೃಷ್ಣ ಭಟ್ ಡಿ. ಕೆ ಧನ್ಯವಾದ ಸಮರ್ಪಿಸಿದರು. ಎಸ್ .ಆರ್. ಜಿ. ಸಂಚಾಲಕರಾದ ಶಾಂತರಾಮ ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಬಿರದಲ್ಲಿ ಶಿಕ್ಷಕರಾದ ಶೈಲಜ ಎಂ., ಕಿರಣ್ ಕುಮಾರ್, ತೇಜಸ್ ಕಿರಣ್, ದಾಸಪ್ಪ ರೈ , ನಾಗೇಶ್ ವಿ ,ಗಣೇಶ್ ನಾಯಕ್. ಲಕ್ಷ್ಣಿದಾಸ್ ಪ್ರಭು, ಸುಮತಿ.ಎಂ . ಸರ್ವೇಶ್ವರಿ, ಪದ್ಮಿನಿ, ಅನಸೂಯ ಮುಂತಾದವರು ಶಿಬಿರವನ್ನು ನಡೆಸಿಕೊಟ್ಟರು
ಸುರಕ್ಷಾ ವಿಮಾ ಯೋಜನೆಯ ಉದ್ಘಾಟನೆ
ರೋಟರಿ ಕ್ಲಬ್ ಮಂಗಳೂರು ಹಾಗೂ ಎಸ್. ಎ. ಟಿ.ಪ್ರೌಢ ಶಾಲೆಯ ರಕ್ಷಕ – ಶಿಕ್ಷಕ ಸಂಘ ಇದರ ಜಂಟಿ ಆಶ್ರಯದಲ್ಲಿ ಮಕ್ಕಳ ಸುರಕ್ಷಾ ವಿಮಾ ಯೋಜನೆಯ ಉದ್ಘಾಟನೆಯನ್ನು ರೋಟರಿ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಏಕನಾಥ ದಂಡೇರಿ ಅವರು ವಿಮಾ ಯೋಜನೆಯ ಅವಶ್ಯಕತೆ ಮತ್ತು ಪ್ರಯೋಜನದ ಬಗ್ಗೆ ವಿವರವನ್ನು ನೀಡಿ , ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಸುದತಿ.ಬಿ ಇವರಿಗೆ ಔಪಚಾರಿಕವಾಗಿ ವಿಮಾ ಪಾಲಿಸಿ ನೀಡುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರೌಢ ಶಾಲಾ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ನಿತಿನ್ ಚಂದ್ರ ಪೈ, ಕಿರಿಯ ಪ್ರಾಥಮಿಕ ಶಾಲೆಯ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ಪುತ್ತಬ್ಬ ಕುಂಜತ್ತೂರು, ಮಂಜೇಶ್ವರ ಗ್ರಾಮಪಂಚಾಯತ್ ಸದಸ್ಯರಾದ ಹರಿಶ್ಚಂದ್ರ , ಎಂ ವಿಠಲ ದಾಸ್ ಭಟ್, ಅನಿಲ್ ಬಾಳಿಗ, ಸಲಹಾ ಸಮಿತಿ ಸದಸ್ಯೆ ಲಿಲ್ಲಿ ಬಾಯಿ ಟೀಚರ್ ಮುಂತಾದವರು ಉಪತ್ಥಿತರಿದ್ದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯನಿ ಮನೋರಮ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಸುದತಿ.ಬಿ ವಂದಿಸಿದರು. ಶಿಕ್ಷಕ ವಿರೇಶ್ವರ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.
Thursday, 11 September 2014
ಆಧುನಿಕತೆಯತ್ತ ತರಗತಿ ಕೋಣೆಗಳು.......
