Wednesday 22 July 2015

ಚಾಂದ್ರ ದಿನ



             21-07-2015 ರಂದು ಚಾಂದ್ರ ದಿನಾಚರಣೆ ಕಾರ್ಯಕ್ರಮ ಜರಗಿತು. ನಾಲ್ಕನೇ ತರಗತಿಯ ಮಕ್ಕಳಿಗೆ ಚಾಂದ್ರದಿನದ ಮಹತ್ವವನ್ನು, ಸಾಧನೆಗಳನ್ನು ಅಧ್ಯಾಪಕ ತೇಜಸ್ ಕಿರಣ್ ತಿಳಿಸಿದರು. ಅಪರಾಹ್ನ 3 ಗಂಟೆಗೆ ಚಾಂದ್ರಯಾನದ ಸಿ.ಡಿ. ವೀಕ್ಷಿಸಲು ಅವಕಾಶ ನೀಡಲಾಯಿತು. ನಾಲ್ಕನೇ ತರಗತಿಯಲ್ಲಿ ಪ್ರಾಜೆಕ್ಟರ್, ಸ್ಕ್ರೀನ್ ಅಳವಡಿಸಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಯಿತು. ಚಂದ್ರಲೋಕ್ಕೆ ಪ್ರಯಾಣದ ವಿಶಿಷ್ಟ ಕೌತುಕಗಳನ್ನು ನೋಡಲು ಸಾಧ್ಯವಾಯಿತು. ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. 

Monday 13 July 2015

ವನಮಹೋತ್ಸವ



              ಎಸ್.ಎ.ಟಿ. ಶಾಲೆಯ ಆಡಳಿತ ಮಂಡಳಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಹಾಗೂ ಶಾಲಾ ಪರಿಸರ ಸಂಘದ ಜಂಟಿ ಆಶ್ರಯದಲ್ಲಿ ಸಾಮೂಹಿಕ ಗಿಡ ನೆಡುವ ವನಮಹೋತ್ಸವ ಕಾರ್ಯಕ್ರಮ 12-07-2015 ರಂದು ಜರಗಿತು. ಸಭಾಧ್ಯಕ್ಷತೆಯನ್ನು ಮಂಗಳೂರಿನ ಟಿ. ಗಣಪತಿ ಪೈ ವಹಿಸಿ ಉಧ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀಮದ್ ಅನಂತೇಶ್ವರ ದೇವಳದ ಅಧ್ಯಕ್ಷ ಡಾ. ಕೆ.ಅನಂತ ಕಾಮತ್, ಎಂ. ವಿಠಲದಾಸ್ ಭಟ್, ಮನೋರಮ ಕಿಣಿ, ಲಿಲ್ಲಿ ಟೀಚರ್, ಪುತ್ತಬ್ಬ ಮೊದಲಾದವರು ಉಪಸ್ಥಿತರಿದ್ದರು. ಕೆ. ಗುರುದತ್ತ ಕಾಮತ್ ಸ್ವಾಗತಿಸಿ ಪ್ರಬಂಧಕರಾದ ದಿನೇಶ್ ಶೆಣೈ ವಂದಿಸಿದರು. ವೀರೇಶ್ವರ ಭಟ್ ನಿರೂಪಿಸಿದರು. ಊರ ಪರವೂರ ಅಭಿಮಾನಿಗಳು, ಮಕ್ಕಳು ಗಿಡಗಳನ್ನು ನೆಟ್ಟು ಸಂರಕ್ಷಿಸುವ ಪಣತೊಟ್ಟರು.

Sunday 5 July 2015

ಪಿ.ಟಿ.ಎ. ಮಹಾಸಭೆ



          ತಾ. 04-07-2015 ಶನಿವಾರ ಬೆಳಗ್ಗೆ 10.30 ಕ್ಕೆ ಎಸ್.ಎ.ಟಿ.ಎಲ್.ಪಿ. ಶಾಲೆಯ ಪಿ.ಟಿ.ಎ. ಮಹಾಸಭೆ ಜರಗಿತು. ಪಿ.ಟಿ.ಎ. ಅಧ್ಯಕ್ಷ ಪುತ್ತಬ್ಬ ಕುಂಜತ್ತೂರು ಅಧ್ಯಕ್ಷತೆ ವಹಿಸಿದರು. ಆಡಳಿತ ಮಂಡಳಿಯ ಪರವಾಗಿ ಲಿಲ್ಲಿ ಟೀಚರ್ ಉಪಸ್ಥಿತರಿದ್ದರು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅನುಸೂಯ ಟೀಚರ್ ಸ್ವಾಗತಿಸಿದರು. ತೇಜಸ್ ಕಿರಣ್ ವರದಿ ಮಂಡಿಸಿದರು. ಮುಖ್ಯೋಪಾಧ್ಯಾಯಿನಿ ಸುದತಿ ಬಿ. 2014-2015 ರ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಹೆತ್ತವರು ಕೈ ಚಪ್ಪಾಳೆಯ ಮೂಲಕ ಅಂಗೀಕರಿಸಿದರು. ಲಿಲ್ಲಿ ಟೀಚರ್ ಕೆಲವು ಮಾಹಿತಿಗಳನ್ನು ಹೆತ್ತವರಿಗೆ ನೀಡಿದರು.
      ನಂತರ 2015-2016 ನೇ ಸಾಲಿನ ಪಿ.ಟಿ.ಎ., ಎಮ್.ಪಿ.ಟಿ.ಎ. ಹಾಗೂ ಗಂಜಿ ಸಮಿತಿಯನ್ನು ಹೊಸತಾಗಿ ಆರಿಸಲಾಯಿತು. ಪಿ.ಟಿ.ಎ. ಅಧ್ಯಕ್ಷರಾಗಿ ಫರೀದ್ ಎಮ್.ಪಿ. ಉಪಾಧ್ಯಕ್ಷರಾಗಿ ನವೀನ್ ಅಡಪ ಹಾಗೂ ಎಮ್.ಪಿ.ಟಿ.ಎ. ಅಧ್ಯಕ್ಷರಾಗಿ ವೀಣಾ ಹಾಗೂ ಗಂಜಿ ಸಮಿತಿ ಸಂಚಾಲಕರಾಗಿ ಅಬ್ದುಲ್ ಖಾದರ್ ಆಯ್ಕೆಯಾದರು. ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಶ್ರೀಕೃಷ್ಣ ಡಿ.ಕೆ. ನಿರೂಪಿಸಿದರು.

ಗಣರಾಜ್ಯೋತ್ಸವ