Thursday 3 December 2015

ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವ


           ಜಿ.ಎಚ್.ಎಸ್.ಎಸ್. ಬೇಕೂರಿನಲ್ಲಿ ನಡೆದ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಎಸ್.ಎ.ಟಿ.ಎಲ್.ಪಿ.ಶಾಲೆ ಮಂಜೇಶ್ವರದ ವಿದ್ಯಾರ್ಥಿಗಳು ಎಲ್.ಪಿ. ಸಾಮಾನ್ಯ ವಿಭಾಗದ ಗುಂಪು ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ '' ಗ್ರೇಡನ್ನು, ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ '' ಗ್ರೇಡಿನೊಂದಿಗೆ ದ್ವಿತೀಯ ಸ್ಥಾನವನ್ನು, ಜಲವರ್ಣ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರಜೀನ ಬಿ. 'ಬಿ'ಗ್ರೇಡಿನೊಂದಿಗೆ ನಾಲ್ಕನೆಯ ಸ್ಥಾನವನ್ನು, ಜಾನಪದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಪಾಯಲ್ ಎಮ್.ಪಿ. '' ಗ್ರೇಡಿನೊಂದಿಗೆ ದ್ವಿತೀಯ ಸ್ಥಾನವನ್ನು, ಭರತನಾಟ್ಯ ಸ್ಪರ್ಧೆಯಲ್ಲಿ ಭಾಗವಹಿಸಿ 'ಬಿ' ಗ್ರೇಡನ್ನು, ಮಾಪಿಳ್ಳಪಾಟ್ ಸ್ಪರ್ಧೆಯಲ್ಲಿ ಭಾಗವಹಿಸಿದ ಅಶ್ ಫಾನ 'ಬಿ' ಗ್ರೇಡಿನೊಂದಿಗೆ ತೃತೀಯ ಸ್ಥಾನವನ್ನು, ಕನ್ನಡ ವಿಭಾಗದ ಕಥೆ ಹೇಳುವ ಸ್ಪರ್ಧೆಯಲ್ಲಿ ಭಾಗವಹಿಸಿದ ಭವಿಶ್ 'ಬಿ' ಗ್ರೇಡನ್ನು ಪಡೆಯುವುದರೊಂದಿಗೆ ಎಲ್.ಪಿ.ಕನ್ನಡ ವಿಭಾಗದಲ್ಲಿ ಸಮಗ್ರ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ಅಭಿನಿವೆಶ್


       ಜಿ.ಎಚ್.ಎಸ್.ಎಸ್. ಬೇಕೂರಿನಲ್ಲಿ ನಡೆದ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಎಸ್.ಎ.ಟಿ.ಎಲ್.ಪಿ.ಶಾಲೆ ಮಂಜೇಶ್ವರದ ಅಭಿನಿವೆಶ್ ಕನ್ನಡ ವಿಭಾಗದ ಒಗಟು ಸ್ಪರ್ಧೆಯಲ್ಲಿ ಭಾಗವಹಿಸಿ ''ಗ್ರೇಡಿನೊಂದಿಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾನೆ.


ಪ್ರಣಮ್ಯ


       ಜಿ.ಎಚ್.ಎಸ್.ಎಸ್. ಬೇಕೂರಿನಲ್ಲಿ ನಡೆದ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಎಸ್.ಎ.ಟಿ.ಎಲ್.ಪಿ.ಶಾಲೆ ಮಂಜೇಶ್ವರದ ಪ್ರಣಮ್ಯ ಕನ್ನಡ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ''ಗ್ರೇಡಿನೊಂದಿಗೆ ಪ್ರಥಮ ಸ್ಥಾನವನ್ನು, ಸಾಮಾನ್ಯ ವಿಭಾಗದ ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ಭಾಗವಹಿಸಿ ''ಗ್ರೇಡನ್ನು ಪಡೆದಿರುತ್ತಾಳೆ.

ಜಲಧಿ ಎಸ್. ರಾವ್


               ಜಿ.ಎಚ್.ಎಸ್.ಎಸ್. ಬೇಕೂರಿನಲ್ಲಿ ನಡೆದ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಎಸ್.ಎ.ಟಿ.ಎಲ್.ಪಿ. ಶಾಲೆ ಮಂಜೇಶ್ವರದ ಜಲಧಿ ಎಸ್. ರಾವ್ ಸಾಮಾನ್ಯ ವಿಭಾಗದ ಲಘ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ '' ಗ್ರೇಡಿನೊಂದಿಗೆ ಪ್ರಥಮ ಸ್ಥಾನವನ್ನು,ಕನ್ನಡ ವಿಭಾಗದ ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸಿ '' ಗ್ರೇಡಿನೊಂದಿಗೆ ನಾಲ್ಕನೆಯ ಸ್ಥಾನವನ್ನು ಪಡೆದಿರುತ್ತಾಳೆ.

Friday 20 November 2015

ಫಾತಿಮತ್ ಅಸ್ನಾ ತಮನ್ನಾ ಎ.ಕೆ.

           
     ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ನಡೆದ ವೃತ್ತಿ ಪರಿಚಯ ಮೇಳದ ಪಪ್ಪೆಟ್ ತಯಾರಿ ಸ್ಪರ್ಧೆಯಲ್ಲಿ ಎಸ್.ಎ.ಟಿ.ಎಲ್.ಪಿ.ಶಾಲೆ ಮಂಜೇಶ್ವರದ ವಿದ್ಯಾರ್ಥಿನಿ ಫಾತಿಮತ್ ಅಸ್ನಾ ತಮನ್ನಾ ಎ.ಕೆ. '' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ 'ಬಿ' ಗ್ರೇಡನ್ನು ಪಡೆದಿರುತ್ತಾಳೆ.

ಪ್ರಜೀನ ಬಿ.


        ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ನಡೆದ ವೃತ್ತಿ ಪರಿಚಯ ಮೇಳದ ಫೇಬ್ರಿಕ್ ಪೈಂಟಿಂಗ್ (ವೆಜಿಟೇಬಲ್) ವಿಭಾಗದಲ್ಲಿ ಎಸ್.ಎ.ಟಿ.ಎಲ್.ಪಿ.ಶಾಲೆ ಮಂಜೇಶ್ವರದ ವಿದ್ಯಾರ್ಥಿನಿ ಪ್ರಜೀನ ಬಿ. '' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ 'ಬಿ' ಗ್ರೇಡನ್ನು ಪಡೆದಿರುತ್ತಾಳೆ.

ಆಸಿಯಮ್ಮ


       ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ನಡೆದ ವೃತ್ತಿ ಪರಿಚಯ ಮೇಳದ ಬುಕ್ ಬೈಂಡಿಂಗ್ ವಿಭಾಗದಲ್ಲಿ ಎಸ್.ಎ.ಟಿ.ಎಲ್.ಪಿ.ಶಾಲೆ ಮಂಜೇಶ್ವರದ ವಿದ್ಯಾರ್ಥಿನಿ ಆಸಿಯಮ್ಮ '' ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನಿಯಾಗಿದ್ದಾಳೆ.



