Tuesday 30 September 2014

ನಾಡ ಹಬ್ಬ ದಸರಾ ಆಚರಣೆ


         
            ನಾಡ ಹಬ್ಬ ದಸರಾ ವನ್ನು ಬಹಳ ವಿಜೃಭಣೆಯಿಂದ ಆಚರಿಸಲಾಯಿತು. ಮಂಜೇಶ್ವರದ ಶ್ರೀಮತ್ ಅನಂತೇಶ್ವರ ದೇವಳದ ಕೋಶಾಧಿಕಾರಿಯಾದ ಸುರೇಶ್ ಶೆಣೈ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರೌಢ ಶಾಲಾ ವಿಭಾಗದ ಪ್ರಭಾರ ಮುಖ್ಯೋಪಾಧ್ಯಾಯಿನಿ ಕೆ. ಕೃಷ್ಣ ಕುಮಾರಿ ಟೀಚರ್ ಅಧ್ಯಕ್ಷತೆ ವಹಿಸಿದರು. ವಿದ್ಯಾರ್ಥಿಗಳಿಂದ ಕುವೆಂಪು ರಚಿಸಿದ ನಾಡಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಮಕ್ಕಳಿಂದ ವಿವಿಧ ರೀತಿಯ ವಿನೋದಾವಳಿಗಳು ನಡೆಯಿತು. ಸಂದರ್ಭದಲ್ಲಿ ಪ್ರೌಢ ಶಾಲಾ ರಕ್ಷಕಶಿಕ್ಷಕ ಸಂಘದ ಅಧ್ಯಕ್ಷರಾದ ನಿತಿನ್ ಚಂದ್ರ ಪೈ , ಶಾಲಾ ಆಡಳಿತ ಮಂಡಳಿಯ ಸಲಹ ಸಮಿತಿಯ ಸದಸ್ಯೆ ಲಿಲ್ಲಿ ಬಾಯಿ ಟೀಚರ್ , ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸುದತಿ ಟೀಚರ್, ವಿದ್ಯಾರಂಗ ಸಾಹಿತ್ಯ ವೇದಿಕೆಯ ಸಂಚಾಲಕರಾದ ಪರಮೇಶ್ವರಿ ಟೀಚರ್, ಶಾಲಾ ನಾಡಹಬ್ಬದ ಸಂಯೋಜಕರಾದ ಕಿರಣ್ ಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯಾದ ಕುಮಾರಿ ನಿಶ್ಮಿತ ಸ್ವಾಗತಿಸಿದಳು, ಕುಮಾರಿ ಆಯಿಷತ್ ಸಫ್ ವಾನ ಕಾರ್ಯಕ್ರಮವನ್ನು ನಿರೂಪಿಸಿದಳು.

ತರಗತಿಯ ರಕ್ಷಕ – ಶಿಕ್ಷಕ ಸಂಘದ ಸಭೆ


             ತರಗತಿಯ ರಕ್ಷಕ – ಶಿಕ್ಷಕ ಸಂಘದ  ಸಭೆಗಳು 30.09.2014 ರಂದು ಜರಗಿತು.  ಎಲ್ಲಾ ತರಗತಿಯಲ್ಲೂ ಆಯಾ ತರಗತಿ ಅಧ್ಯಾಪಕರು ಸಭೆಯ ನೇತೃತ್ವವನ್ನು ವಹಿಸಿದರು. ಪ್ರಥಮ ಹಂತದ ಮೌಲ್ಯ ಮಾಪನದ ಉತ್ತರ ಪತ್ರಿಕೆಯನ್ನು ಹೆತ್ತವರಿಗೆ ನೀಡಲಾಯಿತು. ಅಲ್ಲದೆ ಮಕ್ಕಳ ಕಲಿಕಾ ಮಟ್ಟದ ಬಗ್ಗೆ ವಿವರಿಸಿ ಹೇಳಲಾಯಿತು. ಮಕ್ಕಳ ಬಗ್ಗೆ ಹೆಚ್ಚಿನ ಜವಾಬ್ದಾರಿಯನ್ನು ವಹಿಸುವಂತೆ ತಿಳಿಸಲಾಯಿತು. ಕಲಿಕಾ ಅಭಿವೃದ್ದಿ ದಾಖಲೆಗೆ ಹೆತ್ತವರ ಸಹಿ ಪಡೆಯಲಾಯಿತು.ಹೆತ್ತವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. 


