Wednesday 10 December 2014

"ಸಾಕ್ಷರ ಘೋಷಣೆ"



             10-12-2014 ರಂದು "ಸಾಕ್ಷರ ಘೋಷಣೆ" ಕಾರ್ಯಕ್ರಮ ಜರುಗಿತು. ಶಾಲಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ನಮ್ಮ ಶಾಲಾ ಪಿ.ಟಿ.ಎ. ಅಧ್ಯಕ್ಷರಾದ ಶ್ರೀಯುತ ಪುತ್ತಬ್ಬ ಕುಂಜತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿಯ ಸಲಹಾ ಸಮಿತಿಯ ಸದಸ್ಯರಾದ ಶ್ರೀಮತಿ ಲಿಲ್ಲೀ ಟೀಚರ್ ರವರು ಅತಿಥಿಗಳಾಗಿ ಉಪಸ್ಥಿತರಿದ್ದು ಭಾಷಾ ಕಲಿಕೆಯ ನಾಲ್ಕು ಹಂತಗಳಾದ ಆಲಿಸುವಿಕೆ, ಮಾತುಗಾರಿಕೆ, ಬರವಣಿಗೆ ಮತ್ತು ಓದುವಿಕೆಯ ಪ್ರಾಧಾನ್ಯತೆಯನ್ನು ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಸುದತಿ ಬಿ. ಯವರು ಸಾಕ್ಷರತೆಯ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಶಿಕ್ಷಕರಾದ ಮಹೇಶರವರು ಸಾಕ್ಷರತೆಗೆ ಸಂಬಂಧಿಸಿದ ಘೋಷಣೆಗಳನ್ನು ಬೋಧಿಸಿದರು. ಶಿಕ್ಷಕ ತೇಜಸ್ ರವರು ಸ್ವಾಗತಿಸಿದರು. ಶಿಕ್ಷಕರಾದ ಶ್ರೀಕೃಷ್ಣರವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದವನಿತ್ತರು.

Saturday 6 December 2014

ಕಲೋತ್ಸವ ವಿಜಯೋತ್ಸವ...........



           04-12-2014 ರಂದು ಕಲೋತ್ಸವದಲ್ಲಿ ಬಹುಮಾನ ಗಳಿಸಿದ ವಿದ್ಯಾರ್ಥಿಗಳು ಶಾಲಾ ವಿದ್ಯಾರ್ಥಿಗಳು ಜೊತೆಗೂಡಿ ಬ್ಯಾಂಡ್ ಮೇಳಗಳೊಂದಿಗೆ ವಿಜಯೋತ್ಸವ ಮೆರವಣಿಗೆಯನ್ನು ನಡೆಸಲಾಯಿತು. 

ಚಾಂಪಿಯನ್ಸ್...........


              ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ದೇಶಭಕ್ತಿಗೀತೆ, ಗುಂಪು ಸಂಗೀತ, ಕಂಠಪಾಠ, ಚಿತ್ರ ರಚನೆ, ಜಲವರ್ಣ, ಲಘ ಸಂಗೀತ, ಶಾಸ್ತ್ರೀಯ ಸಂಗೀತ ಈ ಎಲ್ಲಾ ಸ್ಪರ್ಧೆಗಳಲ್ಲಿ 'A' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಹಾಗೂ ಒಗಟು ಸ್ಪರ್ಧೆ, ಭರತನಾಟ್ಯ ಹಾಗೂ ಜಾನಪದ ನೃತ್ಯ ಸ್ಪರ್ಧೆಗಳಲ್ಲಿ 'A' ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದು L.P. ಕನ್ನಡ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ ಹಾಗೂ L.P. ಜನರಲ್ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ತಂದು ಕೊಟ್ಟ S.A.T.L.P. ಶಾಲೆ ಮಂಜೇಶ್ವರದ ವಿದ್ಯಾರ್ಥಿಗಳು ಅಧ್ಯಾಪಕ ವೃಂದದವರೊಂದಿಗೆ.

             ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ L.P. ವಿಭಾಗದ ಗುಂಪು ಸಂಗೀತ ಮತ್ತು ದೇಶಭಕ್ತಿಗೀತೆ ಸ್ಪರ್ಧೆಗಳಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು 'A' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.