ಮಂಜೇಶ್ವರ ಉಪಜಿಲ್ಲಾ ಮಟ್ಟದ ಮೇಳ


            ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ನಡೆದ ಗಣಿತ ಮೇಳದ ಪಝಲ್ ವಿಭಾಗದಲ್ಲಿ '' ಗ್ರೇಡ್ ನೊಂದಿಗೆ ತೃತೀಯ ಸ್ಥಾನವನ್ನು ಪಡೆದ ಪ್ರಣಮ್ಯ, ಸಮಾಜ ವಿಜ್ಞಾನ ಮೇಳದ ಚಾರ್ಟ್ ವಿಭಾಗದಲ್ಲಿ '' ಗ್ರೇಡ್ ನೊಂದಿಗೆ ತೃತೀಯ ಸ್ಥಾನವನ್ನು ಪಡೆದ ಲವನೀಶ್ ಮತ್ತು ವಚನ ಹಾಗೂ ವೃತ್ತಿ ಪರಿಚಯ ಮೇಳದ ಅಗರ್ ಬತ್ತಿ ತಯಾರಿ ವಿಭಾಗದಲ್ಲಿ ಭಾಗವಹಿಸಿದ ಅಶ್ ಫಾನ ಮೊದಲಾದವರು ಎಸ್.ಎ.ಟಿ.ಎಲ್.ಪಿ.ಶಾಲೆ ಮಂಜೇಶ್ವರದ ವಿದ್ಯಾರ್ಥಿಗಳು.

Saturday 14 November 2015

ಮಕ್ಕಳ ದಿನಾಚರಣೆ ಮತ್ತು ಸನ್ಮಾನ ಸಮಾರಂಭ



           14-11-2015 ರಂದು ಮಕ್ಕಳ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳಿಗೆ ಬಹುಮಾನ ವಿತರಣೆ ಮತ್ತು ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಬೆಳಗ್ಗೆ 10 ಗಂಟೆಗೆ ಸರಿಯಾಗಿ ಸಭಾಕಾರ್ಯಕ್ರಮವು ಆರಂಭವಾಯಿತು. ಮುಖ್ಯೋಪಾಧ್ಯಾಯಿನಿ ಸುದತಿ ಟೀಚರ್ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿಗಳಾದ ನಂದಿಕೇಶನ್ ಮತ್ತು ಶಾಲಾ ಪ್ರಬಂಧಕರಾದ ಎಂ. ದಿನೇಶ್ ಶೆಣೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಕ್ಕಳಿಗೆ ದಿನಾಚರಣೆಯ ಶುಭ ಸಂದೇಶವನ್ನು ನೀಡಿದರು. ಮಾಜಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಪುತ್ತಬ್ಬ ಕುಂಜತ್ತೂರು, ಶಾಲೆಯಲ್ಲಿ ಮೊದಲು ಗಂಜಿ ಬೇಯಿಸುತ್ತಿದ್ದ ರತ್ನಮ್ಮ ಅವರಿಗೆ ಶಾಲು ಹೊದಿಸಿ, ಫಲಪುಷ್ಪ, ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು. ಶ್ರೀ ನಿತೀನ್ ಚಂದ್ರ ಪೈ ಅವರಿಗೆ ಕಾಣಿಕೆಯನ್ನು ನೀಡಿ ಆದರಿಸಲಾಯಿತು. ಶಾಲಾಮಟ್ಟದಲ್ಲಿ ನಡೆದ ಆಟೋಟ ಸ್ಪರ್ಧೆ ಮತ್ತು ಕಲೋತ್ಸವದಲ್ಲಿ ವಿಜೇತರಾದ ಮಕ್ಕಳಿಗೆ ಮತ್ತು ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮತ್ತು ವಿಜ್ಞಾನ ಮೇಳದಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ಮನೋರಮಾ ಟೀಚರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನೂತನ ವಾರ್ಡ್ ಸದಸ್ಯೆಯಾದ ಸುಪ್ರೀಯಾ ಶೆಣೈ, ನೆರೆಯ ವಾರ್ಡ್ ಸದಸ್ಯರಾದ ಅಬ್ದುಲ್ಲ ಗುಡ್ಡೆಕೇರಿ, ಪಿ.ಟಿ.ಎ. ಅಧ್ಯಕ್ಷರಾದ ಫರೀದ್ ಎಂ.ಪಿ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ತೇಜೇಶ್ ಕಿರಣ್ ರವರು ಜವಹರಲಾಲ್ ನೆಹರುವಿನ ಕುರಿತಾಗಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ದಿ.ವಿಟ್ಟಪ್ಪ ಶೆಣೈ ಮತ್ತು ನಿವೃತ್ತ ಶಿಕ್ಷಕಿ ಚಂದ್ರಕಲಾ ಭಾಯಿ ಇವರು ಕೊಡಮಾಡಿದ ನಗದು ಬಹುಮಾನವನ್ನು ವಿತರಿಸಲಾಯಿತು. ಕೊನೆಗೆ ಎಲ್ಲರಿಗೂ ಸಿಹಿತಿಂಡಿ ಹಂಚಲಾಯಿತು. ಅನುಸೂಯ ಟೀಚರ್ ಧನ್ಯವಾದವಿತ್ತರು. ಅಧ್ಯಾಪಕ ಶ್ರೀಕೃಷ್ಣ ಡಿ.ಕೆ. ಕಾರ್ಯಕ್ರಮವನ್ನು ನಿರೂಪಿಸಿದರು.

Thursday 5 November 2015

ಶಾಲಾ ಮಟ್ಟದ ಕಲೋತ್ಸವ



            29-10-2015 ಮತ್ತು 30-10-2015 ರಂದು ಶಾಲಾಮಟ್ಟದ ಕಲೋತ್ಸವ ಜರಗಿತು.29 ರಂದು ಬೆಳಗ್ಗೆ ಉದ್ಘಾಟನಾ ಸಮಾರಂಭ ನಡೆಯಿತು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಮನೋರಮಾ ಟೀಚರ್ ಉದ್ಘಾಟಿಸಿದರು. ಕಿರಿಯ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶುಭ ಹಾರೈಸಿದರು. ಪಿ.ಟಿ.ಎ. ಉಪಾಧ್ಯಕ್ಷರಾದ ನವೀನ್ ಅಡಪ ಉಪಸ್ಥಿತರಿದ್ದರು. ನಂತರ ಮಕ್ಕಳ ಕಂಠಪಾಠ, ಲಘುಸಂಗೀತ, ಕಥೆ ಹೇಳುವುದು, ಮಾಪಿಳ್ಲಪಾಟು, ಗುಂಪು ಸಂಗೀತ, ದೇಶಭಕ್ತಿಗೀತೆ ಸ್ಪರ್ಧೆಗಳು ಜರಗುದವು. ಮರುದಿನ ನೃತ್ಯ ಸ್ಪರ್ಧೆಗಳು ಜರಗಿದವು. ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಿದರು. ಮಕ್ಕಳು ಸ್ಪರ್ಧಾತ್ಮಕ ಮನೋಭಾವದಿಂದ ಭಾಗವಹಿಸಿದ್ದು ಕಲೋತ್ಸವಕ್ಕೆ ಹೆಚ್ಚಿನ ಮೆರುಗು ನೀಡಿತು.

