ಜಿ.ಎಚ್.ಎಸ್.ಎಸ್. ಬೇಕೂರಿನಲ್ಲಿ ನಡೆದ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ
ಎಸ್.ಎ.ಟಿ.ಎಲ್.ಪಿ.ಶಾಲೆ ಮಂಜೇಶ್ವರದ ವಿದ್ಯಾರ್ಥಿಗಳು ಎಲ್.ಪಿ. ಸಾಮಾನ್ಯ ವಿಭಾಗದ ಗುಂಪು ಸಂಗೀತ
ಸ್ಪರ್ಧೆಯಲ್ಲಿ ಭಾಗವಹಿಸಿ 'ಎ' ಗ್ರೇಡನ್ನು, ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ
ಭಾಗವಹಿಸಿ 'ಎ' ಗ್ರೇಡಿನೊಂದಿಗೆ ದ್ವಿತೀಯ
ಸ್ಥಾನವನ್ನು, ಜಲವರ್ಣ
ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರಜೀನ ಬಿ. 'ಬಿ'ಗ್ರೇಡಿನೊಂದಿಗೆ ನಾಲ್ಕನೆಯ
ಸ್ಥಾನವನ್ನು, ಜಾನಪದ
ನೃತ್ಯ ಸ್ಪರ್ಧೆಯಲ್ಲಿ
ಭಾಗವಹಿಸಿದ ಪಾಯಲ್ ಎಮ್.ಪಿ. 'ಎ' ಗ್ರೇಡಿನೊಂದಿಗೆ ದ್ವಿತೀಯ
ಸ್ಥಾನವನ್ನು, ಭರತನಾಟ್ಯ
ಸ್ಪರ್ಧೆಯಲ್ಲಿ ಭಾಗವಹಿಸಿ 'ಬಿ' ಗ್ರೇಡನ್ನು, ಮಾಪಿಳ್ಳಪಾಟ್ ಸ್ಪರ್ಧೆಯಲ್ಲಿ
ಭಾಗವಹಿಸಿದ ಅಶ್ ಫಾನ 'ಬಿ' ಗ್ರೇಡಿನೊಂದಿಗೆ ತೃತೀಯ ಸ್ಥಾನವನ್ನು, ಕನ್ನಡ ವಿಭಾಗದ ಕಥೆ ಹೇಳುವ
ಸ್ಪರ್ಧೆಯಲ್ಲಿ ಭಾಗವಹಿಸಿದ ಭವಿಶ್ 'ಬಿ' ಗ್ರೇಡನ್ನು ಪಡೆಯುವುದರೊಂದಿಗೆ
ಎಲ್.ಪಿ.ಕನ್ನಡ ವಿಭಾಗದಲ್ಲಿ ಸಮಗ್ರ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
No comments:
Post a Comment