Saturday 26 July 2014

ಬಾಲಗಂಗಾಧರ ತಿಲಕರ ಜನ್ಮದಿನ



         
           23.7.14.ರಂದು ಲೋಕಮಾನ್ಯ ಬಾಲಗಂಗಾಧರ ತಿಲಕರ ಜನ್ಮದಿನವನ್ನು ಆಚರಿಸಲಾಯಿತು. ಎಲ್ಲಾ ತರಗತಿಯಲ್ಲೂ ಅವರ ಕುರಿತಾದ ಕಿರುಪರಿಚಯವನ್ನು ಮಾಡಿದರು.4 ನೇ ತರಗತಿಯಲ್ಲಿ ತಿಲಕರ ಚಿತ್ರವನ್ನು ಪ್ರದರ್ಶಿಸಿ ಚಿತ್ರರಚನೆಗೆ ಅವಕಾಶ ನೀಡಲಾಯಿತು. ಉತ್ತಮ ಚಿತ್ರರಚಿಸಿದವರನ್ನು ಆರಿಸಿ ಅಭಿನಂದಿಸಲಾಯಿತು. 3 ನೇ ತರಗತಿಯಲ್ಲಿ ತಿಲಕರ ಕುರಿತಾದ ಲೇಖನವುಳ್ಳ ಪತ್ರಿಕೆಯನ್ನು ಪ್ರದರ್ಶಿಸಲಾಯಿತು. ತಿಲಕರ ಸ್ವಾತಂತ್ರ ಹೋರಾಟದ ಬಗ್ಗೆ ಇದರಿಂದ ತಿಳಿದು ಕೊಳ್ಳಲು ಸಾದ್ಯವಾಯಿತು.

ಚಾಂದ್ರ ದಿನಾಚರಣೆ



           
                  22.7.14 ರಂದು ಚಾಂದ್ರ ದಿನಾಚರಣೆ ಕಾರ್ಯಕ್ರಮ ಜರಗಿತು. ಚಾಂದ್ರ ದಿನದ ಮಹತ್ವವನ್ನು ತಿಳಿಸಲಾಯಿತುಸಾಧನೆಗಳನ್ನು ವಿವರಿಸಲಾಯಿತು. ಅಪರಾಹ್ನ 3 ಗಂಟೆಗೆ ಚಾಂದ್ರಯಾನದ ಸಿ.ಡಿ. ಯನ್ನು ಪ್ರದರ್ಶಿಸಲಾಯಿತು. ಪ್ರಾಜೆಕ್ಟರ್ ಸ್ಕ್ರೀನ್ ನಲ್ಲಿ ಸಿ.ಡಿ. ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು. 4ನೇ ತರಗತಿಯಲ್ಲಿ ಈ ಕಾರ್ಯಕ್ರಮ ಜರಗಿತು. .ಮುಖ್ಯೋಪಾಧ್ಯಾಯಿನಿಯಾದ ಸುದತಿ ಬಿ ಉಪಸ್ಥಿತರಿದ್ದರು. ಅಧ್ಯಾಪಕರಾರ ತೇಜಸ್ ಕಿರಣ್ ಕಾರ್ಯಕ್ರಮದ ವ್ಯವಸ್ಥೆ ಮಾಡಿದರು. ಪದ್ಮಿನಿ ಟೀಚರ್ ಸಹಕರಿಸಿದರು.

ಆರೋಗ್ಯ ಮತ್ತು ಶುಚಿತ್ವ



                         
           18.7.2014 ರಂದು ಆಡಳಿತ ಮಂಡಳಿಯ ಸಲಹಾ ಸಮಿತಿಯ ಸದಸ್ಯರಾದ ಲಿಲ್ಲಿ ಬಾಯಿ ಟೀಚರ್ ಎಸ್..ಟಿ.ಎಲ್.ಪಿ. ಶಾಲೆಯ ಮಕ್ಕಳಿಗೆ ಆರೋಗ್ಯ ಮತ್ತು ಶುಚಿತ್ವದ ಕುರಿತಾಗಿ ಅರಿವು ಮೂಡಿಸಿದರು. ಡಯಟ್ ಮಾಯಿಪ್ಪಾಡಿಯ ತರಬೇತುದಾರರಾದ ಜಲಜಾಕ್ಷಿ ಟೀಚರ್ ಮತ್ತು ಮುಖ್ಯೋಪಾಧ್ಯಾಯಿನಿ ಸುದತಿ .ಬಿ ರವರು ಉಪಸ್ಥಿತರಿದ್ದರು.