ಶಾಲಾ ಮಟ್ಟದ ಕ್ರೀಡೋತ್ಸವ



           27-10-2015 ರಂದು ಶಾಲಾ ಮಟ್ಟದ ಕ್ರೀಡಾಕೂಟ ಜರಗಿತು. ಅಧ್ಯಾಪಕರಾದ ಮಹೇಶ ಕೆ. ಅವರು ಕ್ರೀಡಾಕೂಟದ ಜವಾಬ್ದಾರಿ ವಹಿಸಿದ್ದರು. ಹೆಚ್ಚಿನ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. ಶಾಲಾ ಮಟ್ಟದಲ್ಲಿ ವಿಜೇತರಾದವರನ್ನು ಉಪಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಯಿತು. 100ಮೀ, 50ಮೀ ಓಟ, ದೂರ ಜಿಗಿಯತ, ಸ್ಟೇಂಡಿಂಗ್ ಬೋಡ್ ಜಂಪ್ ಇತ್ಯಾದಿ ಸ್ಪರ್ಧೆಗಳು ಜರಗಿದವು.

ಶಾರದಾ ಪೂಜೆ


BEST P.T.A. AWARD


Sunday 11 October 2015

ಗಾಂಧೀಜಯಂತಿ ಆಚರಣೆ



            02-10-2015 ಗಾಂಧೀ ಜಯಂತಿಯನ್ನು ಕಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲಾ ವಿಭಾಗವು ಜಂಟಿಯಾಗಿ ಆಚರಿಸಲಾಯಿತು. ಈ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ಜರಗಿದವು. ಗಾಂಧೀಜಿಯವರ ಭಾವಾಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಗಾಂಧೀಜಿಯವರ ಆದರ್ಶಗಳನ್ನು ನೆನಪಿಸಿಕೊಳ್ಳಲಾಯಿತು. ಮುಖ್ಯೋಪಾಧ್ಯಾಯಿನಿ ಸುದತಿ ಬಿ. ಗಾಂಧೀ ಜಯಂತಿಯ ಸಂದೇಶವನ್ನು ನೀಡಿದರು. ಮಕ್ಕಳಿಗೆ ದೇಶಭಕ್ತಗೀತೆ, ಗಾಂಧಿ ಗೀತೆ ಹಾಡುವ ಸ್ಪರ್ಧೆ ಹಾಗೂ ತಕಲಿಯಿಂದ ನೂಲು ತೆಗೆಯುವ ಸ್ಪರ್ಧೆ ನಡೆಯಿತು. ವಿಜೇತ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಅಲ್ಲದೆ ಮುಖ್ಯವಾಗಿ ಈ ದಿನ ಶುಚಿತ್ವ ಆಂದೋಲನಕ್ಕೆ ಚಾಲನೆ ನೀಡಲಾಯಿತು. ಸರ್ವಧರ್ಮ ಪ್ರಾರ್ಥನೆ ನಡೆಯಿತು. ಮಕ್ಕಳು ಅಧ್ಯಾಪಕರು ಜೊತೆ ಸೇರಿ ಶಾಲಾ ಪರಿಸರವನ್ನು ಶುಚಿಗೊಳಿಸಿದರು.

Saturday 5 September 2015

ಶಿಕ್ಷಕರ ದಿನಾಚರಣೆ



          05-09-2015 ಶಿಕ್ಷಕ ದಿನದ ಅಂಗವಾಗಿ ದಿನಾಂಕ 04-09-2015 ಶುಕ್ರವಾರದಂದು ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಯಿತು. ಮೊದಲಿಗೆ ಮಕ್ಕಳು ಅಧ್ಯಾಪಕರಿಗೆ ಹೂ ನೀಡಿ ವಂದನೆ ಸಲ್ಲಿಸಿದರು. ಅಧ್ಯಾಪಕರಿಗೆ ಹಗ್ಗಜಗ್ಗಾಟ ಮತ್ತು ಅಧ್ಯಾಪಿಕೆಯರಿಗೆ ಬಾಂಬ್ ಇಂದ ಸಿಟಿ ಆಟವನ್ನು ಏರ್ಪಡಿಸಲಾಗಿತ್ತು. ನಂತರ ಸಭಾಕಾರ್ಯಕ್ರಮ ನಡೆಯಿತು. ಸುದತಿ ಟೀಚರ್ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ಪೌಢಶಾಲಾ ವಿಭಾಗದ ಹಿರಿಯ ಶಿಕ್ಷಕಿ ಕೃಷ್ಣ ಕುಮಾರಿ ಟೀಚರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಂತರ ಡಾ.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಪ್ರಿಪ್ರೈಮರಿ ನಿವೃತ್ತ ಶಿಕ್ಷಕಿಯಾದಂತಹ ವತ್ಸಲಾ ಟೀಚರ್, ಎಲ್.ಪಿ. ನಿವೃತ್ತ ಮುಖೋಪಾಧ್ಯಾಯಿನಿ ಸುಮತಿಭಾಯಿ ಟೀಚರ್ ಮತ್ತು ನಿವೃತ್ತ ಪೌಢಶಾಲಾ ಮುಖೋಪಾಧ್ಯಾಯರಾದಂತಹ ಶ್ರೀಧರ್ ಭಟ್ ಅವರನ್ನು ಸನ್ಮಾನಿಸಲಾಯಿತು. ಲಿಲ್ಲಿಭಾಯಿ ಟೀಚರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮುರಳಿ ಸರ್ ಧನ್ಯವಾದ ಸಮರ್ಪಿಸಿದರು.

Saturday 22 August 2015

ಓಣಂ ಆಚರಣೆ



               21-08-2015 ರಂದು ಓಣಂ ಹಬ್ಬದ ಆಚರಣೆ ಬಹಳ ವಿಜೃಂಭಣೆಯಿಂದ ಜರಗಿತು. ಮಕ್ಕಳು ಅಧ್ಯಾಪಕರು ಸೇರಿ ಅನಂತ ವಿಧ್ಯಾ ಸಭಾಂಗಣದಲ್ಲಿ ಬಹಳ ಉತ್ತಮವಾದ, ಆಕರ್ಷಕವಾದ ಪೂಕಳಂ ರಚಿಸಿದರು. ನಾಲ್ಕನೆಯ ತರಗತಿಯ ಕಿಶನ್ ಮಹಾಬಲಿ ವೇಷಧಾರಿಯಾಗಿಯೂ ಆತ್ಮಿಕ, ಪ್ರಜಿನ,  ವರ್ಷಿತ ಮತ್ತು ತನುಶ್ರೀ ತಿರುವಾದಿರ ವೇಷಧಾರಿಗಳಾಗಿ ಮಕ್ಕಳ ಗಮನ ಸೆಳೆದರು. ನಂತರ ಮಕ್ಕಳಿಗೆ ಓಣಂ ಹಬ್ಬದ ಹಿನ್ನೆಲೆ, ಮಹತ್ವವನ್ನು ತಿಳಿಸಲಾಯಿತು. ಓಣಂ ಸಂಬಂಧಿಸಿದ ವೀಡಿಯೋ ಪ್ರದರ್ಶಿಸಲಾಯಿತು. ಮಧ್ಯಾಹ್ನ ಓಣಂ ಸದ್ಯ ಜರಗಿತು. ಔತಣಕ್ಕೆ ಉಪ್ಪಿನಕಾಯಿ, ಪಚ್ಚಡಿ, ಪಲ್ಯ, ಗಸಿ, ಹಪ್ಪಳ, ಸಾರು, ಅನ್ನ, ಪಾಯಸ, ಇತ್ಯಾದಿ ಬಗೆಗಳಿದ್ದುವು. ಬೆಳಗ್ಗೆ ಎಲ್ಲಾ ಮಕ್ಕಳಿಗೆ ಹೋಳಿಗೆ ವಿತರಿಸಲಾಯಿತು.