ನೂತನ ಪ್ರೋಜೆಕ್ಟರ್ ಮತ್ತು ಕ್ಯಾಮರ ಹಸ್ತಾಂತರ
ಎಸ್. ಎ.ಟಿ ಶಾಲೆಯ ಹಳೆ ವಿದ್ಯಾರ್ಥಿಯಾಗಿರುವ ಅಪ್ಪುಸ ಅಲಿಯಾಸ್ ರಾಧ ಪೈ ತಮ್ಮ ಪತಿಯವರಾದ ದಿI ಶ್ರೀ ಕೆ. ಪಾಂಡುರಂಗ ಕಾಮತ್ ರವರ ಸ್ಮರಣಾರ್ಥಕವಾಗಿ ನೀಡಿದ ನೂತನ ಪ್ರೊಜೆಕ್ಟರ್ ಮತ್ತು ಕ್ಯಾಮರ ಹಸ್ತಾಂತರ ಕಾರ್ಯಕ್ರಮವು ಎಸ್. ಎ. ಟಿ ಶಾಲೆಯ ಅನಂತ ವಿಧ್ಯಾ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತ್ ಅನಂತೇಶ್ವರ ದೇವಳದ ಕೋಶಾಧಿಕಾರಿಯಾದ ಸುರೇಶ್ ಶೆಣೈ ವಹಿಸಿದರು. ಈ ಸಂದರ್ಭದಲ್ಲಿ ಶಾಲಾ ಪ್ರಬಂಧಕರಾದ ದಿನೇಶ್ ಶೆಣೈ ಅವರು ದಾನಿ 90 ವರ್ಷಪ್ರಾಯದ ಅಪ್ಪುಸ ಅಲಿಯಾಸ್ ರಾಧ ಪೈ ಅವರನ್ನು ಸನ್ಮಾನಿಸಿದರು. ಪ್ರೌಢ ಶಾಲಾ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ನಿತಿನ್ ಚಂದ್ರ ಪೈ, ಕಿರಿಯ ಪ್ರಾಥಮಿಕ ಶಾಲೆಯ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ಪುತ್ತಬ್ಬ ಕುಂಜತ್ತೂರು, ಮಂಜೇಶ್ವರ ಗ್ರಾಮಪಂಚಾಯತ್ ಸದಸ್ಯರಾದ ಹರಿಶ್ಚಂದ್ರ , ಎಂ. ವಿಠಲ ದಾಸ್ ಭಟ್, ಅನಿಲ್ ಬಾಳಿಗ, ಸಲಹಾ ಸಮಿತಿ ಸದಸ್ಯೆ ಲಿಲ್ಲಿ ಬಾಯಿ ಟೀಚರ್ ಮುಂತಾದವರು ಉಪಸ್ಥಿತರಿದ್ದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯನಿ ಮನೋರಮ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಸುದತಿ.ಬಿ ವಂದಿಸಿದರು. ಶಿಕ್ಷಕ ವಿರೇಶ್ವರ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.
Monday, 8 September 2014
ಗುರುವಿಗೆ ನಮನ.....
ಶಿಕ್ಷಕರ ದಿನ
05-09-2014 ರಂದು ಡಾll ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನದ ಸ್ಮರಣಾರ್ಥ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಡಾll ಸರ್ವಪಳ್ಳಿ ರಾಧಾಕೃಷ್ಣನ್ ರವರ ಭಾವಾಚಿತ್ರಕ್ಕೆ ಪುಷ್ಪಾರ್ಚನೆ ಗೈಯಲಾಯಿತು. ನಿವೃತ್ತ ಅಧಾಪಕ ಶ್ರೀಯುತ ದಾಮೋದರ್ ಮಾಸ್ಟರ್ ರವರನ್ನು ಸನ್ಮಾನಿಸಲಾಯಿತು.
05-09-2014 ರಂದು ಡಾll ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನದ ಸ್ಮರಣಾರ್ಥ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಡಾll ಸರ್ವಪಳ್ಳಿ ರಾಧಾಕೃಷ್ಣನ್ ರವರ ಭಾವಾಚಿತ್ರಕ್ಕೆ ಪುಷ್ಪಾರ್ಚನೆ ಗೈಯಲಾಯಿತು. ನಿವೃತ್ತ ಅಧಾಪಕ ಶ್ರೀಯುತ ದಾಮೋದರ್ ಮಾಸ್ಟರ್ ರವರನ್ನು ಸನ್ಮಾನಿಸಲಾಯಿತು.
ರಂಗು ರಂಗಿನ ಚಿತ್ತಾರ.......
ಓಣಂ ಆಚರಣೆ
05-09-2014 ರಂದು ಓಣಂ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ಅಧ್ಯಾಪಕರ ಜೊತೆಗೂಡಿ ಸಂಗ್ರಹಿಸಲ್ಪಟ್ಟ ಬಣ್ಣ ಬಣ್ಣದ ಹೂವುಗಳಿಂದ ಪೂಕಳಂ ರಚಿಸಿದರು. ವಿದ್ಯಾರ್ಥಿಗಳು ಮಾವೇಲಿ ಮತ್ತು ತಿರುವಾದಿರದ ವೇಷ ತೊಟ್ಟು ತರಗತಿಗಳಿಗೆ ಸಂದರ್ಶಿಸಿ ಓಣಂ ಹಬ್ಬದ ಶುಭ ಹಾರೈಸಿದರು. ಉಪ್ಪಿನಕಾಯಿ, ಪಲ್ಯ, ಗ್ರೇವಿ, ಅನ್ನ, ಸಾರು, ಹಪ್ಪಳ, ಹೋಳಿಗೆ ಮತ್ತು ಪಾಯಸವನ್ನು ಬಾಳೆ ಎಲೆಯಲ್ಲಿ ಉಂಡ ವಿದ್ಯಾರ್ಥಿಗಳು ಓಣಂ ಸದ್ಯದ ಸವಿಯನ್ನು ಸವಿದರು.
