Saturday 27 June 2015

ವಿಶ್ವ ಮಾದಕವಸ್ತು ವಿರೋಧಿ ದಿನಾಚರಣೆ



             26.06.2015ರಂದು ಮಾದಕದ್ರವ್ಯ ವಿರೋಧಿ ದಿನವನ್ನು ಆಚರಿಸಲಾಯಿತು. ಅಪರಾಹ್ನ 3 ಗಂಟೆಗೆ ಸಭಾಂಗಣದಲ್ಲಿ ಅಸೆಂಬ್ಲಿ ಸೇರಲಾಯಿತು. ಅಸೆಂಬ್ಲಿಯಲ್ಲಿ ಅಧ್ಯಾಪಕ ಮಹೇಶ ಕೆ. ಪ್ರತಿಜ್ಞೆ ಬೋಧಿಸಿದರು. ಮುಖ್ಯೋಪಾಧ್ಯಾಯಿನಿ ಸುದತಿ ಬಿ. ಮಾದಕ ದ್ರವ್ಯದಿಂದ ಉಂಟಾಗುವ ತೊಂದರೆಗಳನ್ನು ವಿವರಿಸಿದರು ಹಾಗೂ ಅದರಿಂದ ದೂರವಿರುವಂತೆ ಕರೆ ನೀಡಿದರು. ಮಕ್ಕಳಿಗೆ ಪ್ರೋಜೆಕ್ಟರ್ ಮೂಲಕ ಮಾದಕವಸ್ತುಗಳು ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳನ್ನು ವಿವರಿಸಲಾಯಿತು. 

Thursday 25 June 2015

ವಾಚನಾ ಸಪ್ತಾಹ



            ಕೆ.ಎನ್. ಪಣಿಕ್ಕರ್ ಸಂಸ್ಮರಣಾರ್ಥ ಜರಗುವ ವಾಚನಾ ಸಪ್ತಾಹದ ಉಧ್ಘಾಟನೆ 19.06.2015 ರಂದು ಅನಂತ ವಿಧ್ಯಾ ಸಭಾಂಗಣದಲ್ಲಿ ಜರಗಿತು. ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಉದಯ ಶಂಕರ ಭಟ್ ಪುಸ್ತಕಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಅಲ್ಲದೆ ಓದಿನ ಮಹತ್ವ ಹಾಗೂ ಪ್ರಯೋಜನಗಳನ್ನು ತಿಳಿಸಿದರು. ಪ್ರೌಢಶಾಲಾ ಕನ್ನಡ ಶಿಕ್ಷಕಿ ಪರಮೇಶ್ವರಿ ಟೀಚರ್ ಮುಖ್ಯ ಅತಿಥಿಯಾಗಿ ಶುಭ ಹಾರೈಸಿದರು. ಮುಖ್ಯೋಪಾಧ್ಯಾಯಿನಿ ಸುದತಿ ಬಿ. ಹಾಗೂ SRG ಸಂಚಾಲಕಿ ಅನುಸೂಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಾಪಕ ತೇಜಸ್ ಕಿರಣ್ ಪಣಿಕ್ಕರ್ ಬಗ್ಗೆ ಕಿರು ಮಾಹಿತಿ ನೀಡಿದರು. ಮುಖ್ಯೋಪಾಧ್ಯಾಯಿನಿ ಸ್ವಾಗತಿಸಿ ಶುಭಹಾರೈಸಿದರು. ಮಹೇಶ್ ಕೆ. ವಂದಿಸಿ ಶ್ರೀಕೃಷ್ಣ ಡಿ.ಕೆ. ನಿರೂಪಿಸಿದರು. ನಂತರ ಮಕ್ಕಳಿಂದ ಕತೆ, ಕವನ ವಾಚನ ಇತ್ಯಾದಿ ಕಾರ್ಯಕ್ರಮಗಳು ಜರಗಿದವು.
        22.06.2015 ರಂದು ಪುಸ್ತಕ ಪ್ರದರ್ಶನ ಜರಗಿತು. ತರಗತಿಯಲ್ಲಿ ಒಪ್ಪವಾಗಿ ಜೋಡಿಸಿದ ಪುಸ್ತಕಗಳ ಮಳಿಗೆಯನ್ನು ಮುಖ್ಯೋಪಾಧ್ಯಾಯಿನಿ ಸುದತಿ ಬಿ. ಉಧ್ಘಾಟಿಸಿದರು. ಪ್ರತಿ ತರಗತಿ ಮಕ್ಕಳಿಗೂ ಪುಸ್ತಕ ಪ್ರದರ್ಶನವನ್ನು ನೋಡಲು ಅವಕಾಶ ನೀಡಲಾಯಿತು. ನೋಡಿದ ಪುಸ್ತಕಗಳ ಹೆಸರನ್ನು ನೆನಪಿರಿಸಿ ಹೇಳಲು ಸೂಚನೆ ನೀಡಲಾಯಿತು.

