Tuesday 30 September 2014

ಜಗತ್ತಿಗೆ ಅನಾವರಣಗೊಂಡ ಶಾಲಾ ಬ್ಲಾಗ್                  ಶಾಲಾ ಬ್ಲಾಗ್ ನ  ಉದ್ಘಾಟನೆಯು 30.9.2014 ಬೆಳಗ್ಗೆ 11 ಗಂಟೆಗೆ ಜರಗಿತು. ಶಾಲಾ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ  ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ  ಪುತ್ತಬ್ಬ ಕುಂಜತ್ತೂರು ಅಧ್ಯಕ್ಷತೆ ವಹಿಸಿದರು.  ಮಾತೆಯರ  ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ  ಶಾರದ  ಬ್ಲಾಗನ್ನು ಉದ್ಘಾಟಿಸಿದರು. ಶಿಕ್ಷಕರಾದ ತೇಜಸ್ ಕಿರಣ್ ಬ್ಲಾಗ್ ನ ಬಗ್ಗೆ ಮಾಹಿತಿಯನ್ನು  ನೀಡಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುದತಿ ಬಿ. ಕಲಿಕಾ ಚಟುವಟಿಕೆಗಳು ಹಾಗೂ  ಮುಂದಿನ ತಿಂಗಳ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಶ್ರೀಮತಿ ಲಿಲ್ಲಿ ಬಾಯಿ ಟೀಚರ್ ಕಂಪ್ಯೂಟರ್ ಶಿಕ್ಷಣದ ಮಹತ್ವವನ್ನು  ಮಕ್ಕಳಿಗೆ ತಿಳಿಸಿದರು. ಶಿಕ್ಷಕರಾದ ತೇಜಸ್ ಕಿರಣ್ ಸ್ವಾಗತಿಸಿ, ಎಸ್ ಆರ್. ಜಿ ಸಂಚಾಲಕಿಯಾದ ಶ್ರೀಮತಿ ಅನಸೂಯ ಟೀಚರ್ ವಂದಿಸಿದರು. ಶ್ರೀಕೃಷ್ಣ ಡಿ.ಕೆ ಕಾರ್ಯಕ್ರಮವನ್ನು ನಿರೂಪಿಸಿದರು. 

No comments:

Post a Comment

ಗಣರಾಜ್ಯೋತ್ಸವ