05-09-2014 ರಂದು ಓಣಂ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ಅಧ್ಯಾಪಕರ ಜೊತೆಗೂಡಿ ಸಂಗ್ರಹಿಸಲ್ಪಟ್ಟ ಬಣ್ಣ ಬಣ್ಣದ ಹೂವುಗಳಿಂದ ಪೂಕಳಂ ರಚಿಸಿದರು. ವಿದ್ಯಾರ್ಥಿಗಳು ಮಾವೇಲಿ ಮತ್ತು ತಿರುವಾದಿರದ ವೇಷ ತೊಟ್ಟು ತರಗತಿಗಳಿಗೆ ಸಂದರ್ಶಿಸಿ ಓಣಂ ಹಬ್ಬದ ಶುಭ ಹಾರೈಸಿದರು. ಉಪ್ಪಿನಕಾಯಿ, ಪಲ್ಯ, ಗ್ರೇವಿ, ಅನ್ನ, ಸಾರು, ಹಪ್ಪಳ, ಹೋಳಿಗೆ ಮತ್ತು ಪಾಯಸವನ್ನು ಬಾಳೆ ಎಲೆಯಲ್ಲಿ ಉಂಡ ವಿದ್ಯಾರ್ಥಿಗಳು ಓಣಂ ಸದ್ಯದ ಸವಿಯನ್ನು ಸವಿದರು.
Thursday, 28 August 2014
Friday, 22 August 2014
Thursday, 21 August 2014
Tuesday, 19 August 2014
Sunday, 17 August 2014
ಸಂಭ್ರಮದ 68ನೇ ಸ್ವಾತಂತ್ರ್ಯೋತ್ಸವ
ಎಸ್.ಎ.ಟಿ ವಿದ್ಯಾಲಯದಲ್ಲಿ 68ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶಾಲಾ ಪ್ರಬಂಧಕರಾದ ಶ್ರೀ ದಿನೇಶ್ ಶೆಣೈ.ಎ೦ ಧ್ವಜಾರೋಹಣಗೈದು ಶುಭ ಸಂದೇಶಗಳನ್ನು ನೀಡಿದರು. ವಾರ್ಡ್ ಸದಸ್ಯರಾದ ಶ್ರೀ ಆನಂದ ಮಾಸ್ತರ್ ಶುಭ ಕೋರಿದರು. ಹೈಸ್ಕೂಲ್ ವಿಭಾಗದ ಪಿ.ಟಿ.ಎ ಉಪಾಧ್ಯಕ್ಷೆ ಶ್ರೀಮತಿ ಹೆಮಲತಾ, ಎಲ್.ಪಿ ವಿಭಾಗದ ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಪುತ್ತಬ್ಬ ಕುಂಜತ್ತೂರು, ಮದರ್ ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಶಾರದ, ಮುಖ್ಯೋಪಾಧ್ಯಾಯಿನಿಯವರುಗಳಾದ ಶ್ರೀಮತಿ ಮನೋರಮಾ ಕಿಣಿ, ಶ್ರೀಮತಿ ಸುದತಿ.ಬಿ, ಸಲಹಾ ಸಮಿತಿ ಸದಸ್ಯೆ ಶ್ರೀಮತಿ ಲಿಲ್ಲಿ ಬಾಯಿ ಟೀಚರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ನೃತ್ಯ, ಸ್ಥಬ್ದ ಚಿತ್ರ ಪ್ರದರ್ಶನ, ದೇಶ ಭಕ್ತಿಗೀತೆ, ಛದ್ಮವೇಶ, ಸ್ಕೌಟ್-ಗೈಡ್ ದಳದ ಕವಾಯತುಗಳನ್ನು ನಡೆಸಲಾಯಿತು. ಹೆಚ್ಚಿನ ಮಕ್ಕಳು, ಸಿಬ್ಬಂದಿವರ್ಗದವರು, ಮಕ್ಕಳ ರಕ್ಷಕರು , ಶಾಲಾಭಿಮಾನಿಗಳು ಉಪಸ್ಥಿತರಿದ್ದರು. 2013-14ರ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ಸಂಪಾದಿಸಿದ ಪ್ರತಿಭಾನ್ವಿತರಿಗೆ ನಗದು ಪುರಸ್ಕಾರವನ್ನೂ, ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಶಾಲಾ ಸಮಾಜ ಶಾಸ್ತ್ರದ ಕ್ಲಬ್ಬಿನ ಕನ್ವೀನರ್ ಶ್ರೀಮತಿ ಮೋಹಿನಿ ಟೀಚರ್ ಸ್ವಾಗತಿಸಿದರು. ಹಿರಿಯ ಅಧ್ಯಾಪಕರಾದ ಶ್ರೀ ಪುಂಡಲೀಕ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಎಸ್.ಆರ್.ಜಿ ಸಂಚಾಲಕರಾದ ಶ್ರೀ ಕಿರಣ್ ಕುಮಾರ್ ವಂದನಾರ್ಪಣೆಗೈದರು. ತದನಂತರ ಉದಾರ ದಾನಿಯೂ , ಜೋತಿಷ್ಯರಾದ ಶ್ರೀ ಛತ್ರಪತಿ ಪ್ರಭು ಪ್ರತಿ ವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳಿಗೆ ಸಿಹಿತಿಂಡಿಯನ್ನು ವಿತರಿಸಿದರು.