              

ಜಗತ್ತಿಗೆ ಅನಾವರಣಗೊಂಡ ಶಾಲಾ ಬ್ಲಾಗ್



                  ಶಾಲಾ ಬ್ಲಾಗ್ ನ  ಉದ್ಘಾಟನೆಯು 30.9.2014 ಬೆಳಗ್ಗೆ 11 ಗಂಟೆಗೆ ಜರಗಿತು. ಶಾಲಾ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ  ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ  ಪುತ್ತಬ್ಬ ಕುಂಜತ್ತೂರು ಅಧ್ಯಕ್ಷತೆ ವಹಿಸಿದರು.  ಮಾತೆಯರ  ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ  ಶಾರದ  ಬ್ಲಾಗನ್ನು ಉದ್ಘಾಟಿಸಿದರು. ಶಿಕ್ಷಕರಾದ ತೇಜಸ್ ಕಿರಣ್ ಬ್ಲಾಗ್ ನ ಬಗ್ಗೆ ಮಾಹಿತಿಯನ್ನು  ನೀಡಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುದತಿ ಬಿ. ಕಲಿಕಾ ಚಟುವಟಿಕೆಗಳು ಹಾಗೂ  ಮುಂದಿನ ತಿಂಗಳ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಶ್ರೀಮತಿ ಲಿಲ್ಲಿ ಬಾಯಿ ಟೀಚರ್ ಕಂಪ್ಯೂಟರ್ ಶಿಕ್ಷಣದ ಮಹತ್ವವನ್ನು  ಮಕ್ಕಳಿಗೆ ತಿಳಿಸಿದರು. ಶಿಕ್ಷಕರಾದ ತೇಜಸ್ ಕಿರಣ್ ಸ್ವಾಗತಿಸಿ, ಎಸ್ ಆರ್. ಜಿ ಸಂಚಾಲಕಿಯಾದ ಶ್ರೀಮತಿ ಅನಸೂಯ ಟೀಚರ್ ವಂದಿಸಿದರು. ಶ್ರೀಕೃಷ್ಣ ಡಿ.ಕೆ ಕಾರ್ಯಕ್ರಮವನ್ನು ನಿರೂಪಿಸಿದರು. 

Monday 29 September 2014

ಮಂಗಳನತ್ತ ಭಾರತದ ದಾಪುಗಾಲು............


                   25-09-2014 ನೇ ಸೋಮವಾರ ಮಂಗಳಯಾನ ನಡೆಸಿ ಯಶಸ್ವಿಯಾದ ಭಾರತದ ಸಾಧನೆಯನ್ನು ಶಿಕ್ಷಕರಾದ ನಾಗೇಶ್ ವಿ. ಯವರು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಸುದತಿ.ಬಿ ಯವರು ಮತ್ತು ಪ್ರೌಢ ಶಾಲಾ ಮುಖ್ಯೋಪಾಧ್ಯಾಯನಿ ಮನೋರಮ ಕಿಣಿಯವರು ಉಪಸ್ಥಿತರಿದ್ದರು.

