21-08-2015 ರಂದು ಓಣಂ ಹಬ್ಬದ ಆಚರಣೆ ಬಹಳ ವಿಜೃಂಭಣೆಯಿಂದ ಜರಗಿತು. ಮಕ್ಕಳು ಅಧ್ಯಾಪಕರು ಸೇರಿ ಅನಂತ ವಿಧ್ಯಾ ಸಭಾಂಗಣದಲ್ಲಿ ಬಹಳ ಉತ್ತಮವಾದ, ಆಕರ್ಷಕವಾದ ಪೂಕಳಂ ರಚಿಸಿದರು. ನಾಲ್ಕನೆಯ ತರಗತಿಯ ಕಿಶನ್ ಮಹಾಬಲಿ ವೇಷಧಾರಿಯಾಗಿಯೂ ಆತ್ಮಿಕ, ಪ್ರಜಿನ, ವರ್ಷಿತ ಮತ್ತು ತನುಶ್ರೀ ತಿರುವಾದಿರ ವೇಷಧಾರಿಗಳಾಗಿ ಮಕ್ಕಳ ಗಮನ ಸೆಳೆದರು. ನಂತರ ಮಕ್ಕಳಿಗೆ ಓಣಂ ಹಬ್ಬದ ಹಿನ್ನೆಲೆ, ಮಹತ್ವವನ್ನು ತಿಳಿಸಲಾಯಿತು. ಓಣಂ ಸಂಬಂಧಿಸಿದ ವೀಡಿಯೋ ಪ್ರದರ್ಶಿಸಲಾಯಿತು. ಮಧ್ಯಾಹ್ನ ಓಣಂ ಸದ್ಯ ಜರಗಿತು. ಔತಣಕ್ಕೆ ಉಪ್ಪಿನಕಾಯಿ, ಪಚ್ಚಡಿ, ಪಲ್ಯ, ಗಸಿ, ಹಪ್ಪಳ, ಸಾರು, ಅನ್ನ, ಪಾಯಸ, ಇತ್ಯಾದಿ ಬಗೆಗಳಿದ್ದುವು. ಬೆಳಗ್ಗೆ ಎಲ್ಲಾ ಮಕ್ಕಳಿಗೆ ಹೋಳಿಗೆ ವಿತರಿಸಲಾಯಿತು.
No comments:
Post a Comment