Friday, 15 August 2014
Tuesday, 12 August 2014
Friday, 8 August 2014
ಶಾಂತಿ ಸಹಬಾಳ್ವೆಯಿಂದ ಸುಂದರ ಭವಿಷ್ಯ
ಯುದ್ಧ ವಿರೋಧಿ ದಿನಾಚರಣೆ
6. 8.2014 ಹಿರೋಶಿಮ ದಿನ ಮತ್ತು 9.8.2014 ನಾಗಸಾಕಿ ದಿನದ ಅಂಗವಾಗಿ 8.8.2014 ರಂದು ಯುದ್ಧ ವಿರೋಧಿ ದಿನವನ್ನು ಆಚರಿಸಲಾಯಿತು. ಯುದ್ಧದಿಂದ ಉಂಟಾಗುವ ನಾಶ ನಷ್ಟಗಳ ಕುರಿತಾಗಿ ವಿವರಿಸಿ ಹೇಳಲಾಯಿತು. ಪ್ರತಿಯೊಬ್ಬರು ಶಾಂತಿಯನ್ನು ಪಾಲಿಸಬೇಕಾದ ಅಗತ್ಯತೆಯನ್ನು ತಿಳಿಹೇಳಲಾಯಿತು. ಯುದ್ಧದ ಭೀಕರತೆ, ದುಷ್ಪರಿಣಾಮಗಳನೊಳ್ಳಗೊಂಡ ವಿಡಿಯೋವನ್ನು ಮೂಲಕ ಪ್ರದರ್ಶಿಸಲಾಯಿತು.
Thursday, 7 August 2014
ಮುನ್ನಡೆಯತ್ತ ಕಲಿಕೆ......
ಸಾಕ್ಷರ 2014 ಪ್ರಾರಂಭ
ಎಸ್.
ಎ. ಟಿ.
ಎಲ್. ಪಿ.
ವಿದ್ಯಾಲಯದಲ್ಲಿ
ಸಾಕ್ಷರ 2014 ಕಾರ್ಯಕ್ರಮದ
ಉದ್ಘಾಟನೆಯು ಅನಂತ ವಿದ್ಯಾ
ಸಭಾಂಗಣದಲ್ಲಿ ವಾರ್ಡ್ ಸದಸ್ಯರಾದ
ಆನಂದ ಮಾಸ್ತರ್ ರವರಿಂದ ನೇರವೇರಿತು.
ಪ್ರೌಢ ಶಾಲಾ
ರಕ್ಷಕ- ಶಿಕ್ಷಕ
ಸಂಘದ ಅಧ್ಯಕ್ಷರಾದ ನಿತಿನ್
ಚಂದ್ರ ಪೈ ಅಧ್ಯಕ್ಷತೆಯನ್ನು
ವಹಿಸಿ ಶುಭಕೋರಿದರು. ಬಿ.ಆರ್.ಸಿ. ತರಬೇತುದಾರರಾದ ರಮ್ಯ ಟೀಚರ್
ಪ್ರಾಸ್ತಾವಿಕವಾಗಿ ನುಡಿದರು.
ಶಾಲಾಮಟ್ಟದಲ್ಲಿ
ಸದ್ರಿಯೋಜನೆಯನ್ನು ಕಾರ್ಯಗತಗೊಳಿಸುವ
ಮಾಹಿತಿಯನ್ನು ಪ್ರೌಢ ಶಾಲಾ
ಮುಖ್ಯೋಪಾದ್ಯಾಯಿನಿ ಮನೋರಮ ಕಿಣಿ
ಒದಗಿಸಿದರು. ಕಿರಿಯ
ಪ್ರಾಥಮಿಕ ಶಾಲೆಯಲ್ಲಿ ಈ ಯೋಜನೆಯನ್ನು
ಕಾರ್ಯಗತಗೊಳಿಸುವ ಮಾಹಿತಿಯನ್ನು
ಕಿರಿಯ ಪ್ರಾಥಮಿಕ ಮುಖ್ಯೋಪಾದ್ಯಾಯಿನಿ
ಸುದತಿ. ಬಿ.
ವಿವರನೀಡಿದರು.