Monday 15 September 2014

ಸಾಕ್ಷರ 2014 ಶಿಬಿರದ ಉದ್ಘಾಟನೆ




                  ಸಾಕ್ಷರ – 2014 ಇದರ ಅಂಗವಾಗಿ ಡಯಟ್ ಕಾಸರಗೋಡು ಇದರ ನಿರ್ದೇಶನದಂತೆ ಶಿಬಿರ ವನ್ನು  ಹಮ್ಮಿಕೊಳ್ಳಲಾಯಿತು. ಸಂಸ್ಥೆಯ ಅನಂತ ವಿದ್ಯಾ ಸಭಾಂಗಣದಲ್ಲಿ  ಮಂಜೇಶ್ವರ ಗ್ರಾಮ ಪಂಚಾಯತು ಅಧ್ಯಕ್ಷೆ ಮುಶ್ರತ್ ಜಹಾನ್ ಶಿಬಿರವನ್ನು ಉದ್ಘಾಟಿಸಿದರು. ಬಿ.ಆರ್.ಸಿ ತರಬೇತುದಾರರಾದ ವಿಜಯ ಕುಮಾರ್ ಶಿಬಿರದ ಉದ್ದೇಶವನ್ನು ವಿವರಿಸಿದರು. ಶಾಲಾ ಪ್ರಬಂಧಕರಾದ ಎಂ. ದಿನೇಶ್ ಶೆಣೈ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶುಭಕೋರಿದರು. ಆಡಳಿತ ಮಂಡಳಿಯ ಸಲಹಾ ಸಮಿತಿ ಸದಸ್ಯೆ ಲಿಲ್ಲಿ ಬಾಯಿ ಟೀಚರ್ , ಪ್ರೌಢ ಶಾಲಾ ವಿಭಾಗದ ರಕ್ಷಕ – ಶಿಕ್ಷಕ ಸಂಘದ ಉಪಾಧ್ಯಕ್ಷೆ  ಹೇಮಲತ , ಕಿರಿಯ ಪ್ರಾಥಮಿಕ  ಶಾಲೆಯ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷ ಪುತ್ತಬ್ಬ ಕುಂಜತ್ತೂರು,  ಪ್ರೌಢ ಶಾಲಾ ಮುಖ್ಯೋಪಾಧ್ಯಾಯನಿ ಮನೋರಮ ಕಿಣಿ , ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಸುದತಿ.ಬಿ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕರಾದ ಪುಂಡಲಿಕ ನಾಯಕ್ ಸ್ವಾಗತಿಸಿ , ಶಿಕ್ಷಕ ಕೃಷ್ಣ ಭಟ್ ಡಿ. ಕೆ ಧನ್ಯವಾದ ಸಮರ್ಪಿಸಿದರು. ಎಸ್ .ಆರ್. ಜಿ. ಸಂಚಾಲಕರಾದ ಶಾಂತರಾಮ ಎಸ್   ಕಾರ್ಯಕ್ರಮವನ್ನು  ನಿರೂಪಿಸಿದರು. ಶಿಬಿರದಲ್ಲಿ  ಶಿಕ್ಷಕರಾದ  ಶೈಲಜ ಎಂ., ಕಿರಣ್ ಕುಮಾರ್, ತೇಜಸ್ ಕಿರಣ್, ದಾಸಪ್ಪ ರೈ , ನಾಗೇಶ್ ವಿ ,ಗಣೇಶ್ ನಾಯಕ್. ಲಕ್ಷ್ಣಿದಾಸ್ ಪ್ರಭು, ಸುಮತಿ.ಎಂ . ಸರ್ವೇಶ್ವರಿ, ಪದ್ಮಿನಿ, ಅನಸೂಯ ಮುಂತಾದವರು ಶಿಬಿರವನ್ನು ನಡೆಸಿಕೊಟ್ಟರು

