Thursday 28 August 2014

ಕಲೆಯ ಕಾಸರ........


             ನಾಲ್ಕನೇ ತರಗತಿಯ ಕಲೆಯ ಕಾಸರ ಪಾಠಕ್ಕಾಗಿ ಬಳಸಲ್ಪಟ್ಟ ಕಲಿಕೋಪಕರಣ.

Friday 22 August 2014

ಗಣಿತ ರಸಪ್ರಶ್ನೆ......



         ಎಸ್.ಎ.ಟಿ. ಕಿರಿಯ ಪ್ರಾಥಮಿಕ ಶಾಲೆಯಲ್ಲಿ 21-08-2014 ರಂದು ಗಣಿತ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಯಿತು. ನಾಲ್ಕನೇ ತರಗತಿಯ ಮಿಸ್ತಾ ಎಂಬ ವಿದ್ಯಾರ್ಥಿಯು ಅತ್ಯಧಿಕ ಅಂಕದೊಂದಿಗೆ ಶಾಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ.

Thursday 21 August 2014

ಸಾಕ್ಷರ 2014 ಮೌಲ್ಯ ಮಾಪನ.......


                ಸಾಕ್ಷರ 2014 ರ ಮೊದಲ ಹಂತದ ಮೌಲ್ಯ ಮಾಪನವನ್ನು ದಿನಾಂಕ 21-08-2014 ರಂದು ನಡೆಸಲಾಯಿತು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಸಣ್ಣ ಮಟ್ಟಿನ ಪ್ರಗತಿಯನ್ನು ಸಾಧಿಸಿರುವುದು ಕಂಡುಬಂತು.
               

68ನೇ ಸ್ವಾತಂತ್ರ್ಯೋತ್ಸವ


Tuesday 19 August 2014

ಭಗವದ್ಗೀತೆ ಪಠಣ


             ಎಸ್.ಎ.ಟಿ. ಶಾಲೆಯಲ್ಲಿ ದಿನನಿತ್ಯ ಮುಂಜಾನೆ 9.30 ಕ್ಕೆ ಸರಿಯಾಗಿ ಭಗವದ್ಗೀತೆ ಪಠಣ ತರಗತಿಯು ನಡೆಯುತ್ತಿದೆ. ಈ ತರಗತಿಯನ್ನು ಎಲ್.ಪಿ. ಶಾಲಾ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಸುದತಿ ಬಿ. ಯವರು ನಡೆಸಿಕೊಡುತ್ತಿರುವರು.

Sunday 17 August 2014

ಸಂಭ್ರಮದ 68ನೇ ಸ್ವಾತಂತ್ರ್ಯೋತ್ಸವ

          
          ಎಸ್..ಟಿ ವಿದ್ಯಾಲಯದಲ್ಲಿ 68ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತುಶಾಲಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶಾಲಾ ಪ್ರಬಂಧಕರಾದ ಶ್ರೀ ದಿನೇಶ್ ಶೆಣೈ.ಎ೦ ಧ್ವಜಾರೋಹಣಗೈದು ಶುಭ ಸಂದೇಶಗಳನ್ನು ನೀಡಿದರು. ವಾರ್ಡ್ ಸದಸ್ಯರಾದ ಶ್ರೀ ಆನಂದ ಮಾಸ್ತರ್ ಶುಭ ಕೋರಿದರು. ಹೈಸ್ಕೂಲ್ ವಿಭಾಗದ ಪಿ.ಟಿ.ಎ ಉಪಾಧ್ಯಕ್ಷೆ ಶ್ರೀಮತಿ ಹೆಮಲತಾ, ಎಲ್.ಪಿ ವಿಭಾಗದ ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಪುತ್ತಬ್ಬ ಕುಂಜತ್ತೂರುಮದರ್ ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಶಾರದಮುಖ್ಯೋಪಾಧ್ಯಾಯಿನಿಯವರುಗಳಾದ ಶ್ರೀಮತಿ ಮನೋರಮಾ ಕಿಣಿ, ಶ್ರೀಮತಿ ಸುದತಿ.ಬಿಸಲಹಾ ಸಮಿತಿ ಸದಸ್ಯೆ ಶ್ರೀಮತಿ ಲಿಲ್ಲಿ ಬಾಯಿ ಟೀಚರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ನೃತ್ಯಸ್ಥಬ್ದ ಚಿತ್ರ ಪ್ರದರ್ಶನದೇಶ ಭಕ್ತಿಗೀತೆಛದ್ಮವೇಶಸ್ಕೌಟ್-ಗೈಡ್ ದಳದ ಕವಾಯತುಗಳನ್ನು ನಡೆಸಲಾಯಿತುಹೆಚ್ಚಿನ ಮಕ್ಕಳು, ಸಿಬ್ಬಂದಿವರ್ಗದವರುಮಕ್ಕಳ ರಕ್ಷಕರು , ಶಾಲಾಭಿಮಾನಿಗಳು ಉಪಸ್ಥಿತರಿದ್ದರು. 2013-14ರ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ಸಂಪಾದಿಸಿದ ಪ್ರತಿಭಾನ್ವಿತರಿಗೆ ನಗದು ಪುರಸ್ಕಾರವನ್ನೂ, ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಶಾಲಾ ಸಮಾಜ ಶಾಸ್ತ್ರದ ಕ್ಲಬ್ಬಿನ ಕನ್ವೀನರ್ ಶ್ರೀಮತಿ ಮೋಹಿನಿ ಟೀಚರ್ ಸ್ವಾಗತಿಸಿದರುಹಿರಿಯ ಅಧ್ಯಾಪಕರಾದ ಶ್ರೀ ಪುಂಡಲೀಕ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಎಸ್.ಆರ್.ಜಿ ಸಂಚಾಲಕರಾದ ಶ್ರೀ ಕಿರಣ್ ಕುಮಾರ್ ವಂದನಾರ್ಪಣೆಗೈದರುತದನಂತರ ಉದಾರ ದಾನಿಯೂ , ಜೋತಿಷ್ಯರಾದ ಶ್ರೀ ಛತ್ರಪತಿ ಪ್ರಭು ಪ್ರತಿ ವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳಿಗೆ ಸಿಹಿತಿಂಡಿಯನ್ನು ವಿತರಿಸಿದರು.