ಸಭೆಯಲ್ಲಿ
ನರ್ಸರಿ ಮುಖ್ಯಸ್ಥೆ ಲಿಲ್ಲಿ
ಬಾಯಿ , ಪ್ರೌಢ
ಶಾಲಾ ರಕ್ಷಕ- ಶಿಕ್ಷಕ
ಸಂಘದ ಉಪಾಧ್ಯಕ್ಷರಾದ ಹೇಮಲತ ,
ಕಿರಿಯ ಪ್ರಾಥಮಿಕ
ರಕ್ಷಕ- ಶಿಕ್ಷಕ
ಸಂಘದ ಅಧ್ಯಕ್ಷರಾದ ಪುತ್ತಬ್ಬ
ಕುಂಜತ್ತೂರು ಹಾಗೂ ಮಕ್ಕಳ ರಕ್ಷಕರು
ಉಪಸ್ಥಿತರಿದ್ದರು. ಹಿರಿಯ
ಅಧ್ಯಾಪಕರಾದ ಪುಂಡಲೀಕ್ ನಾಯಕ್
ಸ್ವಾಗತಿಸಿ ವಂದಿಸಿದರು.
Saturday, 26 July 2014
ಬಾಲಗಂಗಾಧರ ತಿಲಕರ ಜನ್ಮದಿನ
23.7.14.ರಂದು ಲೋಕಮಾನ್ಯ ಬಾಲಗಂಗಾಧರ ತಿಲಕರ ಜನ್ಮದಿನವನ್ನು ಆಚರಿಸಲಾಯಿತು. ಎಲ್ಲಾ ತರಗತಿಯಲ್ಲೂ ಅವರ ಕುರಿತಾದ ಕಿರುಪರಿಚಯವನ್ನು ಮಾಡಿದರು.4 ನೇ ತರಗತಿಯಲ್ಲಿ ತಿಲಕರ ಚಿತ್ರವನ್ನು ಪ್ರದರ್ಶಿಸಿ ಚಿತ್ರರಚನೆಗೆ ಅವಕಾಶ ನೀಡಲಾಯಿತು. ಉತ್ತಮ ಚಿತ್ರರಚಿಸಿದವರನ್ನು ಆರಿಸಿ ಅಭಿನಂದಿಸಲಾಯಿತು. 3 ನೇ ತರಗತಿಯಲ್ಲಿ ತಿಲಕರ ಕುರಿತಾದ ಲೇಖನವುಳ್ಳ ಪತ್ರಿಕೆಯನ್ನು ಪ್ರದರ್ಶಿಸಲಾಯಿತು. ತಿಲಕರ ಸ್ವಾತಂತ್ರ ಹೋರಾಟದ ಬಗ್ಗೆ ಇದರಿಂದ ತಿಳಿದು ಕೊಳ್ಳಲು ಸಾದ್ಯವಾಯಿತು.
ಚಾಂದ್ರ ದಿನಾಚರಣೆ
22.7.14 ರಂದು ಚಾಂದ್ರ ದಿನಾಚರಣೆ ಕಾರ್ಯಕ್ರಮ ಜರಗಿತು. ಚಾಂದ್ರ ದಿನದ ಮಹತ್ವವನ್ನು ತಿಳಿಸಲಾಯಿತು. ಸಾಧನೆಗಳನ್ನು ವಿವರಿಸಲಾಯಿತು. ಅಪರಾಹ್ನ 3 ಗಂಟೆಗೆ ಚಾಂದ್ರಯಾನದ ಸಿ.ಡಿ. ಯನ್ನು ಪ್ರದರ್ಶಿಸಲಾಯಿತು. ಪ್ರಾಜೆಕ್ಟರ್ ಸ್ಕ್ರೀನ್ ನಲ್ಲಿ ಸಿ.ಡಿ. ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು. 4ನೇ ತರಗತಿಯಲ್ಲಿ ಈ ಕಾರ್ಯಕ್ರಮ ಜರಗಿತು. .ಮುಖ್ಯೋಪಾಧ್ಯಾಯಿನಿಯಾದ ಸುದತಿ ಬಿ ಉಪಸ್ಥಿತರಿದ್ದರು. ಅಧ್ಯಾಪಕರಾರ ತೇಜಸ್ ಕಿರಣ್ ಕಾರ್ಯಕ್ರಮದ ವ್ಯವಸ್ಥೆ ಮಾಡಿದರು. ಪದ್ಮಿನಿ ಟೀಚರ್ ಸಹಕರಿಸಿದರು.
ಆರೋಗ್ಯ ಮತ್ತು ಶುಚಿತ್ವ
18.7.2014 ರಂದು ಆಡಳಿತ ಮಂಡಳಿಯ ಸಲಹಾ ಸಮಿತಿಯ ಸದಸ್ಯರಾದ ಲಿಲ್ಲಿ ಬಾಯಿ ಟೀಚರ್ ಎಸ್.ಎ.ಟಿ.ಎಲ್.ಪಿ. ಶಾಲೆಯ ಮಕ್ಕಳಿಗೆ ಆರೋಗ್ಯ ಮತ್ತು ಶುಚಿತ್ವದ ಕುರಿತಾಗಿ ಅರಿವು ಮೂಡಿಸಿದರು. ಡಯಟ್ ಮಾಯಿಪ್ಪಾಡಿಯ ತರಬೇತುದಾರರಾದ ಜಲಜಾಕ್ಷಿ ಟೀಚರ್ ಮತ್ತು ಮುಖ್ಯೋಪಾಧ್ಯಾಯಿನಿ ಸುದತಿ .ಬಿ ರವರು ಉಪಸ್ಥಿತರಿದ್ದರು.