ಉಚಿತ ಸಮವಸ್ತ್ರ ವಿತರಣೆ


       
            10.7.14 ಸರಕಾರದಿಂದ ಒದಗಿಸಲ್ಪಟ್ಟ ಸಮವಸ್ತ್ರ ವನ್ನು ಮುಖ್ಯೋಪಾಧ್ಯಾಯಿನಿಯಾದ ಸುದತಿ ಬಿ ವಿತರಿಸುವುದರ ಮೂಲಕ ಚಾಲನೆ ನೀಡಿದರು. ಎಲ್ಲಾ ತರಗತಿಯ ಹುಡುಗಿಯರು ಮತ್ತು ಬಿ.ಪಿ.ಎಲ್. ಹುಡುಗರಿಗೆ ಸರಕಾರದ ವತಿಯಿಂದ ಉಚಿತವಾಗಿ ನೀಡಿದ ನೀಲಿ ಹಾಗೂ ಬಿಳಿ ಸಮವಸ್ತ್ರದ ಬಟ್ಟೆಯನ್ನು ಬೇಕಾದ ಅಳತೆಯಲ್ಲಿ ತುಂಡರಿಸಿ ಎಲ್ಲಾ ಫಲಾನುಭವಿಗಳಿಗೆ ವಿತರಿಸುವ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಆಯಾತರಗತಿ ಅಧ್ಯಾಪಕರಿಗೆ ಜವಾಬ್ದಾರಿ ನೀಡಲಾಯಿತು.

ಬಲಿಷ್ಟ ಸಂಘಟನೆಗಳ ರೂಪೀಕರಣ


ರಕ್ಷಕ - ಶಿಕ್ಷಕ ಮಹಾ ಸಭೆ

       
               5.7.14 ಶನಿವಾರ ರಕ್ಷಕ - ಶಿಕ್ಷಕ ಮಹಾ ಸಭೆ ಜರಗಿತು. ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ಪುತ್ತಬ್ಬ ಕುಂಜತ್ತೂರು ಅಧ್ಯಕ್ಷತೆ ವಹಿಸಿದರು. ಆಡಳಿತ ಮಂಡಳಿಯ ಸಲಹಾ ಸಮಿತಿಯ ಸದಸ್ಯರಾದ ಲಿಲ್ಲಿ ಬಾಯಿ ಟೀಚರ್ ಉಪಸ್ಥಿತರಿದ್ದರು.ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅನಸೂಯ ಟೀಚರ್ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿಯಾದ ಸುದತಿ ಬಿ 2013-14 ನೇ ಸಾಲಿನ ವರದಿಯನ್ನು ವಾಚಿಸಿ, ಲೆಕ್ಕ ಪತ್ರವನ್ನು ಮಂಡಿಸಿದರು. ಲೆಕ್ಕ ಪತ್ರವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ನಂತರಲಿಲ್ಲಿ ಬಾಯಿ ಟೀಚರ್ ಹೆತ್ತವರಿಗೆ ಸಲಹೆ ಸೂಚನೆಗಳನ್ನು ನೀಡಿದರು. ನಂತರ 2014- 15 ನೇ ಸಾಲಿನ ಪಿ.ಟಿ. , ಎ೦.ಪಿ.ಟಿ.. ಹಾಗೂ ಗಂಜಿ ಸಮಿತಿಯನ್ನು ಆರಿಸಲಾಯಿತು. ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀಯುತ ಪುತ್ತಬ್ಬ ಕುಂಜತ್ತೂರು ಪುನರಾಯ್ಕೆ ಯಾದರು. ಹೊಸತಾಗಿ ಆಯ್ಕೆಯಾದ ಸಮಿತಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು

ಹೊಸತನದೆಡೆಗೆ ತರಗತಿಗಳು.....


