Saturday 14 November 2015

ಮಕ್ಕಳ ದಿನಾಚರಣೆ ಮತ್ತು ಸನ್ಮಾನ ಸಮಾರಂಭ           14-11-2015 ರಂದು ಮಕ್ಕಳ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳಿಗೆ ಬಹುಮಾನ ವಿತರಣೆ ಮತ್ತು ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಬೆಳಗ್ಗೆ 10 ಗಂಟೆಗೆ ಸರಿಯಾಗಿ ಸಭಾಕಾರ್ಯಕ್ರಮವು ಆರಂಭವಾಯಿತು. ಮುಖ್ಯೋಪಾಧ್ಯಾಯಿನಿ ಸುದತಿ ಟೀಚರ್ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿಗಳಾದ ನಂದಿಕೇಶನ್ ಮತ್ತು ಶಾಲಾ ಪ್ರಬಂಧಕರಾದ ಎಂ. ದಿನೇಶ್ ಶೆಣೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಕ್ಕಳಿಗೆ ದಿನಾಚರಣೆಯ ಶುಭ ಸಂದೇಶವನ್ನು ನೀಡಿದರು. ಮಾಜಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಪುತ್ತಬ್ಬ ಕುಂಜತ್ತೂರು, ಶಾಲೆಯಲ್ಲಿ ಮೊದಲು ಗಂಜಿ ಬೇಯಿಸುತ್ತಿದ್ದ ರತ್ನಮ್ಮ ಅವರಿಗೆ ಶಾಲು ಹೊದಿಸಿ, ಫಲಪುಷ್ಪ, ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು. ಶ್ರೀ ನಿತೀನ್ ಚಂದ್ರ ಪೈ ಅವರಿಗೆ ಕಾಣಿಕೆಯನ್ನು ನೀಡಿ ಆದರಿಸಲಾಯಿತು. ಶಾಲಾಮಟ್ಟದಲ್ಲಿ ನಡೆದ ಆಟೋಟ ಸ್ಪರ್ಧೆ ಮತ್ತು ಕಲೋತ್ಸವದಲ್ಲಿ ವಿಜೇತರಾದ ಮಕ್ಕಳಿಗೆ ಮತ್ತು ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮತ್ತು ವಿಜ್ಞಾನ ಮೇಳದಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ಮನೋರಮಾ ಟೀಚರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನೂತನ ವಾರ್ಡ್ ಸದಸ್ಯೆಯಾದ ಸುಪ್ರೀಯಾ ಶೆಣೈ, ನೆರೆಯ ವಾರ್ಡ್ ಸದಸ್ಯರಾದ ಅಬ್ದುಲ್ಲ ಗುಡ್ಡೆಕೇರಿ, ಪಿ.ಟಿ.ಎ. ಅಧ್ಯಕ್ಷರಾದ ಫರೀದ್ ಎಂ.ಪಿ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ತೇಜೇಶ್ ಕಿರಣ್ ರವರು ಜವಹರಲಾಲ್ ನೆಹರುವಿನ ಕುರಿತಾಗಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ದಿ.ವಿಟ್ಟಪ್ಪ ಶೆಣೈ ಮತ್ತು ನಿವೃತ್ತ ಶಿಕ್ಷಕಿ ಚಂದ್ರಕಲಾ ಭಾಯಿ ಇವರು ಕೊಡಮಾಡಿದ ನಗದು ಬಹುಮಾನವನ್ನು ವಿತರಿಸಲಾಯಿತು. ಕೊನೆಗೆ ಎಲ್ಲರಿಗೂ ಸಿಹಿತಿಂಡಿ ಹಂಚಲಾಯಿತು. ಅನುಸೂಯ ಟೀಚರ್ ಧನ್ಯವಾದವಿತ್ತರು. ಅಧ್ಯಾಪಕ ಶ್ರೀಕೃಷ್ಣ ಡಿ.ಕೆ. ಕಾರ್ಯಕ್ರಮವನ್ನು ನಿರೂಪಿಸಿದರು.

No comments:

Post a Comment

ಗಣರಾಜ್ಯೋತ್ಸವ