ನೂತನ ಪ್ರೋಜೆಕ್ಟರ್ ಮತ್ತು ಕ್ಯಾಮರ ಹಸ್ತಾಂತರ
ಎಸ್. ಎ.ಟಿ ಶಾಲೆಯ ಹಳೆ ವಿದ್ಯಾರ್ಥಿಯಾಗಿರುವ ಅಪ್ಪುಸ ಅಲಿಯಾಸ್ ರಾಧ ಪೈ ತಮ್ಮ ಪತಿಯವರಾದ ದಿI ಶ್ರೀ ಕೆ. ಪಾಂಡುರಂಗ ಕಾಮತ್ ರವರ ಸ್ಮರಣಾರ್ಥಕವಾಗಿ ನೀಡಿದ ನೂತನ ಪ್ರೊಜೆಕ್ಟರ್ ಮತ್ತು ಕ್ಯಾಮರ ಹಸ್ತಾಂತರ ಕಾರ್ಯಕ್ರಮವು ಎಸ್. ಎ. ಟಿ ಶಾಲೆಯ ಅನಂತ ವಿಧ್ಯಾ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತ್ ಅನಂತೇಶ್ವರ ದೇವಳದ ಕೋಶಾಧಿಕಾರಿಯಾದ ಸುರೇಶ್ ಶೆಣೈ ವಹಿಸಿದರು. ಈ ಸಂದರ್ಭದಲ್ಲಿ ಶಾಲಾ ಪ್ರಬಂಧಕರಾದ ದಿನೇಶ್ ಶೆಣೈ ಅವರು ದಾನಿ 90 ವರ್ಷಪ್ರಾಯದ ಅಪ್ಪುಸ ಅಲಿಯಾಸ್ ರಾಧ ಪೈ ಅವರನ್ನು ಸನ್ಮಾನಿಸಿದರು. ಪ್ರೌಢ ಶಾಲಾ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ನಿತಿನ್ ಚಂದ್ರ ಪೈ, ಕಿರಿಯ ಪ್ರಾಥಮಿಕ ಶಾಲೆಯ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ಪುತ್ತಬ್ಬ ಕುಂಜತ್ತೂರು, ಮಂಜೇಶ್ವರ ಗ್ರಾಮಪಂಚಾಯತ್ ಸದಸ್ಯರಾದ ಹರಿಶ್ಚಂದ್ರ , ಎಂ. ವಿಠಲ ದಾಸ್ ಭಟ್, ಅನಿಲ್ ಬಾಳಿಗ, ಸಲಹಾ ಸಮಿತಿ ಸದಸ್ಯೆ ಲಿಲ್ಲಿ ಬಾಯಿ ಟೀಚರ್ ಮುಂತಾದವರು ಉಪಸ್ಥಿತರಿದ್ದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯನಿ ಮನೋರಮ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಸುದತಿ.ಬಿ ವಂದಿಸಿದರು. ಶಿಕ್ಷಕ ವಿರೇಶ್ವರ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.
No comments:
Post a Comment