ವಿಶ್ವ
ಪರಿಸರ ದಿನಾಚರಣೆ
5.6.14. ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಬೆಳಗ್ಗೆ 9.30 ಕ್ಕೆ ಸರಿಯಾಗಿ ಅಸೆಂಬ್ಲಿ ಸೇರಲಾಯಿತು. ಅಸೆಂಬ್ಲಿಯಲ್ಲಿ ಪರಿಸರ ದಿನಾಚರಣೆಯ ಸಂದೇಶವನ್ನು ಮುಖ್ಯೋಪಾಧ್ಯಾಯಿನಿಯಾದ ಸುದತಿ ಬಿ ನೀಡಿದರು. ಪರಿಸರವನ್ನು ಸಂರಕ್ಷಿಸುವ ಅವಶ್ಯಕತೆಯನ್ನು ತಿಳಿಸಿದರು.ನಂತರ ಪ್ರತಿ ತರಗತಿಯಲ್ಲೂ ಗಿಡವನ್ನು ನೇಡುವುದರ ಮಹತ್ವವನ್ನು ತಿಳಿಸಲಾಯಿತು. ಅಪರಾಹ್ನ ಶಾಲಾ ಪರಿಸರದಲ್ಲಿ ಗಿಡಗಳನ್ನು ನೇಡಲಾಯಿತು. 4ನೇ ತರಗತಿಯ ವಿದ್ಯಾರ್ಥಿಗಳು ಅಧ್ಯಾಪಕರೊಡನೆ ಸೇರಿ ಗಿಡಗಳನ್ನು ನೆಟ್ಟರು.ಆ ಗಿಡಗಳನ್ನು ನೋಡಿಕೊಳ್ಳಲು ವಿದ್ಯಾರ್ಥಿಗಳ ಗುಂಪುಗಳನ್ನು ರಚಿಸಲಾಯಿತು. ಘೋಷಣಾ ವಾಕ್ಯಗಳನ್ನು ಹಿಡಿದು ಮಕ್ಕಳು ಮೆರವಣಿಗೆಯಲ್ಲಿ ಸಾಗಿದರು. ನಂತರ ಮುಖ್ಯೋಪಾಧ್ಯಾಯಿನಿಯಾದ ಸುದತಿ ಬಿ ಗಿಡಗಳ ವಿತರಣೆಗೆ ಚಾಲನೆಯನ್ನು ನೀಡಿದರು. ಎಲ್ಲಾ ಮಕ್ಕಳಿಗೂ ಗಿಡಗಳನ್ನು ವಿತರಿಸಲಾಯಿತು. ಗಿಡಗಳನ್ನು ನೆಟ್ಟು ಬೆಳೆಸಲು ತಿಳಿಸಲಾಯಿತು.
No comments:
Post a Comment