Sunday 16 August 2015

ಸ್ವಾತಂತ್ರ್ಯ ದಿನಾಚರಣೆ



              15-08-2015 ಶನಿವಾರದಂದು ಸ್ವಾತಂತ್ರ್ಯ ದಿನಾಚರಣೆ ಬಹಳ ಯಶಸ್ವಿಯಾಗಿ ಜರಗಿತು. ಶಾಲಾ ಆಡಳಿತ ಮಂಡಳಿ ಪ್ರತಿನಿಧಿ ಎಂ. ಜೆ. ಕಿಣಿಯವರು ಧ್ವಜಾರೋಹಣ ಗೈದರು. ನಂತರ ಸಭಾಕಾರ್ಯಕ್ರಮ ಜರಗಿತು. ವಾರ್ಡ್ ಸದಸ್ಯರಾದ ಆನಂದ ಮಾಸ್ಟರ್, ಪಿ.ಟಿ.ಎ. ಅಧ್ಯಕ್ಷರು, ಎಂ.ಪಿ.ಟಿ.ಎ. ಅಧ್ಯಕ್ಷರು, ಲಿಲ್ಲಿಭಾಯಿ ಟೀಚರ್, ಮುಖೋಪಾಧ್ಯಾಯಿನಿ ಸುದತಿ ಬಿ. ಮೊದಲಾದವರು ಉಪಸ್ಥಿತರಿದ್ದರು. ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಛದ್ಮವೇಷ ಸ್ಪರ್ಧೆ, ದೇಶಭಕ್ತಿಗೀತೆ, ಭಾಷಣ ಮೊದಲಾದವುಗಳು ಜರಗಿದುವು.ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು.

Monday 10 August 2015

ಯುದ್ಧ ವಿರೋಧಿ ದಿನ

               09-08-2015 ರಂದು ಹಿರೋಶಿಮ ಮತ್ತು ನಾಗಸಾಕಿ ದುರಂತದ ನೆನಪಿಗಾಗಿ ಯುದ್ಧ ವಿರೋಧಿ ದಿನವನ್ನಾಗಿ ಆಚರಿಸಲಾಯಿತು. ಈ ದುರಂತದ ಪರಿಣಾಮಗಳು ಯುದ್ಧದಿಂದ ಉಂಟಾಗುವ ಭೀಕರ ಪರಿಣಾಮಗಳ ಕುರಿತು  ವಿವರಿಸಲಾಯಿತು. ಪ್ರತಿಯೊಬ್ಬರೂ ಶಾಂತಿಯನ್ನು ಬಯಸುವ ಸಂದೇಶವನ್ನು ನೀಡಲಾಯಿತು. ಯುದ್ಧಕ್ಕೆ ಎದುರಾದ ಘೋಷಣಾ ವಾಕ್ಯಗಳನ್ನು ತಯಾರಿಸಲಾಯಿತು.

Wednesday 22 July 2015

ಚಾಂದ್ರ ದಿನ



             21-07-2015 ರಂದು ಚಾಂದ್ರ ದಿನಾಚರಣೆ ಕಾರ್ಯಕ್ರಮ ಜರಗಿತು. ನಾಲ್ಕನೇ ತರಗತಿಯ ಮಕ್ಕಳಿಗೆ ಚಾಂದ್ರದಿನದ ಮಹತ್ವವನ್ನು, ಸಾಧನೆಗಳನ್ನು ಅಧ್ಯಾಪಕ ತೇಜಸ್ ಕಿರಣ್ ತಿಳಿಸಿದರು. ಅಪರಾಹ್ನ 3 ಗಂಟೆಗೆ ಚಾಂದ್ರಯಾನದ ಸಿ.ಡಿ. ವೀಕ್ಷಿಸಲು ಅವಕಾಶ ನೀಡಲಾಯಿತು. ನಾಲ್ಕನೇ ತರಗತಿಯಲ್ಲಿ ಪ್ರಾಜೆಕ್ಟರ್, ಸ್ಕ್ರೀನ್ ಅಳವಡಿಸಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಯಿತು. ಚಂದ್ರಲೋಕ್ಕೆ ಪ್ರಯಾಣದ ವಿಶಿಷ್ಟ ಕೌತುಕಗಳನ್ನು ನೋಡಲು ಸಾಧ್ಯವಾಯಿತು. ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. 

Monday 13 July 2015

ವನಮಹೋತ್ಸವ



              ಎಸ್.ಎ.ಟಿ. ಶಾಲೆಯ ಆಡಳಿತ ಮಂಡಳಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಹಾಗೂ ಶಾಲಾ ಪರಿಸರ ಸಂಘದ ಜಂಟಿ ಆಶ್ರಯದಲ್ಲಿ ಸಾಮೂಹಿಕ ಗಿಡ ನೆಡುವ ವನಮಹೋತ್ಸವ ಕಾರ್ಯಕ್ರಮ 12-07-2015 ರಂದು ಜರಗಿತು. ಸಭಾಧ್ಯಕ್ಷತೆಯನ್ನು ಮಂಗಳೂರಿನ ಟಿ. ಗಣಪತಿ ಪೈ ವಹಿಸಿ ಉಧ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀಮದ್ ಅನಂತೇಶ್ವರ ದೇವಳದ ಅಧ್ಯಕ್ಷ ಡಾ. ಕೆ.ಅನಂತ ಕಾಮತ್, ಎಂ. ವಿಠಲದಾಸ್ ಭಟ್, ಮನೋರಮ ಕಿಣಿ, ಲಿಲ್ಲಿ ಟೀಚರ್, ಪುತ್ತಬ್ಬ ಮೊದಲಾದವರು ಉಪಸ್ಥಿತರಿದ್ದರು. ಕೆ. ಗುರುದತ್ತ ಕಾಮತ್ ಸ್ವಾಗತಿಸಿ ಪ್ರಬಂಧಕರಾದ ದಿನೇಶ್ ಶೆಣೈ ವಂದಿಸಿದರು. ವೀರೇಶ್ವರ ಭಟ್ ನಿರೂಪಿಸಿದರು. ಊರ ಪರವೂರ ಅಭಿಮಾನಿಗಳು, ಮಕ್ಕಳು ಗಿಡಗಳನ್ನು ನೆಟ್ಟು ಸಂರಕ್ಷಿಸುವ ಪಣತೊಟ್ಟರು.