ನೂತನ ಪಿಠೋಪಕರಣಗಳ ಹಸ್ತಾಂತರ

           
             30.6.14ರಂದು ಶಾಲೆಗೆ ನೂತನ ಪಿಠೋಪಕರಣಗಳ ಹಸ್ತಾಂತರ ರಕ್ಷಕ – ಶಿಕ್ಷಕ ಸಂಘ, ಆಡಳಿತ ಮಂಡಳಿ ಹಾಗೂ ದಾನಿಗಳ ಸಹಕಾರದೊಂದಿಗೆ ನೂತನ ಪಿಠೋಪಕರಣಗಳ ಹಸ್ತಾಂತರ ಹಾಗೂ ಉದ್ಘಾಟನಾ ಕಾರ್ಯಕ್ರಮ ಜರಗಿತು.ಮಂಜೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಮುಶ್ರತ್ ಜಹಾನ್ ಹಸ್ತಾಂತರಿಸಿರು.ಟಿ ಗೋಪಿನಾಥ ಶೆಣೈ ಉದ್ಘಾಟಿಸಿದರು. ನಂತರ ಜರಗಿದ ಸಭಾಕಾರ್ಯಕ್ರಮದಲ್ಲಿ ಮಂಜೇಶ್ವರ ಉಪಜಿಲ್ಲಾ ಬ್ಲಾಕ್ ಸಯೋಜನಾಧಿಕಾರಿ ಇಬ್ರಾಹಿಂ ,ಪ್ರೌಢ ಶಾಲಾ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ನಿತಿನ್ ಚಂದ್ರ ಪೈ , ಶಾಲೆಯ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ಪುತ್ತಬ್ಬ ಕುಂಜತ್ತೂರು , ಮಂಜೇಶ್ವರ ಗ್ರಾಮಪಂಚಾಯತ್ ಸದಸ್ಯರಾದ ಹರಿಶ್ಚಂದ್ರ ಮತ್ತು ಪ್ರಶಾಂತಿ ಕೆ. , ಕೆ. ಶ್ರೀಮತಿ ನಾಯಕ್ , ಡಾ. . ಟಿ .ಸುರೇಂದ್ರ ಶೆಣೈ, ಎ೦. ವಿಠಲ್ ದಾಸ್ ಭಟ್ , ಸುನಿಲ್ ಭಟ್, ಗುರುದತ್ತ್ ಕಾಮತ್ ಉಪಸ್ಥಿತರಿದ್ದು ಶುಭ ಹಾರೈಸಿದರು.

ಮಾದಕ ವಸ್ತುಗಳೇ .......... ಹುಂ..........ದೂರ ಸರಿಯಿರಿ


ಮಾದಕ ವಸ್ತು ವಿರೋಧಿ ದಿನ

       
            26.6.14 ರಂದು ಮಾದಕ ವಸ್ತು ವಿರೋಧಿ ದಿನವನ್ನು ಆಚರಿಸಲಾಯಿತು.ಮುಖ್ಯೋಪಾಧ್ಯಾಯಿನಿಯಾದ ಸುದತಿ ಬಿ ಮಾದಕ ದ್ರವ್ಯಗಳಿಂದ ಉಂಟಾಗುವ ತೊಂದರೆಗಳನ್ನು ತಿಳಿಸಿದರು. ಮಹೇಶ್ ಕೆ ಮಕ್ಕಳಿಗೆ ಪ್ರತಿಜ್ಞೆಯನ್ನು ಬೋಧಿಸಿದರು. ಮಕ್ಕಳು ಮಾದಕ ವಸ್ತುವನ್ನು ಸೇವಿಸುವುದಿಲ್ಲ ಎ೦ಬ ಪ್ರತಿಜ್ಞೆಯನ್ನು ಮಾಡಿದರು. ನಂತರ ಕುಡಿತದ ದುಷ್ಪರಿಣಾಮವನ್ನು ಬೀರುವ ಪ್ರಹಸನವನ್ನು ಅಧ್ಯಾಪಕರು ನಡೆಸಿದರು.ನಂತರ ಮಕ್ಕಳು ಘೋಷಣಾ ವಾಕ್ಯಗಳನ್ನು ಪ್ರದರ್ಶಿಸಿದರು.