ಬಾಲ ಸಭೆ


Thursday 11 June 2015

C.P.T.A. Meeting



              10.06.2015 ರಂದು ಒಂದನೇ ತರಗತಿಯಿಂದ ನಾಲ್ಕನೇ ತರಗತಿಗಳ ವರೆಗಿನ CPTA ಸಭೆ ಜರಗಿತು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ತರಗತಿಯ ಚಟುವಟಿಕೆಗಳ ಕ್ರಮ, ಮನೆಯಲ್ಲಿ ನಡೆಯುವ ಮುಂದುವರಿದ ಚಟುವಟಿಕೆಯಲ್ಲಿ ಹೆತ್ತವರ ಪಾತ್ರ, ತರಗತಿಯ ಶಿಸ್ತಿನ ಕ್ರಮ, ಸಮವಸ್ತ್ರ, ಸಂಗ್ರಹಕ್ಕೆ ಹೆತ್ತವರು ಮಾಡಬೇಕಾದ ಸಹಾಯ, ಶಾಲೆಯ ನಿಯಮಗಳು ಇವೇ ಮೊದಲಾದ ವಿಚಾರಗಳ ಕುರಿತು ಆಯಾ ತರಗತಿಯ ಅಧ್ಯಾಪಕರು  ಹೆತ್ತವರಿಗೆ ಮಾಹಿತಿ ನೀಡಿದರು.

Saturday 6 June 2015

ವಿಶ್ವ ಪರಿಸರ ದಿನ



             05.06.2015 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಬೆಳಗ್ಗೆ 10 ಗಂಟೆಗೆ ಸರಿಯಾಗಿ ಅಸೆಂಬ್ಲಿ ಸೇರಲಾಯಿತು. ಮುಖ್ಯೋಪಾಧ್ಯಾಯಿನಿ ಸುದತಿ ಬಿ. ಪರಿಸರ ದಿನದ ಮಹತ್ವವನ್ನು ತಿಳಿಸಿ  ಗಿಡಗಳನ್ನು ಉಳಿಸಿ-ಬೆಳೆಸಬೇಕಾದ ಅನಿವಾರ್ಯತೆಯನ್ನು ತಿಳಿಸಿದರು. ಅಧ್ಯಾಪಕ ಮಹೇಶ ಕೆ. ಪರಿಸರಗೀತೆಯನ್ನು ಹಾಡಿಸಿದರು. ಮಕ್ಕಳು ಉತ್ಸಾಹದಿಂದ ಹಾಡಿದರು. ನಂತರ ಪರಿಸರ ಉಳಿಸಿ ಬೆಳೆಸುವ ಪ್ರತಿಜ್ಞೆಯನ್ನು ಬೋಧಿಸಲಾಯಿತು. ಬಳಿಕ ಸುದತಿ ಟೀಚರ್ ಗಿಡಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಅಪರಾಹ್ನ 3 ಗಂಟೆಗೆ ಸರಿಯಾಗಿ ಮೂರು ಮತ್ತು ನಾಲ್ಕನೇ ತರಗತಿಯ ಎಲ್ಲಾ ಮಕ್ಕಳಿಗೆ ಸರಕಾರದಿಂದ ಒದಗಿಸಲ್ಪಟ್ಟ ಗಿಡಗಳನ್ನು ವಿತರಿಸಲಾಯಿತು. ಗಿಡಗಳನ್ನು ನೆಟ್ಟು ಬೆಳೆಸುವ ಜವಾಬ್ದಾರಿಯ ಬಗ್ಗೆ ತಿಳಿ ಹೇಳಲಾಯಿತು. ಶಾಲಾ ಪರಿಸರದಲ್ಲಿ ಕೆಲವು ಗಿಡಗಳನ್ನು ನೆಡಲಾಯಿತು.ಗಿಡಗಳನ್ನು ನೋಡಿಕೊಳ್ಳಲು ನಾಲ್ಕನೇ ತರಗತಿ ಮಕ್ಕಳಿಗೆ ಜವಾಬ್ದಾರಿ ವಹಿಸಲಾಯಿತು.