Sunday 5 July 2015

ಪಿ.ಟಿ.ಎ. ಮಹಾಸಭೆ



          ತಾ. 04-07-2015 ಶನಿವಾರ ಬೆಳಗ್ಗೆ 10.30 ಕ್ಕೆ ಎಸ್.ಎ.ಟಿ.ಎಲ್.ಪಿ. ಶಾಲೆಯ ಪಿ.ಟಿ.ಎ. ಮಹಾಸಭೆ ಜರಗಿತು. ಪಿ.ಟಿ.ಎ. ಅಧ್ಯಕ್ಷ ಪುತ್ತಬ್ಬ ಕುಂಜತ್ತೂರು ಅಧ್ಯಕ್ಷತೆ ವಹಿಸಿದರು. ಆಡಳಿತ ಮಂಡಳಿಯ ಪರವಾಗಿ ಲಿಲ್ಲಿ ಟೀಚರ್ ಉಪಸ್ಥಿತರಿದ್ದರು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅನುಸೂಯ ಟೀಚರ್ ಸ್ವಾಗತಿಸಿದರು. ತೇಜಸ್ ಕಿರಣ್ ವರದಿ ಮಂಡಿಸಿದರು. ಮುಖ್ಯೋಪಾಧ್ಯಾಯಿನಿ ಸುದತಿ ಬಿ. 2014-2015 ರ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಹೆತ್ತವರು ಕೈ ಚಪ್ಪಾಳೆಯ ಮೂಲಕ ಅಂಗೀಕರಿಸಿದರು. ಲಿಲ್ಲಿ ಟೀಚರ್ ಕೆಲವು ಮಾಹಿತಿಗಳನ್ನು ಹೆತ್ತವರಿಗೆ ನೀಡಿದರು.
      ನಂತರ 2015-2016 ನೇ ಸಾಲಿನ ಪಿ.ಟಿ.ಎ., ಎಮ್.ಪಿ.ಟಿ.ಎ. ಹಾಗೂ ಗಂಜಿ ಸಮಿತಿಯನ್ನು ಹೊಸತಾಗಿ ಆರಿಸಲಾಯಿತು. ಪಿ.ಟಿ.ಎ. ಅಧ್ಯಕ್ಷರಾಗಿ ಫರೀದ್ ಎಮ್.ಪಿ. ಉಪಾಧ್ಯಕ್ಷರಾಗಿ ನವೀನ್ ಅಡಪ ಹಾಗೂ ಎಮ್.ಪಿ.ಟಿ.ಎ. ಅಧ್ಯಕ್ಷರಾಗಿ ವೀಣಾ ಹಾಗೂ ಗಂಜಿ ಸಮಿತಿ ಸಂಚಾಲಕರಾಗಿ ಅಬ್ದುಲ್ ಖಾದರ್ ಆಯ್ಕೆಯಾದರು. ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಶ್ರೀಕೃಷ್ಣ ಡಿ.ಕೆ. ನಿರೂಪಿಸಿದರು.

Saturday 27 June 2015

ವಿಶ್ವ ಮಾದಕವಸ್ತು ವಿರೋಧಿ ದಿನಾಚರಣೆ



             26.06.2015ರಂದು ಮಾದಕದ್ರವ್ಯ ವಿರೋಧಿ ದಿನವನ್ನು ಆಚರಿಸಲಾಯಿತು. ಅಪರಾಹ್ನ 3 ಗಂಟೆಗೆ ಸಭಾಂಗಣದಲ್ಲಿ ಅಸೆಂಬ್ಲಿ ಸೇರಲಾಯಿತು. ಅಸೆಂಬ್ಲಿಯಲ್ಲಿ ಅಧ್ಯಾಪಕ ಮಹೇಶ ಕೆ. ಪ್ರತಿಜ್ಞೆ ಬೋಧಿಸಿದರು. ಮುಖ್ಯೋಪಾಧ್ಯಾಯಿನಿ ಸುದತಿ ಬಿ. ಮಾದಕ ದ್ರವ್ಯದಿಂದ ಉಂಟಾಗುವ ತೊಂದರೆಗಳನ್ನು ವಿವರಿಸಿದರು ಹಾಗೂ ಅದರಿಂದ ದೂರವಿರುವಂತೆ ಕರೆ ನೀಡಿದರು. ಮಕ್ಕಳಿಗೆ ಪ್ರೋಜೆಕ್ಟರ್ ಮೂಲಕ ಮಾದಕವಸ್ತುಗಳು ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳನ್ನು ವಿವರಿಸಲಾಯಿತು. 

Thursday 25 June 2015

ವಾಚನಾ ಸಪ್ತಾಹ



            ಕೆ.ಎನ್. ಪಣಿಕ್ಕರ್ ಸಂಸ್ಮರಣಾರ್ಥ ಜರಗುವ ವಾಚನಾ ಸಪ್ತಾಹದ ಉಧ್ಘಾಟನೆ 19.06.2015 ರಂದು ಅನಂತ ವಿಧ್ಯಾ ಸಭಾಂಗಣದಲ್ಲಿ ಜರಗಿತು. ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಉದಯ ಶಂಕರ ಭಟ್ ಪುಸ್ತಕಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಅಲ್ಲದೆ ಓದಿನ ಮಹತ್ವ ಹಾಗೂ ಪ್ರಯೋಜನಗಳನ್ನು ತಿಳಿಸಿದರು. ಪ್ರೌಢಶಾಲಾ ಕನ್ನಡ ಶಿಕ್ಷಕಿ ಪರಮೇಶ್ವರಿ ಟೀಚರ್ ಮುಖ್ಯ ಅತಿಥಿಯಾಗಿ ಶುಭ ಹಾರೈಸಿದರು. ಮುಖ್ಯೋಪಾಧ್ಯಾಯಿನಿ ಸುದತಿ ಬಿ. ಹಾಗೂ SRG ಸಂಚಾಲಕಿ ಅನುಸೂಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಾಪಕ ತೇಜಸ್ ಕಿರಣ್ ಪಣಿಕ್ಕರ್ ಬಗ್ಗೆ ಕಿರು ಮಾಹಿತಿ ನೀಡಿದರು. ಮುಖ್ಯೋಪಾಧ್ಯಾಯಿನಿ ಸ್ವಾಗತಿಸಿ ಶುಭಹಾರೈಸಿದರು. ಮಹೇಶ್ ಕೆ. ವಂದಿಸಿ ಶ್ರೀಕೃಷ್ಣ ಡಿ.ಕೆ. ನಿರೂಪಿಸಿದರು. ನಂತರ ಮಕ್ಕಳಿಂದ ಕತೆ, ಕವನ ವಾಚನ ಇತ್ಯಾದಿ ಕಾರ್ಯಕ್ರಮಗಳು ಜರಗಿದವು.
        22.06.2015 ರಂದು ಪುಸ್ತಕ ಪ್ರದರ್ಶನ ಜರಗಿತು. ತರಗತಿಯಲ್ಲಿ ಒಪ್ಪವಾಗಿ ಜೋಡಿಸಿದ ಪುಸ್ತಕಗಳ ಮಳಿಗೆಯನ್ನು ಮುಖ್ಯೋಪಾಧ್ಯಾಯಿನಿ ಸುದತಿ ಬಿ. ಉಧ್ಘಾಟಿಸಿದರು. ಪ್ರತಿ ತರಗತಿ ಮಕ್ಕಳಿಗೂ ಪುಸ್ತಕ ಪ್ರದರ್ಶನವನ್ನು ನೋಡಲು ಅವಕಾಶ ನೀಡಲಾಯಿತು. ನೋಡಿದ ಪುಸ್ತಕಗಳ ಹೆಸರನ್ನು ನೆನಪಿರಿಸಿ ಹೇಳಲು ಸೂಚನೆ ನೀಡಲಾಯಿತು.