ಪುಸ್ತಕ ಓದಿ ಮಸ್ತಕ ತುಂಬಿಸಿ

ವಾಚನಾವಾರ

               
              19.6.14 ವಾಚನಾವಾರದ ಉದ್ಘಾಟನೆ ಜರಗಿತು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ಪುತ್ತಬ್ಬ ಕುಂಜತ್ತೂರು ಉದ್ಘಾಟಿಸಿದರು. ಮುಖ್ಯೋಪಾಧ್ಯಾಯಿನಿಯಾದ ಸುದತಿ ಬಿ ಓದುವಿಕೆಯ ಮಹತ್ವವನ್ನು ತಿಳಿಸಿದರು.ಪ್ರೌಢ ಶಾಲಾ ಮುಖ್ಯೋಪಾಧ್ಯಾಯನಿ ಮನೋರಮ ಕಿಣಿ ಶುಭ ಹಾರೈಸಿದರು. ಹೊಸ ಪುಸ್ತಕಗಳ ಬಿಡುಗಡೆ ಹಾಗೂ ಪ್ರದರ್ಶನ ಈ ಸಂದರ್ಭದಲ್ಲಿ ಜರಗಿತು. 20.6.14 ರಂದು ಪ್ರತಿ ತರಗತಿಯಲ್ಲೊ ಮಕ್ಕಳಿಗೆ ಕತೆ ಪುಸ್ತಕವನ್ನು ವಿತರಿಸಲಾಯಿತು. 23.6.14 ರಂದು 3ನೇ ಮತ್ತು 4ನೇ ತರಗತಿಯ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಏರ್ಪಡಿಸಲಾಯಿತು. 24.6.14ರಂದು ತರಗತಿಗಳಲ್ಲಿ ಪುಸ್ತಕ ಸಂಗ್ರಹ ಹಾಗೂ ಮಕ್ಕಳು ಓದಿದ ಕತೆಯ ಸಾರಾಂಶವನ್ನು ಹೇಳುವ ಕಾರ್ಯಕ್ರಮ ಜರಗಿತು. 25.6.14 ರಂದು 3ನೇ ಮತ್ತು 4ನೇ ತರಗತಿಯ ವಿದ್ಯಾರ್ಥಿಗಳು ಮಂಜೇಶ್ವರ ಗೋವಿಂದ ಪೈ ಗ್ರಂಥಾಲಯಕ್ಕೆ ಭೇಟಿ ನೀಡಿದರು. 26.6.14.ರಂದು ಸಮಾರೋಪ ಕಾರ್ಯಕ್ರಮ ಜರಗಿತು. ರಸ ಪ್ರಶ್ನೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಓದಿನ ಮಹತ್ವವನ್ನು ತಿಳಿಸಿ ಹುಟ್ಟು ಹಬ್ಬದ ದಿನ ಒಂದು ಪುಸ್ತಕವನ್ನು ಶಾಲೆಗೆ ನೀಡಬೇಕೆಂದು ಮುಖ್ಯೋಪಾಧ್ಯಾಯರು ಸೂಚಿಸಿದರು.

                   

ಅರಳುತ್ತಿರುವ ಪ್ರತಿಭೆ

ಎಲ್. ಎಸ್.ಎಸ್ ಪರೀಕ್ಷೆ


              2013-14 ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ಎಲ್. ಎಸ್.ಎಸ್ ಪರೀಕ್ಷೆಯಲ್ಲಿ ಎಸ್.. ಟಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ದೀಪಕ್ ರಾಜ್ ತೆರ್ಗಡೆ ಹೊಂದಿರುವನು.ಈತ ಸರಸ್ವತಿ ಎ೦ಬವರ ಪುತ್ರ.

