Sunday 16 August 2015

ಸ್ವಾತಂತ್ರ್ಯ ದಿನಾಚರಣೆ              15-08-2015 ಶನಿವಾರದಂದು ಸ್ವಾತಂತ್ರ್ಯ ದಿನಾಚರಣೆ ಬಹಳ ಯಶಸ್ವಿಯಾಗಿ ಜರಗಿತು. ಶಾಲಾ ಆಡಳಿತ ಮಂಡಳಿ ಪ್ರತಿನಿಧಿ ಎಂ. ಜೆ. ಕಿಣಿಯವರು ಧ್ವಜಾರೋಹಣ ಗೈದರು. ನಂತರ ಸಭಾಕಾರ್ಯಕ್ರಮ ಜರಗಿತು. ವಾರ್ಡ್ ಸದಸ್ಯರಾದ ಆನಂದ ಮಾಸ್ಟರ್, ಪಿ.ಟಿ.ಎ. ಅಧ್ಯಕ್ಷರು, ಎಂ.ಪಿ.ಟಿ.ಎ. ಅಧ್ಯಕ್ಷರು, ಲಿಲ್ಲಿಭಾಯಿ ಟೀಚರ್, ಮುಖೋಪಾಧ್ಯಾಯಿನಿ ಸುದತಿ ಬಿ. ಮೊದಲಾದವರು ಉಪಸ್ಥಿತರಿದ್ದರು. ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಛದ್ಮವೇಷ ಸ್ಪರ್ಧೆ, ದೇಶಭಕ್ತಿಗೀತೆ, ಭಾಷಣ ಮೊದಲಾದವುಗಳು ಜರಗಿದುವು.ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು.

No comments:

Post a Comment

ಗಣರಾಜ್ಯೋತ್ಸವ