ಕೆ.ಎನ್. ಪಣಿಕ್ಕರ್ ಸಂಸ್ಮರಣಾರ್ಥ ಜರಗುವ ವಾಚನಾ ಸಪ್ತಾಹದ ಉಧ್ಘಾಟನೆ 19.06.2015 ರಂದು ಅನಂತ ವಿಧ್ಯಾ ಸಭಾಂಗಣದಲ್ಲಿ ಜರಗಿತು. ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಉದಯ ಶಂಕರ ಭಟ್ ಪುಸ್ತಕಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಅಲ್ಲದೆ ಓದಿನ ಮಹತ್ವ ಹಾಗೂ ಪ್ರಯೋಜನಗಳನ್ನು ತಿಳಿಸಿದರು. ಪ್ರೌಢಶಾಲಾ ಕನ್ನಡ ಶಿಕ್ಷಕಿ ಪರಮೇಶ್ವರಿ ಟೀಚರ್ ಮುಖ್ಯ ಅತಿಥಿಯಾಗಿ ಶುಭ ಹಾರೈಸಿದರು. ಮುಖ್ಯೋಪಾಧ್ಯಾಯಿನಿ ಸುದತಿ ಬಿ. ಹಾಗೂ SRG ಸಂಚಾಲಕಿ ಅನುಸೂಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಾಪಕ ತೇಜಸ್ ಕಿರಣ್ ಪಣಿಕ್ಕರ್ ಬಗ್ಗೆ ಕಿರು ಮಾಹಿತಿ ನೀಡಿದರು. ಮುಖ್ಯೋಪಾಧ್ಯಾಯಿನಿ ಸ್ವಾಗತಿಸಿ ಶುಭಹಾರೈಸಿದರು. ಮಹೇಶ್ ಕೆ. ವಂದಿಸಿ ಶ್ರೀಕೃಷ್ಣ ಡಿ.ಕೆ. ನಿರೂಪಿಸಿದರು. ನಂತರ ಮಕ್ಕಳಿಂದ ಕತೆ, ಕವನ ವಾಚನ ಇತ್ಯಾದಿ ಕಾರ್ಯಕ್ರಮಗಳು ಜರಗಿದವು.
22.06.2015 ರಂದು ಪುಸ್ತಕ ಪ್ರದರ್ಶನ ಜರಗಿತು. ತರಗತಿಯಲ್ಲಿ ಒಪ್ಪವಾಗಿ ಜೋಡಿಸಿದ ಪುಸ್ತಕಗಳ ಮಳಿಗೆಯನ್ನು ಮುಖ್ಯೋಪಾಧ್ಯಾಯಿನಿ ಸುದತಿ ಬಿ. ಉಧ್ಘಾಟಿಸಿದರು. ಪ್ರತಿ ತರಗತಿ ಮಕ್ಕಳಿಗೂ ಪುಸ್ತಕ ಪ್ರದರ್ಶನವನ್ನು ನೋಡಲು ಅವಕಾಶ ನೀಡಲಾಯಿತು. ನೋಡಿದ ಪುಸ್ತಕಗಳ ಹೆಸರನ್ನು ನೆನಪಿರಿಸಿ ಹೇಳಲು ಸೂಚನೆ ನೀಡಲಾಯಿತು.
Nice to see
ReplyDelete