Friday 5 December 2014

ಪ್ರತಿಭೆ


               29-11-2014 ರಿಂದ 03-12-2014ರ ವರೆಗೆ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ನಮ್ಮ ಶಾಲಾ ವಿದ್ಯಾರ್ಥಿನಿ ಶಿಲ್ಪಾ L.P. ವಿಭಾಗದ ಕಂಠಪಾಠ ಸ್ಪರ್ಧೆ, ಶಾಸ್ತ್ರೀಯ ಸಂಗೀತ ಸ್ಪರ್ಧೆ ಮತ್ತು ಲಘು ಸಂಗೀತ ಸ್ಪರ್ಧೆಗಳಲ್ಲಿ  ಭಾಗವಹಿಸಿ 'A' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ. 

ಪ್ರತಿಭೆ

              03-12-2014 ರಂದು ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ನಮ್ಮ ಶಾಲಾ ವಿದ್ಯಾರ್ಥಿನಿ  ಪಾಯಲ್ M.P. L.P. ವಿಭಾಗದ ಭರತನಾಟ್ಯ ಸ್ಪರ್ಧೆಯಲ್ಲಿ ಭಾಗವಹಿಸಿ 'A' ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾಳೆ.
                      

ಪ್ರತಿಭೆ

             



















                                                                03-12-2014 ರಂದು ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ನಮ್ಮ ಶಾಲಾ ವಿದ್ಯಾರ್ಥಿನಿ ಸಾನ್ವಿ S ಶೆಟ್ಟಿ L.P. ವಿಭಾಗದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ 'A' ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾಳೆ.

ಪ್ರತಿಭೆ

        29-11-2014 ರಂದು ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ನಮ್ಮ ಶಾಲಾ ವಿದ್ಯಾರ್ಥಿನಿ ಜಲಧಿ S. ರಾವ್ L.P. ವಿಭಾಗದ ಕಥೆ ಹೇಳುವ ಸ್ಪರ್ಧೆಯಲ್ಲಿ ಭಾಗವಹಿಸಿ 'A' ಗ್ರೇಡನ್ನು ಪಡೆದಿರುತ್ತಾಳೆ.

ಪ್ರತಿಭೆ

            29-11-2014 ರಂದು ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ನಮ್ಮ ಶಾಲಾ ವಿದ್ಯಾರ್ಥಿನಿ ಪ್ರಣಮ್ಯ L.P. ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ 'A' ಗ್ರೇಡ್ ನೊಂದಿಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ.

ಪ್ರತಿಭೆ

           29-11-2014 ರಂದು ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ನಮ್ಮ ಶಾಲಾ ವಿದ್ಯಾರ್ಥಿ ಹರಿಕಿಶನ್ L.P. ವಿಭಾಗದ ಒಗಟು ಸ್ಪರ್ಧೆಯಲ್ಲಿ ಭಾಗವಹಿಸಿ 'B' ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾನೆ.

ಪ್ರತಿಭೆ

           02-12-2014 ರಂದು ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ನಮ್ಮ ಶಾಲಾ ವಿದ್ಯಾರ್ಥಿನಿ ಅಸ್ರಿಫ L.P. ವಿಭಾಗದ ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ಭಾಗವಹಿಸಿ 'B' ಗ್ರೇಡನ್ನು ಪಡೆದಿರುತ್ತಾಳೆ.

ಪ್ರತಿಭೆ

        01-12-2014 ರಂದು ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ನಮ್ಮ ಶಾಲಾ ಮೊಹಮ್ಮದ್ ಅನ್ಸಾಫ್ L.P. ವಿಭಾಗದ ಮಾಪಿಳ್ಳ ಪಾಟ್ ಸ್ಪರ್ಧೆಯಲ್ಲಿ ಭಾಗವಹಿಸಿ 'C' ಗ್ರೇಡನ್ನು ಪಡೆದಿರುತ್ತಾನೆ.

Monday 1 December 2014

ಪ್ರತಿಭೆ

       


             29-11-2014 ರಂದು ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ನಮ್ಮ ಶಾಲಾ ವಿದ್ಯಾರ್ಥಿ ಭೂಷಣ್ LP ವಿಭಾಗದ ಚಿತ್ರರಚನಾ (ಪೆನ್ಸಿಲ್ ಡ್ರಾಯಿಂಗ್ ಮತ್ತು ಜಲವರ್ಣ) ಸ್ಪರ್ಧೆಗಳಲ್ಲಿ ಭಾಗವಹಿಸಿ 'ಎ' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ.

ಗಣರಾಜ್ಯೋತ್ಸವ