29-10-2015
ಮತ್ತು 30-10-2015 ರಂದು ಶಾಲಾಮಟ್ಟದ ಕಲೋತ್ಸವ ಜರಗಿತು.29 ರಂದು ಬೆಳಗ್ಗೆ ಉದ್ಘಾಟನಾ ಸಮಾರಂಭ ನಡೆಯಿತು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ
ಮನೋರಮಾ ಟೀಚರ್ ಉದ್ಘಾಟಿಸಿದರು. ಕಿರಿಯ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶುಭ
ಹಾರೈಸಿದರು. ಪಿ.ಟಿ.ಎ. ಉಪಾಧ್ಯಕ್ಷರಾದ ನವೀನ್ ಅಡಪ ಉಪಸ್ಥಿತರಿದ್ದರು. ನಂತರ ಮಕ್ಕಳ ಕಂಠಪಾಠ,
ಲಘುಸಂಗೀತ, ಕಥೆ ಹೇಳುವುದು, ಮಾಪಿಳ್ಲಪಾಟು, ಗುಂಪು ಸಂಗೀತ, ದೇಶಭಕ್ತಿಗೀತೆ ಸ್ಪರ್ಧೆಗಳು ಜರಗುದವು.
ಮರುದಿನ ನೃತ್ಯ ಸ್ಪರ್ಧೆಗಳು ಜರಗಿದವು. ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಆಸಕ್ತಿಯಿಂದ
ಭಾಗವಹಿಸಿದರು. ಮಕ್ಕಳು ಸ್ಪರ್ಧಾತ್ಮಕ ಮನೋಭಾವದಿಂದ ಭಾಗವಹಿಸಿದ್ದು ಕಲೋತ್ಸವಕ್ಕೆ ಹೆಚ್ಚಿನ ಮೆರುಗು
ನೀಡಿತು.
No comments:
Post a Comment