ಬಾಲ ಸಭೆ


Thursday 11 June 2015

C.P.T.A. Meeting



              10.06.2015 ರಂದು ಒಂದನೇ ತರಗತಿಯಿಂದ ನಾಲ್ಕನೇ ತರಗತಿಗಳ ವರೆಗಿನ CPTA ಸಭೆ ಜರಗಿತು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ತರಗತಿಯ ಚಟುವಟಿಕೆಗಳ ಕ್ರಮ, ಮನೆಯಲ್ಲಿ ನಡೆಯುವ ಮುಂದುವರಿದ ಚಟುವಟಿಕೆಯಲ್ಲಿ ಹೆತ್ತವರ ಪಾತ್ರ, ತರಗತಿಯ ಶಿಸ್ತಿನ ಕ್ರಮ, ಸಮವಸ್ತ್ರ, ಸಂಗ್ರಹಕ್ಕೆ ಹೆತ್ತವರು ಮಾಡಬೇಕಾದ ಸಹಾಯ, ಶಾಲೆಯ ನಿಯಮಗಳು ಇವೇ ಮೊದಲಾದ ವಿಚಾರಗಳ ಕುರಿತು ಆಯಾ ತರಗತಿಯ ಅಧ್ಯಾಪಕರು  ಹೆತ್ತವರಿಗೆ ಮಾಹಿತಿ ನೀಡಿದರು.

Saturday 6 June 2015

ವಿಶ್ವ ಪರಿಸರ ದಿನ



             05.06.2015 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಬೆಳಗ್ಗೆ 10 ಗಂಟೆಗೆ ಸರಿಯಾಗಿ ಅಸೆಂಬ್ಲಿ ಸೇರಲಾಯಿತು. ಮುಖ್ಯೋಪಾಧ್ಯಾಯಿನಿ ಸುದತಿ ಬಿ. ಪರಿಸರ ದಿನದ ಮಹತ್ವವನ್ನು ತಿಳಿಸಿ  ಗಿಡಗಳನ್ನು ಉಳಿಸಿ-ಬೆಳೆಸಬೇಕಾದ ಅನಿವಾರ್ಯತೆಯನ್ನು ತಿಳಿಸಿದರು. ಅಧ್ಯಾಪಕ ಮಹೇಶ ಕೆ. ಪರಿಸರಗೀತೆಯನ್ನು ಹಾಡಿಸಿದರು. ಮಕ್ಕಳು ಉತ್ಸಾಹದಿಂದ ಹಾಡಿದರು. ನಂತರ ಪರಿಸರ ಉಳಿಸಿ ಬೆಳೆಸುವ ಪ್ರತಿಜ್ಞೆಯನ್ನು ಬೋಧಿಸಲಾಯಿತು. ಬಳಿಕ ಸುದತಿ ಟೀಚರ್ ಗಿಡಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಅಪರಾಹ್ನ 3 ಗಂಟೆಗೆ ಸರಿಯಾಗಿ ಮೂರು ಮತ್ತು ನಾಲ್ಕನೇ ತರಗತಿಯ ಎಲ್ಲಾ ಮಕ್ಕಳಿಗೆ ಸರಕಾರದಿಂದ ಒದಗಿಸಲ್ಪಟ್ಟ ಗಿಡಗಳನ್ನು ವಿತರಿಸಲಾಯಿತು. ಗಿಡಗಳನ್ನು ನೆಟ್ಟು ಬೆಳೆಸುವ ಜವಾಬ್ದಾರಿಯ ಬಗ್ಗೆ ತಿಳಿ ಹೇಳಲಾಯಿತು. ಶಾಲಾ ಪರಿಸರದಲ್ಲಿ ಕೆಲವು ಗಿಡಗಳನ್ನು ನೆಡಲಾಯಿತು.ಗಿಡಗಳನ್ನು ನೋಡಿಕೊಳ್ಳಲು ನಾಲ್ಕನೇ ತರಗತಿ ಮಕ್ಕಳಿಗೆ ಜವಾಬ್ದಾರಿ ವಹಿಸಲಾಯಿತು.

Tuesday 2 June 2015

ಪ್ರವೇಶೋತ್ಸವ 2015



           01.06.2015 ಸೋಮವಾರ ಪ್ರವೇಶೋತ್ಸವದೊಂದಿಗೆ 2015-16 ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಂಡಿತು. ಬೆಳಗ್ಗೆ 10 ಗಂಟೆಗೆ ಸರಿಯಾಗಿ ಅಸೆಂಬ್ಲಿ ಸೇರಲಾಯಿತು. ಪ್ರತಿಜ್ಞೆಯನ್ನು ಬೋಧಿಸಲಾಯಿತು. ನಂತರ ಹೊಸತಾಗಿ ಶಾಲೆಗೆ ಸೇರಿದ ಮಕ್ಕಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಬ್ಯಾಂಡ್ ಸೆಟ್ ವಿಶೇಷ ಮೆರುಗು ನೀಡಿತು.
        ಬಳಿಕ ಅನಂತವಿಧ್ಯಾ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ಜರಗಿತು. ವಾರ್ಡಿನ ಸದಸ್ಯ ಆನಂದ ಮಾಸ್ತರ್ ಬಲೂನು ಸಿಡಿಸುವ ಮೂಲಕ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ನಂತರ ಪ್ರವೇಶೋತ್ಸವ ಗೀತೆಯನ್ನು ಹಾಡಲಾಯಿತು. ಒಂದನೇ ತರಗತಿಯ ಮಕ್ಕಳಿಗೆ ಸಮವಸ್ತ್ರ ಹಾಗೂ 'ಕಲಿಕಾ ಕಿಟ್ ' ನ್ನು ಸಾಂಕೇತಿಕವಾಗಿ ಈ ಸಂದರ್ಭದಲ್ಲಿ ವಿತರಿಸಲಾಯಿತು. ಶಾಲಾ ಪ್ರಬಂಧಕ ದಿನೇಶ್ ಶೆಣೈ ಅಧ್ಯಕ್ಷತೆ ವಹಿಸಿದರು. ಶ್ರೀಮತಿ ಲಿಲ್ಲಿ  ಟೀಚರ್ ಶುಭ ಹಾರೈಸಿದರು. ಮುಖ್ಯೋಪಾಧ್ಯಾಯಿನಿ ಸುದತಿ ಬಿ. ಸಾಮಾನ್ಯ ಸೂಚನೆಗಳನ್ನು ನೀಡಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಮನೋರಮ ಕಿಣಿ ಉಪಸ್ಥಿತರಿದ್ದರು. ಶ್ರೀಕೃಷ್ಣ ಡಿ.ಕೆ. ಸ್ವಾಗತಿಸಿ ದಾಸಪ್ಪ ರೈ ವಂದಿಸಿದರು. ವಿರೇಶ್ವರ ಭಟ್ ನಿರೂಪಿಸಿದರು.
        ಸಭಾಕಾರ್ಯಕ್ರಮದ ಬಳಿಕ ಮಕ್ಕಳಿಗೆ ಕೆಲವು ಹಾಡುಗಳು ಹಾಗೂ ವೈವಿಧ್ಯಮಯ ಚಟುವಟಿಕೆಗಳು ಜರಗಿದವು. ಸಿಹಿತಿಂಡಿ ವಿತರಿಸಲಾಯಿತು. ಹೆತ್ತವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Saturday 21 March 2015