Tuesday 2 June 2015

ಪ್ರವೇಶೋತ್ಸವ 2015



           01.06.2015 ಸೋಮವಾರ ಪ್ರವೇಶೋತ್ಸವದೊಂದಿಗೆ 2015-16 ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಂಡಿತು. ಬೆಳಗ್ಗೆ 10 ಗಂಟೆಗೆ ಸರಿಯಾಗಿ ಅಸೆಂಬ್ಲಿ ಸೇರಲಾಯಿತು. ಪ್ರತಿಜ್ಞೆಯನ್ನು ಬೋಧಿಸಲಾಯಿತು. ನಂತರ ಹೊಸತಾಗಿ ಶಾಲೆಗೆ ಸೇರಿದ ಮಕ್ಕಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಬ್ಯಾಂಡ್ ಸೆಟ್ ವಿಶೇಷ ಮೆರುಗು ನೀಡಿತು.
        ಬಳಿಕ ಅನಂತವಿಧ್ಯಾ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ಜರಗಿತು. ವಾರ್ಡಿನ ಸದಸ್ಯ ಆನಂದ ಮಾಸ್ತರ್ ಬಲೂನು ಸಿಡಿಸುವ ಮೂಲಕ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ನಂತರ ಪ್ರವೇಶೋತ್ಸವ ಗೀತೆಯನ್ನು ಹಾಡಲಾಯಿತು. ಒಂದನೇ ತರಗತಿಯ ಮಕ್ಕಳಿಗೆ ಸಮವಸ್ತ್ರ ಹಾಗೂ 'ಕಲಿಕಾ ಕಿಟ್ ' ನ್ನು ಸಾಂಕೇತಿಕವಾಗಿ ಈ ಸಂದರ್ಭದಲ್ಲಿ ವಿತರಿಸಲಾಯಿತು. ಶಾಲಾ ಪ್ರಬಂಧಕ ದಿನೇಶ್ ಶೆಣೈ ಅಧ್ಯಕ್ಷತೆ ವಹಿಸಿದರು. ಶ್ರೀಮತಿ ಲಿಲ್ಲಿ  ಟೀಚರ್ ಶುಭ ಹಾರೈಸಿದರು. ಮುಖ್ಯೋಪಾಧ್ಯಾಯಿನಿ ಸುದತಿ ಬಿ. ಸಾಮಾನ್ಯ ಸೂಚನೆಗಳನ್ನು ನೀಡಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಮನೋರಮ ಕಿಣಿ ಉಪಸ್ಥಿತರಿದ್ದರು. ಶ್ರೀಕೃಷ್ಣ ಡಿ.ಕೆ. ಸ್ವಾಗತಿಸಿ ದಾಸಪ್ಪ ರೈ ವಂದಿಸಿದರು. ವಿರೇಶ್ವರ ಭಟ್ ನಿರೂಪಿಸಿದರು.
        ಸಭಾಕಾರ್ಯಕ್ರಮದ ಬಳಿಕ ಮಕ್ಕಳಿಗೆ ಕೆಲವು ಹಾಡುಗಳು ಹಾಗೂ ವೈವಿಧ್ಯಮಯ ಚಟುವಟಿಕೆಗಳು ಜರಗಿದವು. ಸಿಹಿತಿಂಡಿ ವಿತರಿಸಲಾಯಿತು. ಹೆತ್ತವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಗಣರಾಜ್ಯೋತ್ಸವ