ಉಚಿತ ಸಮವಸ್ತ್ರ ವಿತರಣೆ
10.7.14 ಸರಕಾರದಿಂದ ಒದಗಿಸಲ್ಪಟ್ಟ ಸಮವಸ್ತ್ರ ವನ್ನು ಮುಖ್ಯೋಪಾಧ್ಯಾಯಿನಿಯಾದ ಸುದತಿ ಬಿ ವಿತರಿಸುವುದರ ಮೂಲಕ ಚಾಲನೆ ನೀಡಿದರು. ಎಲ್ಲಾ ತರಗತಿಯ ಹುಡುಗಿಯರು ಮತ್ತು ಬಿ.ಪಿ.ಎಲ್. ಹುಡುಗರಿಗೆ ಸರಕಾರದ ವತಿಯಿಂದ ಉಚಿತವಾಗಿ ನೀಡಿದ ನೀಲಿ ಹಾಗೂ ಬಿಳಿ ಸಮವಸ್ತ್ರದ ಬಟ್ಟೆಯನ್ನು ಬೇಕಾದ ಅಳತೆಯಲ್ಲಿ ತುಂಡರಿಸಿ ಎಲ್ಲಾ ಫಲಾನುಭವಿಗಳಿಗೆ ವಿತರಿಸುವ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಆಯಾತರಗತಿ ಅಧ್ಯಾಪಕರಿಗೆ ಜವಾಬ್ದಾರಿ ನೀಡಲಾಯಿತು.
ಬಲಿಷ್ಟ ಸಂಘಟನೆಗಳ ರೂಪೀಕರಣ
ರಕ್ಷಕ
- ಶಿಕ್ಷಕ
ಮಹಾ ಸಭೆ
5.7.14 ಶನಿವಾರ ರಕ್ಷಕ - ಶಿಕ್ಷಕ ಮಹಾ ಸಭೆ ಜರಗಿತು. ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ಪುತ್ತಬ್ಬ ಕುಂಜತ್ತೂರು ಅಧ್ಯಕ್ಷತೆ ವಹಿಸಿದರು. ಆಡಳಿತ ಮಂಡಳಿಯ ಸಲಹಾ ಸಮಿತಿಯ ಸದಸ್ಯರಾದ ಲಿಲ್ಲಿ ಬಾಯಿ ಟೀಚರ್ ಉಪಸ್ಥಿತರಿದ್ದರು.ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅನಸೂಯ ಟೀಚರ್ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿಯಾದ ಸುದತಿ ಬಿ 2013-14 ನೇ ಸಾಲಿನ ವರದಿಯನ್ನು ವಾಚಿಸಿ, ಲೆಕ್ಕ ಪತ್ರವನ್ನು ಮಂಡಿಸಿದರು. ಲೆಕ್ಕ ಪತ್ರವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ನಂತರಲಿಲ್ಲಿ ಬಾಯಿ ಟೀಚರ್ ಹೆತ್ತವರಿಗೆ ಸಲಹೆ ಸೂಚನೆಗಳನ್ನು ನೀಡಿದರು. ನಂತರ 2014- 15 ನೇ ಸಾಲಿನ ಪಿ.ಟಿ. ಎ , ಎ೦.ಪಿ.ಟಿ.ಎ. ಹಾಗೂ ಗಂಜಿ ಸಮಿತಿಯನ್ನು ಆರಿಸಲಾಯಿತು. ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀಯುತ ಪುತ್ತಬ್ಬ ಕುಂಜತ್ತೂರು ಪುನರಾಯ್ಕೆ ಯಾದರು. ಹೊಸತಾಗಿ ಆಯ್ಕೆಯಾದ ಸಮಿತಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು.
ಹೊಸತನದೆಡೆಗೆ ತರಗತಿಗಳು.....
