ಪ್ರವೇಶೋತ್ಸವ
2.6.2014 ಸೋಮವಾರ ಮಂಜೇಶ್ವರ ಪಂಚಾಯತ್ ಮಟ್ಟದ ಪ್ರವೇಶೋತ್ಸವ ಎಸ್. ಎ.ಟಿ.ಎಲ್.ಪಿ. ಶಾಲೆಯಲ್ಲಿ ಯಶಸ್ವಿಯಾಗಿ ಜರಗಿತು. ಬೆಳಗ್ಗೆ 10 ಗಂಟೆಗೆ ಸರಿಯಾಗಿ ಅಸಂಬ್ಲಿ ಸೇರಲಾಯಿತು. ಸರಕಾರದ ಪ್ರತಿಜ್ಞೆಯನ್ನು ಬೋಧಿಸಲಾಯಿತು. ನಂತರ ಹೊಸತಾಗಿ ಶಾಲೆಗೆ ಸೇರಿದ ಮಕ್ಕಳನ್ನು ಶಾಲಾ ಪರಿಸರದಿಂದ ಮೆರವಣಿಗೆಯಲ್ಲಿ ಕರೆತರಲಾಯಿತು.ಸ್ಕೌಟ್ ಮತ್ತು ಗೈಡ್ ನ ವಿದ್ಯಾರ್ಥಿಗಳು ಹಾಗೂ ಬ್ಯಾಂಡ್ ಸೆಟ್ ಮೆರವಣಿಗೆಗೆ ವಿಶೇಷ ಕಳೆನೀಡಿತು.ಅಧ್ಯಾಪಕರು, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಗಣ್ಯ ಅತಿಥಿಗಳು ಉಪಸ್ಥಿತರಿದ್ದರು. ಬಳಿಕ ಅನಂತ ವಿದ್ಯಾ ದಲ್ಲಿ ಸಭಾ ಕಾರ್ಯಕ್ರಮ ಜರಗಿತು. ವಾರ್ಡು ಸದಸ್ಯ ಆನಂದ ಮಾಸ್ತರ್ ಉದ್ಘಾಟಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಮನೋರಮ ಕಿಣಿ ಸ್ವಾಗತಿಸಿದರು. ಬಿ.ಆರ್ .ಸಿ ತರಬೇತಿದಾರರಾದ ರಮ್ಯ ಪ್ರಾಸ್ತವಿಕ ನುಡಿಗಳನ್ನಾಡಿದರು.ಅಧ್ಯಾಪಕರು ಪ್ರವೇಶೋತ್ಸವ ಗೀತೆಯನ್ನು ಹಾಡಿದರು. ಲಿಲ್ಲಿ ಬಾಯಿ ಟೀಚರ್ ಮಕ್ಕಳಿಗೆ ಆಸಕ್ತಿದಾಯಕವಾದ ಚಟುವಟಿಕೆಗಳನ್ನು ನೀಡಿದರು. ಹೊಸದಾಗಿ ಸೇರಿದ ಮಕ್ಕಳಿಗೆ ಹೂ, ಬೆಲೂನ್ ಗಳನ್ನು ನೀಡಲಾಯಿತು.ಒಂದನೇ ತರಗತಿಯ ಮಕ್ಕಳಿಗೆ ಉಚಿತ ಪೆನ್ಸಿಲ್ , ರಬ್ಬರ್ , ಸ್ಕೇಲ್ , ಸ್ಲೇಟ್, ಚಿತ್ರ ಪುಸ್ತಕ ಇತ್ಯಾದಿಗಳನ್ನು ಒಳಗೊಂಡ ಕಿಟ್ ನ್ನು ವಿತರಿಸಲಾಯಿತು.ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಮುಷರತ್ ಜಹಾನ್ ಅಧ್ಯಕ್ಷತೆ ವಹಿಸಿದರು.ಶಾಲಾ ಪ್ರಬಂಧಕರಾದ ಶ್ರೀಯುತ ದಿನೇಶ್ ಶೆಣೈ , ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ಪುತ್ತಬ್ಬ ಕುಂಜತ್ತೂರು ಮತ್ತು ಬಿ. ಆರ್.ಸಿ ತರಬೇತಿದಾರರಾದ ಶ್ರೀಮತಿ ಉಷಾ ಟೀಚರ್ ಉಪಸ್ಥಿತರಿದ್ದು ಶುಭ ಹಾರೈಸಿದರು.ಮುಖ್ಯೋಪಾಧ್ಯಾಯಿನಿಯಾದ ಸುದತಿ ಟೀಚರ್ ಧನ್ಯವಾದವನ್ನು ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿಯನ್ನು ಹಂಚಲಾಯಿತು. ಶ್ರೀಯುತ ವಿರೇಶ್ವರ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.
No comments:
Post a Comment