ಹಚ್ಚಹಸುರಿನೆಡೆಗೆ ಶಾಲಾ ಪರಿಸರ

ವಿಶ್ವ ಪರಿಸರ ದಿನಾಚರಣೆ

     
              5.6.14. ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಬೆಳಗ್ಗೆ 9.30 ಕ್ಕೆ ಸರಿಯಾಗಿ ಅಸೆಂಬ್ಲಿ ಸೇರಲಾಯಿತು. ಅಸೆಂಬ್ಲಿಯಲ್ಲಿ ಪರಿಸರ ದಿನಾಚರಣೆಯ ಸಂದೇಶವನ್ನು ಮುಖ್ಯೋಪಾಧ್ಯಾಯಿನಿಯಾದ ಸುದತಿ ಬಿ ನೀಡಿದರು. ಪರಿಸರವನ್ನು ಸಂರಕ್ಷಿಸುವ ಅವಶ್ಯಕತೆಯನ್ನು ತಿಳಿಸಿದರು.ನಂತರ ಪ್ರತಿ ತರಗತಿಯಲ್ಲೂ ಗಿಡವನ್ನು ನೇಡುವುದರ ಮಹತ್ವವನ್ನು ತಿಳಿಸಲಾಯಿತುಅಪರಾಹ್ನ ಶಾಲಾ ಪರಿಸರದಲ್ಲಿ ಗಿಡಗಳನ್ನು ನೇಡಲಾಯಿತು. 4ನೇ ತರಗತಿಯ ವಿದ್ಯಾರ್ಥಿಗಳು ಅಧ್ಯಾಪಕರೊಡನೆ ಸೇರಿ ಗಿಡಗಳನ್ನು ನೆಟ್ಟರು.ಆ ಗಿಡಗಳನ್ನು ನೋಡಿಕೊಳ್ಳಲು ವಿದ್ಯಾರ್ಥಿಗಳ ಗುಂಪುಗಳನ್ನು ರಚಿಸಲಾಯಿತು. ಘೋಷಣಾ ವಾಕ್ಯಗಳನ್ನು ಹಿಡಿದು ಮಕ್ಕಳು ಮೆರವಣಿಗೆಯಲ್ಲಿ ಸಾಗಿದರುನಂತರ ಮುಖ್ಯೋಪಾಧ್ಯಾಯಿನಿಯಾದ ಸುದತಿ ಬಿ ಗಿಡಗಳ ವಿತರಣೆಗೆ ಚಾಲನೆಯನ್ನು ನೀಡಿದರು. ಎಲ್ಲಾ ಮಕ್ಕಳಿಗೂ ಗಿಡಗಳನ್ನು ವಿತರಿಸಲಾಯಿತು. ಗಿಡಗಳನ್ನು ನೆಟ್ಟು ಬೆಳೆಸಲು ತಿಳಿಸಲಾಯಿತು.