ಹಿರಿಮೆ ಉತ್ಸವ



             2014-2015 ನೇ ಸಾಲಿನ 'ಹಿರಿಮೆ ' ಕಾರ್ಯಕ್ರಮ 18-03-2015 ರಂದು 'ಅನಂತವಿಧ್ಯಾ' ಸಭಾಂಗಣದಲ್ಲಿ ಜರಗಿತು. ಬೆಳಗ್ಗೆ 10.30 ಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಯಿತು. ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಅನುಸೂಯ ಟೀಚರ್ ಅತಿಥಿಗಳನ್ನು ಸ್ವಾಗತಿಸಿದರು. PTA ಅಧ್ಯಕ್ಷ ಪುತ್ತಬ್ಬ ಕುಂಜತ್ತೂರು ಸಭಾಧ್ಯಕ್ಷತೆ ವಹಿಸಿದರು. ಹಿರಿಯರಾದ ಲಿಲ್ಲಿ ಟೀಚರ್ ಹಿರಿಮೆ ಕಾರ್ಯಕ್ರಮವನ್ನು ಔಪಚಾರಿಕವಾಗಿ ಉಧ್ಘಾಟಿಸಿದರು. ಕಾರ್ಯಕ್ರಮಗಳ ಛಾಯಾಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಉಧ್ಘಾಟಿಸಲಾಯಿತು. 2014-15 ನೇ ಸಾಲಿನಲ್ಲಿ ಜರಗಿದ ವಿವಿಧ ಕಾರ್ಯಕ್ರಮಗಳ ಕಿರು ನೋಟವನ್ನು ಹೆತ್ತವರಿಗೆ ಪ್ರೋಜೆಕ್ಟರ್ ಮೂಲಕ ತೋರಿಸಲಾಯಿತು. ನಂತರ ಆಯಾ ತರಗತಿಗಳಲ್ಲಿ ಪ್ರದರ್ಶಿಸಲಾದ ಕಲಿಕೋಪಕರಣಗಳನ್ನು ಹಾಗೂ ಮಕ್ಕಳ ಉತ್ಪನ್ನಗಳನ್ನು ವೀಕ್ಷಿಸಲು ಅವಕಾಶ ನೀಡಲಾಯಿತು. ಹೆತ್ತವರು ಪ್ರದರ್ಶನ ವೀಕ್ಷಿಸಿ ತಮ್ಮ ಅಭಿಪ್ರಾಯವನ್ನು ಪುಸ್ತಕದಲ್ಲಿ ದಾಖಲಿಸಿದರು. ನಂತರ ಸಭಾಕಾರ್ಯಕ್ರಮ ಮುಂದುವರಿಯಿತು. ಪ್ರೌಢಶಾಲೆ ಮುಖೋಪಾಧ್ಯಾಯಿನಿ ಮನೋರಮ ಕಿಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಮುಖೋಪಾಧ್ಯಾಯಿನಿ ಸುದತಿ ಬಿ. ಮುಂದಿನ ವರ್ಷದ ಸಾಮಾನ್ಯ ಯೋಜನೆಗಳು, ಈ ವರ್ಷದ ಹಿರಿಮೆಗಳ ಬಗ್ಗೆ ಸಂಕ್ಷಿಪ್ತ ವಿವರಗಳನ್ನು ನೀಡಿದರು. ಹೆತ್ತವರು ಹೆಚ್ಚಿನ ಸಹಕಾರ ನೀಡುವಂತೆ ಕೇಳಿಕೊಂಡರು. ಹೆತ್ತವರ ಪರವಾಗಿ ಕಿರಣ್ ಕುಮಾರ್ ಕೆಲವು ಸಲಹೆಗಳನ್ನು ನೀಡಿದರು. PTA ಪದಾಧಿಕಾರಿಗಳಾದ ಫರೀದ್, ನವೀನ್ ಅಡಪ್ಪ, MPTA ಅಧ್ಯಕ್ಷೆ ಶಾರದಾ ಉಪಸ್ಥಿತರಿದ್ದರು. ಹೆತ್ತವರಿಗೆ ಲಘ ಉಪಹಾರ ನೀಡಲಾಯಿತು. ಮಹೇಶ ಕೆ. ವಂದಿಸಿ, ಶ್ರೀಕೃಷ್ಣ ಡಿ.ಕೆ. ನಿರೂಪಿಸಿದರು. ಶಿಕ್ಷಕ ತೇಜಸ್ ಕಿರಣ್ ಸಹಕರಿಸಿದರು.

ನರ್ಸರಿ ಶಾಲಾ ಕಲಿಕೋಪಕರಣಗಳು


Monday 23 February 2015

ಅಬಾಕಸ್ ತರಗತಿ



         21-02-2015 ರಂದು ನಮ್ಮ ಶಾಲೆಯಲ್ಲಿ 'ಅಬಾಕಸ್' ತರಗತಿ ಆರಂಭಿಸಲಾಯಿತು. ಅಪರಾಹ್ನ 2 ಗಂಟೆಗೆ ಸರಿಯಾಗಿ ಜರಗಿದ ಸಭಾ ಕಾರ್ಯಕ್ರಮವನ್ನು ಲಿಲ್ಲೀ ಟೀಚರ್ ರವರು ಉಧ್ಘಾಟಿಸಿದರು. ಮುಖ್ಯೋಪಾಧ್ಯಾಯಿನಿ ಸುದತಿ ಬಿ. ಯವರು ಸ್ವಾಗತಿಸಿದರು. ಅಬಾಕಸ್ ತರಗತಿ ನಡೆಸುವ ಅಧ್ಯಾಪಕರಾದ ಶ್ರೀಯುತ ಉದಯ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ತರಗತಿಯ ಕುರಿತಾಗಿ ವಿವರಣೆ ನೀಡಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಮನೋರಮ ಕಿಣಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಉದಯ ಕುಮಾರ್ ತರಗತಿ ನಡೆಸಿದರು. ಸುಮಾರು 40 ವಿದ್ಯಾರ್ಥಿಗಳು ಆರಂಭದ ದಿನ ಭಾಗವಹಿಸಿದರು.