ನೂತನ
ಪಿಠೋಪಕರಣಗಳ ಹಸ್ತಾಂತರ
30.6.14ರಂದು ಶಾಲೆಗೆ ನೂತನ ಪಿಠೋಪಕರಣಗಳ ಹಸ್ತಾಂತರ ರಕ್ಷಕ – ಶಿಕ್ಷಕ ಸಂಘ, ಆಡಳಿತ ಮಂಡಳಿ ಹಾಗೂ ದಾನಿಗಳ ಸಹಕಾರದೊಂದಿಗೆ ನೂತನ ಪಿಠೋಪಕರಣಗಳ ಹಸ್ತಾಂತರ ಹಾಗೂ ಉದ್ಘಾಟನಾ ಕಾರ್ಯಕ್ರಮ ಜರಗಿತು.ಮಂಜೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಮುಶ್ರತ್ ಜಹಾನ್ ಹಸ್ತಾಂತರಿಸಿರು.ಟಿ ಗೋಪಿನಾಥ ಶೆಣೈ ಉದ್ಘಾಟಿಸಿದರು. ನಂತರ ಜರಗಿದ ಸಭಾಕಾರ್ಯಕ್ರಮದಲ್ಲಿ ಮಂಜೇಶ್ವರ ಉಪಜಿಲ್ಲಾ ಬ್ಲಾಕ್ ಸಯೋಜನಾಧಿಕಾರಿ ಇಬ್ರಾಹಿಂ ,ಪ್ರೌಢ ಶಾಲಾ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ನಿತಿನ್ ಚಂದ್ರ ಪೈ , ಶಾಲೆಯ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ಪುತ್ತಬ್ಬ ಕುಂಜತ್ತೂರು , ಮಂಜೇಶ್ವರ ಗ್ರಾಮಪಂಚಾಯತ್ ಸದಸ್ಯರಾದ ಹರಿಶ್ಚಂದ್ರ ಮತ್ತು ಪ್ರಶಾಂತಿ ಕೆ. , ಕೆ. ಶ್ರೀಮತಿ ನಾಯಕ್ , ಡಾ. . ಟಿ .ಸುರೇಂದ್ರ ಶೆಣೈ, ಎ೦. ವಿಠಲ್ ದಾಸ್ ಭಟ್ , ಸುನಿಲ್ ಭಟ್, ಗುರುದತ್ತ್ ಕಾಮತ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಮಾದಕ ವಸ್ತುಗಳೇ .......... ಹುಂ..........ದೂರ ಸರಿಯಿರಿ
ಮಾದಕ
ವಸ್ತು ವಿರೋಧಿ ದಿನ
26.6.14 ರಂದು ಮಾದಕ ವಸ್ತು ವಿರೋಧಿ ದಿನವನ್ನು ಆಚರಿಸಲಾಯಿತು.ಮುಖ್ಯೋಪಾಧ್ಯಾಯಿನಿಯಾದ ಸುದತಿ ಬಿ ಮಾದಕ ದ್ರವ್ಯಗಳಿಂದ ಉಂಟಾಗುವ ತೊಂದರೆಗಳನ್ನು ತಿಳಿಸಿದರು. ಮಹೇಶ್ ಕೆ ಮಕ್ಕಳಿಗೆ ಪ್ರತಿಜ್ಞೆಯನ್ನು ಬೋಧಿಸಿದರು. ಮಕ್ಕಳು ಮಾದಕ ವಸ್ತುವನ್ನು ಸೇವಿಸುವುದಿಲ್ಲ ಎ೦ಬ ಪ್ರತಿಜ್ಞೆಯನ್ನು ಮಾಡಿದರು. ನಂತರ ಕುಡಿತದ ದುಷ್ಪರಿಣಾಮವನ್ನು ಬೀರುವ ಪ್ರಹಸನವನ್ನು ಅಧ್ಯಾಪಕರು ನಡೆಸಿದರು.ನಂತರ ಮಕ್ಕಳು ಘೋಷಣಾ ವಾಕ್ಯಗಳನ್ನು ಪ್ರದರ್ಶಿಸಿದರು.
ಪುಸ್ತಕ ಓದಿ ಮಸ್ತಕ ತುಂಬಿಸಿ
ವಾಚನಾವಾರ
19.6.14 ವಾಚನಾವಾರದ ಉದ್ಘಾಟನೆ ಜರಗಿತು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ಪುತ್ತಬ್ಬ ಕುಂಜತ್ತೂರು ಉದ್ಘಾಟಿಸಿದರು. ಮುಖ್ಯೋಪಾಧ್ಯಾಯಿನಿಯಾದ ಸುದತಿ ಬಿ ಓದುವಿಕೆಯ ಮಹತ್ವವನ್ನು ತಿಳಿಸಿದರು.ಪ್ರೌಢ ಶಾಲಾ ಮುಖ್ಯೋಪಾಧ್ಯಾಯನಿ ಮನೋರಮ ಕಿಣಿ ಶುಭ ಹಾರೈಸಿದರು. ಹೊಸ ಪುಸ್ತಕಗಳ ಬಿಡುಗಡೆ ಹಾಗೂ ಪ್ರದರ್ಶನ ಈ ಸಂದರ್ಭದಲ್ಲಿ ಜರಗಿತು. 20.6.14 ರಂದು ಪ್ರತಿ ತರಗತಿಯಲ್ಲೊ ಮಕ್ಕಳಿಗೆ ಕತೆ ಪುಸ್ತಕವನ್ನು ವಿತರಿಸಲಾಯಿತು. 23.6.14 ರಂದು 3ನೇ ಮತ್ತು 4ನೇ ತರಗತಿಯ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಏರ್ಪಡಿಸಲಾಯಿತು. 24.6.14ರಂದು ತರಗತಿಗಳಲ್ಲಿ ಪುಸ್ತಕ ಸಂಗ್ರಹ ಹಾಗೂ ಮಕ್ಕಳು ಓದಿದ ಕತೆಯ ಸಾರಾಂಶವನ್ನು ಹೇಳುವ ಕಾರ್ಯಕ್ರಮ ಜರಗಿತು. 25.6.14 ರಂದು 3ನೇ ಮತ್ತು 4ನೇ ತರಗತಿಯ ವಿದ್ಯಾರ್ಥಿಗಳು ಮಂಜೇಶ್ವರ ಗೋವಿಂದ ಪೈ ಗ್ರಂಥಾಲಯಕ್ಕೆ ಭೇಟಿ ನೀಡಿದರು. 26.6.14.ರಂದು ಸಮಾರೋಪ ಕಾರ್ಯಕ್ರಮ ಜರಗಿತು. ರಸ ಪ್ರಶ್ನೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಓದಿನ ಮಹತ್ವವನ್ನು ತಿಳಿಸಿ ಹುಟ್ಟು ಹಬ್ಬದ ದಿನ ಒಂದು ಪುಸ್ತಕವನ್ನು ಶಾಲೆಗೆ ನೀಡಬೇಕೆಂದು ಮುಖ್ಯೋಪಾಧ್ಯಾಯರು ಸೂಚಿಸಿದರು.