ಹರ್ಷೋಲ್ಲಾಸದೊಂದಿಗೆ ಪ್ರಾರಂಭ

ಪ್ರವೇಶೋತ್ಸವ

       
            2.6.2014 ಸೋಮವಾರ ಮಂಜೇಶ್ವರ ಪಂಚಾಯತ್ ಮಟ್ಟದ ಪ್ರವೇಶೋತ್ಸವ ಎಸ್. .ಟಿ.ಎಲ್.ಪಿ. ಶಾಲೆಯಲ್ಲಿ ಯಶಸ್ವಿಯಾಗಿ ಜರಗಿತು. ಬೆಳಗ್ಗೆ 10 ಗಂಟೆಗೆ ಸರಿಯಾಗಿ ಅಸಂಬ್ಲಿ ಸೇರಲಾಯಿತು. ಸರಕಾರದ ಪ್ರತಿಜ್ಞೆಯನ್ನು ಬೋಧಿಸಲಾಯಿತು. ನಂತರ ಹೊಸತಾಗಿ ಶಾಲೆಗೆ ಸೇರಿದ ಮಕ್ಕಳನ್ನು ಶಾಲಾ ಪರಿಸರದಿಂದ ಮೆರವಣಿಗೆಯಲ್ಲಿ ಕರೆತರಲಾಯಿತು.ಸ್ಕೌಟ್ ಮತ್ತು ಗೈಡ್ ನ ವಿದ್ಯಾರ್ಥಿಗಳು ಹಾಗೂ ಬ್ಯಾಂಡ್ ಸೆಟ್ ಮೆರವಣಿಗೆಗೆ ವಿಶೇಷ ಕಳೆನೀಡಿತು.ಅಧ್ಯಾಪಕರು, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಗಣ್ಯ ಅತಿಥಿಗಳು ಉಪಸ್ಥಿತರಿದ್ದರುಬಳಿಕ ಅನಂತ ವಿದ್ಯಾ ದಲ್ಲಿ ಸಭಾ ಕಾರ್ಯಕ್ರಮ ಜರಗಿತು. ವಾರ್ಡು ಸದಸ್ಯ ಆನಂದ ಮಾಸ್ತರ್ ಉದ್ಘಾಟಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಮನೋರಮ ಕಿಣಿ ಸ್ವಾಗತಿಸಿದರು. ಬಿ.ಆರ್ .ಸಿ ತರಬೇತಿದಾರರಾದ ರಮ್ಯ ಪ್ರಾಸ್ತವಿಕ ನುಡಿಗಳನ್ನಾಡಿದರು.ಅಧ್ಯಾಪಕರು ಪ್ರವೇಶೋತ್ಸವ ಗೀತೆಯನ್ನು ಹಾಡಿದರು. ಲಿಲ್ಲಿ ಬಾಯಿ ಟೀಚರ್ ಮಕ್ಕಳಿಗೆ ಆಸಕ್ತಿದಾಯಕವಾದ ಚಟುವಟಿಕೆಗಳನ್ನು ನೀಡಿದರು. ಹೊಸದಾಗಿ ಸೇರಿದ ಮಕ್ಕಳಿಗೆ ಹೂ, ಬೆಲೂನ್ ಗಳನ್ನು ನೀಡಲಾಯಿತು.ಒಂದನೇ ತರಗತಿಯ ಮಕ್ಕಳಿಗೆ ಉಚಿತ ಪೆನ್ಸಿಲ್ , ರಬ್ಬರ್ , ಸ್ಕೇಲ್ , ಸ್ಲೇಟ್, ಚಿತ್ರ ಪುಸ್ತಕ ಇತ್ಯಾದಿಗಳನ್ನು ಒಳಗೊಂಡ ಕಿಟ್ ನ್ನು ವಿತರಿಸಲಾಯಿತು.ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಮುಷರತ್ ಜಹಾನ್ ಅಧ್ಯಕ್ಷತೆ ವಹಿಸಿದರು.ಶಾಲಾ ಪ್ರಬಂಧಕರಾದ ಶ್ರೀಯುತ ದಿನೇಶ್ ಶೆಣೈ , ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ಪುತ್ತಬ್ಬ ಕುಂಜತ್ತೂರು ಮತ್ತು ಬಿ. ಆರ್.ಸಿ ತರಬೇತಿದಾರರಾದ ಶ್ರೀಮತಿ ಉಷಾ ಟೀಚರ್ ಉಪಸ್ಥಿತರಿದ್ದು ಶುಭ ಹಾರೈಸಿದರು.ಮುಖ್ಯೋಪಾಧ್ಯಾಯಿನಿಯಾದ ಸುದತಿ ಟೀಚರ್ ಧನ್ಯವಾದವನ್ನು ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿಯನ್ನು ಹಂಚಲಾಯಿತು. ಶ್ರೀಯುತ ವಿರೇಶ್ವರ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.

ಗಣರಾಜ್ಯೋತ್ಸವ