Wednesday 18 February 2015

ಶೈಕ್ಷಣಿಕ ಪ್ರವಾಸ



             ನಾಲ್ಕನೆಯ ತರಗತಿಯ ಮಕ್ಕಳಿಗೆ ಶಾಲಾ ಪ್ರವಾಸ ಏರ್ಪಡಿಸಿಲಾಯಿತು. 59 ಮಕ್ಕಳು ಹಾಗೂ 7 ಅಧ್ಯಾಪಕರು ಒಟ್ಟಾಗಿ 9 ಗಂಟೆಗೆ ಶಾಲೆಯಿಂದ ಹೊರಟು ಮಂಗಳೂರಿಗೆ ಬಂದೆವು. ಬೆಳಗ್ಗೆ ಕದ್ರಿ ಪಾರ್ಕ್ ನಲ್ಲಿ ಉಪಹಾರ ಮುಗಿಸಿದೆವು. ಅಲ್ಲಿಂದ ಬಿಜೈನಲ್ಲಿರುವ ಪುರಾತನ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದೆವು. ಅಲ್ಲಿರುವ ಪುರಾತನ ವಸ್ತುಗಳನ್ನು ಮಕ್ಕಳು ಆಸಕ್ತಿಯಿಂದ ವೀಕ್ಷಿಸಿದರು. ನಂತರ ಎಯ್ಯಾಡಿಯಲ್ಲಿರುವ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದೆವು. ಹೊಸದಿಗಂತ ಪ್ರೆಸ್, ಪ್ಲಾಸ್ಟಿಕ್ ವಸ್ತುಗಳ ತಯಾರಿ, ಕಬ್ಬಿಣದ ಡಬ್ಬ ತಯಾರಿ ಮತ್ತು ಆಹಾರ ವಸ್ತುಗಳನ್ನು ತಯಾರಿಸುವ ಕೈಗಾರಿಕೆಗಳನ್ನು ಸಂದರ್ಶಿಸಿದೆವು. ಅಲ್ಲಿನ ಕೆಲಸ ಕಾರ್ಯಗಳ ವಿಧಾನವನ್ನು ತಿಳಿದುಕೊಂಡರು. ಮಧ್ಯಾಹ್ನದ ಊಟವನ್ನು ಅಲ್ಲೇ ಸಮೀಪದ ಸಭಾಂಗಣದಲ್ಲಿ ಪೂರೈಸಲಾಯಿತು. ಅಲ್ಲಿಂದ ಪಿಲಿಕುಳ ಮೃಗಾಲಯವನ್ನು ಸಂದರ್ಶಿಸಿದೆವು. ಅಲ್ಲಿ ಪ್ರಾಣಿಗಳು, ಪಕ್ಷಿಗಳು ಮತ್ತು ಉರಗಗಳನ್ನು ವೀಕ್ಷಿಸಿದೆವು. ಬಳಿಕ ಪಿಲಿಕುಳ ಕಲಾ ಗ್ರಾಮಕ್ಕೆ ಭೇಟಿ ನೀಡಿದೆವು. ಅಲ್ಲಿ ಮಡಿಕೆ ತಯಾರಿ, ಅವಲಕ್ಕಿ ತಯಾರಿ, ಎತ್ತಿನ ಗಾಣ, ಕಬ್ಬಿಣ ಕೆಲಸ, ಕೈ ಮಗ್ಗ ಮತ್ತು ಬೆತ್ತದ ಪಿಠೋಪಕರಣಗಳ ತಯಾರಿ ಇತ್ಯಾದಿಗಳನ್ನು ವೀಕ್ಷಿಸಿದೆವು. ನಂತರ 4 ಗಂಟೆಗೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ತಲಪಿದೆವು. ಅಲ್ಲಿ ಅನೇಕ ವಿಜ್ಞಾನದ ಕೌತುಕಗಳು, ವಸ್ತುಗಳು ಮತ್ತು 3ಡಿ ಪ್ರದರ್ಶನವನ್ನು ವೀಕ್ಷಿಸಿದೆವು. 5.30 ಕ್ಕೆ ಸರಿಯಾಗಿ ಊರಿಗೆ ಹೊರಟೆವು. ಒಟ್ಟಿನಲ್ಲಿ ಪ್ರವಾಸ ಮಕ್ಕಳಿಗೂ, ಅಧ್ಯಾಪಕರಿಗೂ ಉತ್ತಮ ಅನುಭವಗಳನ್ನು ನೀಡಿತು.

Thursday 12 February 2015

ಮೆಟ್ರಿಕ್ ಶಿಬಿರ



                10-02-2015 ನೇ ಮಂಗಳವಾರ ನಮ್ಮ  ಶಾಲೆಯಲ್ಲಿ ಮೆಟ್ರಿಕ್ ಶಿಬಿರ ಜರಗಿತು. ಬೆಳಗ್ಗೆ 10 ಗಂಟೆಗೆ ಸರಿಯಾಗಿ ಶಾಲಾ ಮುಖೋಪಾಧ್ಯಾಯಿನಿ ಸುದತಿ ಬಿ. ಯವರು ಶಿಬಿರವನ್ನು ಉಧ್ಘಾಟಿಸಿ ಮಾತನಾಡಿದರು. ಶಿಬಿರದ ಉದ್ದೇಶ ಹಾಗೂ ಚಟುವಟಿಕೆಗಳ ಕಿರು ವಿವರಣೆ ನೀಡಿದರು. ನಂತರ ಅಧ್ಯಾಪಕರಾದ ತೇಜಸ್ ಕಿರಣ್ ತರಗತಿ ನಡೆಸಿಕೊಟ್ಟರು. ಪದ್ಮಿನಿ, ಗುಲಾಬಿ, ಶ್ರೀಕೃಷ್ಣ ಡಿ.ಕೆ. ಮೊದಲಾದ ಅಧ್ಯಾಪಕರು ಸಹಕಾರ ನೀಡಿದರು. ಶಿಬಿರದಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. ಅಳತೆ, ಭಾರ, ಒಳಹಿಡಿವು ಮೊದಲಾದವುಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಲಾಯಿತು.

Wednesday 4 February 2015

"ಅಮ್ಮ ತಿಳಿಯಲು''

             ಮಂಜೇಶ್ವರ ಬಿ.ಆರ್.ಸಿ. ವತಿಯಿಂದ ಹಿಂದುಳಿದ ವಿಭಾಗದ ಮುಸ್ಲಿಂ ಮಕ್ಕಳ ತಾಯಂದಿರಿಗೆ ಒಂದು ದಿನದ ತರಬೇತಿಯಾದ ಅಮ್ಮ ತಿಳಿಯಲು ಕಾರ್ಯಕ್ರಮ ತಾ. 28-01-2015 ಬುಧವಾರ ಮಂಜೇಶ್ವರ ಎಸ್.ಎ.ಟಿ. ಶಾಲೆಯಲ್ಲಿ ಬೆಳಗ್ಗೆ 10 ಗಂಟೆಗೆ ಆರಂಭಗೊಂಡಿತು. ಎಸ್.ಎ.ಟಿ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮನೋರಮ ಕಿಣಿ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಸುದತಿ ಬಿ. ಯವರು ಶುಭಾಸಂಶನೆ ಗೈದರು. ಸಂಪನ್ಮೂಲ ವ್ಯಕ್ತಿಯಾದ ಬಿ.ಪಿ.ಒ. ವಿಜಯ್ ಕುಮಾರ್ ತರಗತಿ ನಡೆಸಿಕೊಟ್ಟರು. ಸಹಾಯಕರಾದ ಉಷಾ ವಿನ್ಸೆಂಟ್, ಸಂಜುಮೋಲ್ ಜೋಸ್ ಟೀಚರ್, ಸುಮತಿ ಟೀಚರ್, ಅನುಸೂಯ ಹಾಗೂ ಪದ್ಮಿನಿ ಟೀಚರ್ ರವರು ಉಪಸ್ಥಿತರಿದ್ದರು.

ಗಣರಾಜ್ಯೋತ್ಸವ