19.6.14 ವಾಚನಾವಾರದ ಉದ್ಘಾಟನೆ ಜರಗಿತು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ಪುತ್ತಬ್ಬ ಕುಂಜತ್ತೂರು ಉದ್ಘಾಟಿಸಿದರು. ಮುಖ್ಯೋಪಾಧ್ಯಾಯಿನಿಯಾದ ಸುದತಿ ಬಿ ಓದುವಿಕೆಯ ಮಹತ್ವವನ್ನು ತಿಳಿಸಿದರು.ಪ್ರೌಢ ಶಾಲಾ ಮುಖ್ಯೋಪಾಧ್ಯಾಯನಿ ಮನೋರಮ ಕಿಣಿ ಶುಭ ಹಾರೈಸಿದರು. ಹೊಸ ಪುಸ್ತಕಗಳ ಬಿಡುಗಡೆ ಹಾಗೂ ಪ್ರದರ್ಶನ ಈ ಸಂದರ್ಭದಲ್ಲಿ ಜರಗಿತು. 20.6.14 ರಂದು ಪ್ರತಿ ತರಗತಿಯಲ್ಲೊ ಮಕ್ಕಳಿಗೆ ಕತೆ ಪುಸ್ತಕವನ್ನು ವಿತರಿಸಲಾಯಿತು. 23.6.14 ರಂದು 3ನೇ ಮತ್ತು 4ನೇ ತರಗತಿಯ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಏರ್ಪಡಿಸಲಾಯಿತು. 24.6.14ರಂದು ತರಗತಿಗಳಲ್ಲಿ ಪುಸ್ತಕ ಸಂಗ್ರಹ ಹಾಗೂ ಮಕ್ಕಳು ಓದಿದ ಕತೆಯ ಸಾರಾಂಶವನ್ನು ಹೇಳುವ ಕಾರ್ಯಕ್ರಮ ಜರಗಿತು. 25.6.14 ರಂದು 3ನೇ ಮತ್ತು 4ನೇ ತರಗತಿಯ ವಿದ್ಯಾರ್ಥಿಗಳು ಮಂಜೇಶ್ವರ ಗೋವಿಂದ ಪೈ ಗ್ರಂಥಾಲಯಕ್ಕೆ ಭೇಟಿ ನೀಡಿದರು. 26.6.14.ರಂದು ಸಮಾರೋಪ ಕಾರ್ಯಕ್ರಮ ಜರಗಿತು. ರಸ ಪ್ರಶ್ನೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಓದಿನ ಮಹತ್ವವನ್ನು ತಿಳಿಸಿ ಹುಟ್ಟು ಹಬ್ಬದ ದಿನ ಒಂದು ಪುಸ್ತಕವನ್ನು ಶಾಲೆಗೆ ನೀಡಬೇಕೆಂದು ಮುಖ್ಯೋಪಾಧ್ಯಾಯರು ಸೂಚಿಸಿದರು.
Subscribe to:
Posts (Atom)
-
ತರಗತಿಯ ರಕ್ಷಕ – ಶಿಕ್ಷಕ ಸಂಘದ ಸಭೆಗಳು 30.09.2014 ರಂದು ಜರಗಿತು. ಎಲ್ಲಾ ತರಗತಿಯಲ್ಲೂ ಆಯಾ ತರಗತಿ ಅಧ್ಯಾಪಕರು ಸಭೆಯ ನೇತೃತ್ವವನ್ನು ವಹಿಸಿದ...