Friday 3 October 2014

ಗಾಂಧೀ ಜಯಂತಿ ಆಚರಣೆ               02-10-2014ರಂದು ಗಾಂಧೀಜಯಂತಿಯನ್ನು ಆಚರಿಸಲಾಯಿತು. ಸ್ಕೌಟ್ ಗೈಡ್ ದಳದವರು ಮತ್ತು ಅಧ್ಯಾಪಕ ವೃಂದದವರಿಂದ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಶಾಲಾ ಪ್ರಾರ್ಥನೆಯೊಂದಿಗೆ ಸಭಾಕಾರ್ಯಕ್ರಮ ಪ್ರಾರಂಭವಾಯಿತು. LP ಶಾಲಾ ಮುಖ್ಯೋಪಾಧ್ಯಾಯಿನಿ ಸುದತಿ ಬಿ. ಯವರು ಗಾಂಧೀಜೀಯವರ ಭಾವಾಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಸ್ವಚ್ಛ ಭಾರತದ ಕುರಿತಾದ ಪ್ರತಿಜ್ಞೆಯನ್ನು ಬೋಧಿಸಿದರು. ವಿದ್ಯಾರ್ಥಿಗಳಿಂದ ದೇಶಭಕ್ಕಿಗೀತೆ ಸ್ಪರ್ಧೆ, ತಕಲಿಯಿಂದ ನೂಲು ತೆಗೆಯುವ ಸ್ಪರ್ಧೆ ನಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಅಧಾಪಕರು ಜೊತೆಗೂಡಿ ಶಾಲಾ ಪರಿಸರವನ್ನು ಶುಚಿಗೊಳಿಸುವ ಕಾರ್ಯಕ್ರಮ ಜರುಗಿತು.

No comments:

Post a Comment

ಗಣರಾಜ್ಯೋತ್ಸವ