Sunday 17 August 2014

ಸಂಭ್ರಮದ 68ನೇ ಸ್ವಾತಂತ್ರ್ಯೋತ್ಸವ

          
          ಎಸ್..ಟಿ ವಿದ್ಯಾಲಯದಲ್ಲಿ 68ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತುಶಾಲಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶಾಲಾ ಪ್ರಬಂಧಕರಾದ ಶ್ರೀ ದಿನೇಶ್ ಶೆಣೈ.ಎ೦ ಧ್ವಜಾರೋಹಣಗೈದು ಶುಭ ಸಂದೇಶಗಳನ್ನು ನೀಡಿದರು. ವಾರ್ಡ್ ಸದಸ್ಯರಾದ ಶ್ರೀ ಆನಂದ ಮಾಸ್ತರ್ ಶುಭ ಕೋರಿದರು. ಹೈಸ್ಕೂಲ್ ವಿಭಾಗದ ಪಿ.ಟಿ.ಎ ಉಪಾಧ್ಯಕ್ಷೆ ಶ್ರೀಮತಿ ಹೆಮಲತಾ, ಎಲ್.ಪಿ ವಿಭಾಗದ ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಪುತ್ತಬ್ಬ ಕುಂಜತ್ತೂರುಮದರ್ ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಶಾರದಮುಖ್ಯೋಪಾಧ್ಯಾಯಿನಿಯವರುಗಳಾದ ಶ್ರೀಮತಿ ಮನೋರಮಾ ಕಿಣಿ, ಶ್ರೀಮತಿ ಸುದತಿ.ಬಿಸಲಹಾ ಸಮಿತಿ ಸದಸ್ಯೆ ಶ್ರೀಮತಿ ಲಿಲ್ಲಿ ಬಾಯಿ ಟೀಚರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ನೃತ್ಯಸ್ಥಬ್ದ ಚಿತ್ರ ಪ್ರದರ್ಶನದೇಶ ಭಕ್ತಿಗೀತೆಛದ್ಮವೇಶಸ್ಕೌಟ್-ಗೈಡ್ ದಳದ ಕವಾಯತುಗಳನ್ನು ನಡೆಸಲಾಯಿತುಹೆಚ್ಚಿನ ಮಕ್ಕಳು, ಸಿಬ್ಬಂದಿವರ್ಗದವರುಮಕ್ಕಳ ರಕ್ಷಕರು , ಶಾಲಾಭಿಮಾನಿಗಳು ಉಪಸ್ಥಿತರಿದ್ದರು. 2013-14ರ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ಸಂಪಾದಿಸಿದ ಪ್ರತಿಭಾನ್ವಿತರಿಗೆ ನಗದು ಪುರಸ್ಕಾರವನ್ನೂ, ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಶಾಲಾ ಸಮಾಜ ಶಾಸ್ತ್ರದ ಕ್ಲಬ್ಬಿನ ಕನ್ವೀನರ್ ಶ್ರೀಮತಿ ಮೋಹಿನಿ ಟೀಚರ್ ಸ್ವಾಗತಿಸಿದರುಹಿರಿಯ ಅಧ್ಯಾಪಕರಾದ ಶ್ರೀ ಪುಂಡಲೀಕ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಎಸ್.ಆರ್.ಜಿ ಸಂಚಾಲಕರಾದ ಶ್ರೀ ಕಿರಣ್ ಕುಮಾರ್ ವಂದನಾರ್ಪಣೆಗೈದರುತದನಂತರ ಉದಾರ ದಾನಿಯೂ , ಜೋತಿಷ್ಯರಾದ ಶ್ರೀ ಛತ್ರಪತಿ ಪ್ರಭು ಪ್ರತಿ ವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳಿಗೆ ಸಿಹಿತಿಂಡಿಯನ್ನು ವಿತರಿಸಿದರು.

No comments:

Post a Comment

ಗಣರಾಜ್ಯೋತ್ಸವ