ಬಾವುಟ ರಚಿಸೋಣ.........

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ ಬಾವುಟ ರಚನಾ ಸ್ಪರ್ಧೆ

Friday 8 August 2014

ಶಾಂತಿ ಸಹಬಾಳ್ವೆಯಿಂದ ಸುಂದರ ಭವಿಷ್ಯ

ಯುದ್ಧ ವಿರೋಧಿ ದಿನಾಚರಣೆ


               
          6. 8.2014 ಹಿರೋಶಿಮ ದಿನ ಮತ್ತು  9.8.2014 ನಾಗಸಾಕಿ ದಿನದ ಅಂಗವಾಗಿ  8.8.2014  ರಂದು ಯುದ್ಧ ವಿರೋಧಿ ದಿನವನ್ನು ಆಚರಿಸಲಾಯಿತು. ಯುದ್ಧದಿಂದ ಉಂಟಾಗುವ ನಾಶ ನಷ್ಟಗಳ ಕುರಿತಾಗಿ ವಿವರಿಸಿ ಹೇಳಲಾಯಿತು. ಪ್ರತಿಯೊಬ್ಬರು ಶಾಂತಿಯನ್ನು ಪಾಲಿಸಬೇಕಾದ ಅಗತ್ಯತೆಯನ್ನು ತಿಳಿಹೇಳಲಾಯಿತು.  ಯುದ್ಧದ ಭೀಕರತೆ, ದುಷ್ಪರಿಣಾಮಗಳನೊಳ್ಳಗೊಂಡ ವಿಡಿಯೋವನ್ನು ಮೂಲಕ ಪ್ರದರ್ಶಿಸಲಾಯಿತು.

Thursday 7 August 2014

ಮುನ್ನಡೆಯತ್ತ ಕಲಿಕೆ......

ಸಾಕ್ಷರ 2014 ಪ್ರಾರಂಭ
              ಎಸ್. . ಟಿ. ಎಲ್. ಪಿ. ವಿದ್ಯಾಲಯದಲ್ಲಿ ಸಾಕ್ಷರ 2014 ಕಾರ್ಯಕ್ರಮದ ಉದ್ಘಾಟನೆಯು ಅನಂತ ವಿದ್ಯಾ ಸಭಾಂಗಣದಲ್ಲಿ ವಾರ್ಡ್ ಸದಸ್ಯರಾದ ಆನಂದ ಮಾಸ್ತರ್ ರವರಿಂದ ನೇರವೇರಿತು. ಪ್ರೌಢ ಶಾಲಾ ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷರಾದ ನಿತಿನ್ ಚಂದ್ರ ಪೈ ಅಧ್ಯಕ್ಷತೆಯನ್ನು ವಹಿಸಿ ಶುಭಕೋರಿದರು. ಬಿ.ಆರ್.ಸಿ. ತರಬೇತುದಾರರಾದ ರಮ್ಯ ಟೀಚರ್ ಪ್ರಾಸ್ತಾವಿಕವಾಗಿ ನುಡಿದರು. ಶಾಲಾಮಟ್ಟದಲ್ಲಿ ಸದ್ರಿಯೋಜನೆಯನ್ನು ಕಾರ್ಯಗತಗೊಳಿಸುವ ಮಾಹಿತಿಯನ್ನು ಪ್ರೌಢ ಶಾಲಾ ಮುಖ್ಯೋಪಾದ್ಯಾಯಿನಿ ಮನೋರಮ ಕಿಣಿ ಒದಗಿಸಿದರು. ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸುವ ಮಾಹಿತಿಯನ್ನು ಕಿರಿಯ ಪ್ರಾಥಮಿಕ ಮುಖ್ಯೋಪಾದ್ಯಾಯಿನಿ ಸುದತಿ. ಬಿ. ವಿವರನೀಡಿದರು. ಸಭೆಯಲ್ಲಿ ನರ್ಸರಿ ಮುಖ್ಯಸ್ಥೆ ಲಿಲ್ಲಿ ಬಾಯಿ , ಪ್ರೌಢ ಶಾಲಾ ರಕ್ಷಕ- ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಹೇಮಲತ , ಕಿರಿಯ ಪ್ರಾಥಮಿಕ ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷರಾದ ಪುತ್ತಬ್ಬ ಕುಂಜತ್ತೂರು ಹಾಗೂ ಮಕ್ಕಳ ರಕ್ಷಕರು ಉಪಸ್ಥಿತರಿದ್ದರು. ಹಿರಿಯ ಅಧ್ಯಾಪಕರಾದ ಪುಂಡಲೀಕ್ ನಾಯಕ್ ಸ್ವಾಗತಿಸಿ ವಂದಿಸಿದರು.

ಗಣರಾಜ್ಯೋತ್ಸವ