ಸುರಕ್ಷಾ ವಿಮಾ ಯೋಜನೆಯ ಉದ್ಘಾಟನೆ

       
       ರೋಟರಿ  ಕ್ಲಬ್ ಮಂಗಳೂರು ಹಾಗೂ ಎಸ್. ಎ. ಟಿ.ಪ್ರೌಢ ಶಾಲೆಯ ರಕ್ಷಕ – ಶಿಕ್ಷಕ ಸಂಘ  ಇದರ  ಜಂಟಿ ಆಶ್ರಯದಲ್ಲಿ ಮಕ್ಕಳ ಸುರಕ್ಷಾ ವಿಮಾ ಯೋಜನೆಯ ಉದ್ಘಾಟನೆಯನ್ನು ರೋಟರಿ  ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಏಕನಾಥ ದಂಡೇರಿ  ಅವರು  ವಿಮಾ ಯೋಜನೆಯ  ಅವಶ್ಯಕತೆ  ಮತ್ತು ಪ್ರಯೋಜನದ ಬಗ್ಗೆ ವಿವರವನ್ನು ನೀಡಿ , ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಸುದತಿ.ಬಿ ಇವರಿಗೆ  ಔಪಚಾರಿಕವಾಗಿ ವಿಮಾ ಪಾಲಿಸಿ ನೀಡುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರೌಢ ಶಾಲಾ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ನಿತಿನ್ ಚಂದ್ರ ಪೈ, ಕಿರಿಯ ಪ್ರಾಥಮಿಕ ಶಾಲೆಯ  ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ಪುತ್ತಬ್ಬ ಕುಂಜತ್ತೂರು,  ಮಂಜೇಶ್ವರ ಗ್ರಾಮಪಂಚಾಯತ್ ಸದಸ್ಯರಾದ ಹರಿಶ್ಚಂದ್ರ , ಎಂ ವಿಠಲ ದಾಸ್ ಭಟ್, ಅನಿಲ್ ಬಾಳಿಗ, ಸಲಹಾ ಸಮಿತಿ ಸದಸ್ಯೆ ಲಿಲ್ಲಿ ಬಾಯಿ ಟೀಚರ್ ಮುಂತಾದವರು ಉಪತ್ಥಿತರಿದ್ದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯನಿ ಮನೋರಮ ಕಿಣಿ  ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಸುದತಿ.ಬಿ ವಂದಿಸಿದರು. ಶಿಕ್ಷಕ  ವಿರೇಶ್ವರ ಭಟ್  ಕಾರ್ಯಕ್ರಮವನ್ನು  ನಿರೂಪಿಸಿದರು. 

Thursday 11 September 2014

ಆಧುನಿಕತೆಯತ್ತ ತರಗತಿ ಕೋಣೆಗಳು.......

ನೂತನ ಪ್ರೋಜೆಕ್ಟರ್ ಮತ್ತು ಕ್ಯಾಮರ ಹಸ್ತಾಂತರ
                                                         
              ಎಸ್. ಎ.ಟಿ ಶಾಲೆಯ ಹಳೆ ವಿದ್ಯಾರ್ಥಿಯಾಗಿರುವ  ಅಪ್ಪುಸ ಅಲಿಯಾಸ್ ರಾಧ ಪೈ ತಮ್ಮ ಪತಿಯವರಾದ ದಿI ಶ್ರೀ ಕೆ. ಪಾಂಡುರಂಗ ಕಾಮತ್ ರವರ ಸ್ಮರಣಾರ್ಥಕವಾಗಿ ನೀಡಿದ ನೂತನ ಪ್ರೊಜೆಕ್ಟರ್ ಮತ್ತು ಕ್ಯಾಮರ ಹಸ್ತಾಂತರ ಕಾರ್ಯಕ್ರಮವು ಎಸ್. ಎ. ಟಿ ಶಾಲೆಯ ಅನಂತ ವಿಧ್ಯಾ ಸಭಾಂಗಣದಲ್ಲಿ  ಇತ್ತೀಚೆಗೆ ಜರಗಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತ್ ಅನಂತೇಶ್ವರ ದೇವಳದ ಕೋಶಾಧಿಕಾರಿಯಾದ ಸುರೇಶ್ ಶೆಣೈ ವಹಿಸಿದರು. ಈ ಸಂದರ್ಭದಲ್ಲಿ ಶಾಲಾ ಪ್ರಬಂಧಕರಾದ ದಿನೇಶ್  ಶೆಣೈ ಅವರು ದಾನಿ   90 ವರ್ಷಪ್ರಾಯದ ಅಪ್ಪುಸ ಅಲಿಯಾಸ್ ರಾಧ ಪೈ ಅವರನ್ನು ಸನ್ಮಾನಿಸಿದರು. ಪ್ರೌಢ ಶಾಲಾ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ನಿತಿನ್ ಚಂದ್ರ ಪೈ, ಕಿರಿಯ ಪ್ರಾಥಮಿಕ ಶಾಲೆಯ  ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ಪುತ್ತಬ್ಬ ಕುಂಜತ್ತೂರು, ಮಂಜೇಶ್ವರ ಗ್ರಾಮಪಂಚಾಯತ್ ಸದಸ್ಯರಾದ ಹರಿಶ್ಚಂದ್ರ , ಎಂ. ವಿಠಲ ದಾಸ್ ಭಟ್, ಅನಿಲ್ ಬಾಳಿಗ, ಸಲಹಾ ಸಮಿತಿ ಸದಸ್ಯೆ ಲಿಲ್ಲಿ ಬಾಯಿ ಟೀಚರ್ ಮುಂತಾದವರು ಉಪಸ್ಥಿತರಿದ್ದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯನಿ ಮನೋರಮ ಕಿಣಿ  ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಸುದತಿ.ಬಿ ವಂದಿಸಿದರು. ಶಿಕ್ಷಕ  ವಿರೇಶ್ವರ ಭಟ್  ಕಾರ್ಯಕ್ರಮವನ್ನು  ನಿರೂಪಿಸಿದರು. 

