Thursday 12 February 2015

ಮೆಟ್ರಿಕ್ ಶಿಬಿರ                10-02-2015 ನೇ ಮಂಗಳವಾರ ನಮ್ಮ  ಶಾಲೆಯಲ್ಲಿ ಮೆಟ್ರಿಕ್ ಶಿಬಿರ ಜರಗಿತು. ಬೆಳಗ್ಗೆ 10 ಗಂಟೆಗೆ ಸರಿಯಾಗಿ ಶಾಲಾ ಮುಖೋಪಾಧ್ಯಾಯಿನಿ ಸುದತಿ ಬಿ. ಯವರು ಶಿಬಿರವನ್ನು ಉಧ್ಘಾಟಿಸಿ ಮಾತನಾಡಿದರು. ಶಿಬಿರದ ಉದ್ದೇಶ ಹಾಗೂ ಚಟುವಟಿಕೆಗಳ ಕಿರು ವಿವರಣೆ ನೀಡಿದರು. ನಂತರ ಅಧ್ಯಾಪಕರಾದ ತೇಜಸ್ ಕಿರಣ್ ತರಗತಿ ನಡೆಸಿಕೊಟ್ಟರು. ಪದ್ಮಿನಿ, ಗುಲಾಬಿ, ಶ್ರೀಕೃಷ್ಣ ಡಿ.ಕೆ. ಮೊದಲಾದ ಅಧ್ಯಾಪಕರು ಸಹಕಾರ ನೀಡಿದರು. ಶಿಬಿರದಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. ಅಳತೆ, ಭಾರ, ಒಳಹಿಡಿವು ಮೊದಲಾದವುಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಲಾಯಿತು.

No comments:

Post a Comment

ಗಣರಾಜ್ಯೋತ್ಸವ