Sunday 5 July 2015

ಪಿ.ಟಿ.ಎ. ಮಹಾಸಭೆ          ತಾ. 04-07-2015 ಶನಿವಾರ ಬೆಳಗ್ಗೆ 10.30 ಕ್ಕೆ ಎಸ್.ಎ.ಟಿ.ಎಲ್.ಪಿ. ಶಾಲೆಯ ಪಿ.ಟಿ.ಎ. ಮಹಾಸಭೆ ಜರಗಿತು. ಪಿ.ಟಿ.ಎ. ಅಧ್ಯಕ್ಷ ಪುತ್ತಬ್ಬ ಕುಂಜತ್ತೂರು ಅಧ್ಯಕ್ಷತೆ ವಹಿಸಿದರು. ಆಡಳಿತ ಮಂಡಳಿಯ ಪರವಾಗಿ ಲಿಲ್ಲಿ ಟೀಚರ್ ಉಪಸ್ಥಿತರಿದ್ದರು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅನುಸೂಯ ಟೀಚರ್ ಸ್ವಾಗತಿಸಿದರು. ತೇಜಸ್ ಕಿರಣ್ ವರದಿ ಮಂಡಿಸಿದರು. ಮುಖ್ಯೋಪಾಧ್ಯಾಯಿನಿ ಸುದತಿ ಬಿ. 2014-2015 ರ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಹೆತ್ತವರು ಕೈ ಚಪ್ಪಾಳೆಯ ಮೂಲಕ ಅಂಗೀಕರಿಸಿದರು. ಲಿಲ್ಲಿ ಟೀಚರ್ ಕೆಲವು ಮಾಹಿತಿಗಳನ್ನು ಹೆತ್ತವರಿಗೆ ನೀಡಿದರು.
      ನಂತರ 2015-2016 ನೇ ಸಾಲಿನ ಪಿ.ಟಿ.ಎ., ಎಮ್.ಪಿ.ಟಿ.ಎ. ಹಾಗೂ ಗಂಜಿ ಸಮಿತಿಯನ್ನು ಹೊಸತಾಗಿ ಆರಿಸಲಾಯಿತು. ಪಿ.ಟಿ.ಎ. ಅಧ್ಯಕ್ಷರಾಗಿ ಫರೀದ್ ಎಮ್.ಪಿ. ಉಪಾಧ್ಯಕ್ಷರಾಗಿ ನವೀನ್ ಅಡಪ ಹಾಗೂ ಎಮ್.ಪಿ.ಟಿ.ಎ. ಅಧ್ಯಕ್ಷರಾಗಿ ವೀಣಾ ಹಾಗೂ ಗಂಜಿ ಸಮಿತಿ ಸಂಚಾಲಕರಾಗಿ ಅಬ್ದುಲ್ ಖಾದರ್ ಆಯ್ಕೆಯಾದರು. ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಶ್ರೀಕೃಷ್ಣ ಡಿ.ಕೆ. ನಿರೂಪಿಸಿದರು.

No comments:

Post a Comment

ಗಣರಾಜ್ಯೋತ್ಸವ