Monday 8 September 2014

ವಿದ್ಯಾರ್ಥಿಗಳೊಂದಿಗೆ ಪ್ರಧಾನಿ.......



                       05-09-2014 ರಂದು ಭಾರತದ ಪ್ರಧಾನ ಮಂತ್ರಿಯವರಾದ ನರೇಂದ್ರ ಮೋದಿಯವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ನೇರ ಪ್ರಸಾರದ ಕಾರ್ಯಕ್ರಮದ ವೀಕ್ಷಣೆಗೆ  ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಿಕೊಡಲಾಯಿತು. 


ಗುರುವಿಗೆ ನಮನ.....

ಶಿಕ್ಷಕರ ದಿನ
                                                                                     

            05-09-2014 ರಂದು ಡಾll ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನದ ಸ್ಮರಣಾರ್ಥ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಡಾll ಸರ್ವಪಳ್ಳಿ ರಾಧಾಕೃಷ್ಣನ್ ರವರ ಭಾವಾಚಿತ್ರಕ್ಕೆ ಪುಷ್ಪಾರ್ಚನೆ ಗೈಯಲಾಯಿತು. ನಿವೃತ್ತ ಅಧಾಪಕ ಶ್ರೀಯುತ ದಾಮೋದರ್ ಮಾಸ್ಟರ್ ರವರನ್ನು ಸನ್ಮಾನಿಸಲಾಯಿತು.  

ರಂಗು ರಂಗಿನ ಚಿತ್ತಾರ.......

ಓಣಂ ಆಚರಣೆ
                                                                                       
           05-09-2014 ರಂದು ಓಣಂ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ಅಧ್ಯಾಪಕರ ಜೊತೆಗೂಡಿ ಸಂಗ್ರಹಿಸಲ್ಪಟ್ಟ ಬಣ್ಣ ಬಣ್ಣದ ಹೂವುಗಳಿಂದ ಪೂಕಳಂ ರಚಿಸಿದರು. ವಿದ್ಯಾರ್ಥಿಗಳು ಮಾವೇಲಿ ಮತ್ತು ತಿರುವಾದಿರದ ವೇಷ ತೊಟ್ಟು ತರಗತಿಗಳಿಗೆ ಸಂದರ್ಶಿಸಿ ಓಣಂ ಹಬ್ಬದ ಶುಭ ಹಾರೈಸಿದರು. ಉಪ್ಪಿನಕಾಯಿ, ಪಲ್ಯ, ಗ್ರೇವಿ, ಅನ್ನ, ಸಾರು, ಹಪ್ಪಳ, ಹೋಳಿಗೆ ಮತ್ತು ಪಾಯಸವನ್ನು ಬಾಳೆ ಎಲೆಯಲ್ಲಿ ಉಂಡ ವಿದ್ಯಾರ್ಥಿಗಳು ಓಣಂ ಸದ್ಯದ ಸವಿಯನ್ನು ಸವಿದರು.

ಗಣರಾಜ್ಯೋತ್ಸವ