Sunday 11 October 2015

ಗಾಂಧೀಜಯಂತಿ ಆಚರಣೆ            02-10-2015 ಗಾಂಧೀ ಜಯಂತಿಯನ್ನು ಕಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲಾ ವಿಭಾಗವು ಜಂಟಿಯಾಗಿ ಆಚರಿಸಲಾಯಿತು. ಈ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ಜರಗಿದವು. ಗಾಂಧೀಜಿಯವರ ಭಾವಾಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಗಾಂಧೀಜಿಯವರ ಆದರ್ಶಗಳನ್ನು ನೆನಪಿಸಿಕೊಳ್ಳಲಾಯಿತು. ಮುಖ್ಯೋಪಾಧ್ಯಾಯಿನಿ ಸುದತಿ ಬಿ. ಗಾಂಧೀ ಜಯಂತಿಯ ಸಂದೇಶವನ್ನು ನೀಡಿದರು. ಮಕ್ಕಳಿಗೆ ದೇಶಭಕ್ತಗೀತೆ, ಗಾಂಧಿ ಗೀತೆ ಹಾಡುವ ಸ್ಪರ್ಧೆ ಹಾಗೂ ತಕಲಿಯಿಂದ ನೂಲು ತೆಗೆಯುವ ಸ್ಪರ್ಧೆ ನಡೆಯಿತು. ವಿಜೇತ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಅಲ್ಲದೆ ಮುಖ್ಯವಾಗಿ ಈ ದಿನ ಶುಚಿತ್ವ ಆಂದೋಲನಕ್ಕೆ ಚಾಲನೆ ನೀಡಲಾಯಿತು. ಸರ್ವಧರ್ಮ ಪ್ರಾರ್ಥನೆ ನಡೆಯಿತು. ಮಕ್ಕಳು ಅಧ್ಯಾಪಕರು ಜೊತೆ ಸೇರಿ ಶಾಲಾ ಪರಿಸರವನ್ನು ಶುಚಿಗೊಳಿಸಿದರು.

No comments:

Post a Comment

ಗಣರಾಜ್ಯೋತ್ಸವ