Friday 14 November 2014

ಮಕ್ಕಳ ದಿನಾಚರಣೆ

              14-11-2014 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಬೆಳಗ್ಗೆ 10 ಗಂಟೆಗೆ ಸರಿಯಾಗಿ ಆರಂಭವಾದ ಸಭಾಕಾರ್ಯಕ್ರಮದಲ್ಲಿ PTA ಅಧ್ಯಕ್ಷರಾದ ಶ್ರೀಯುತ ಪುತ್ತಬ್ಬ ಕುಂಜತ್ತೂರು ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಲಿಲ್ಲಿ ಟೀಚರ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುದತಿ ಬಿ. ಯವರು ಮಕ್ಕಳ ದಿನಾಚರಣೆಯ ಸಂದೇಶವನ್ನು ನೀಡಿದರು. ಈ ಸಂದರ್ಭದಲ್ಲಿ ಶಾಲಾ ಕ್ರೀಡೋತ್ಸವ ಹಾಗೂ ಕಲೋತ್ಸವದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅದಲ್ಲದೆ ದಿ. ವಿಟ್ಟಪ್ಪ ಶೆಣೈ ಹಾಗೂ ಚಂದ್ರಕಲಾ ಭಾೈ(ನಿವೃತ್ತ ಶಿಕ್ಷಕಿ) ಇವರು ಕೊಡಮಾಡಿದ ನಗದು ಬಹುಮಾನವನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು (ಉತ್ತಮ ನಡತೆ ಮತ್ತು ಕನ್ನಡದಲ್ಲಿ ಹೆಚ್ಚು ಅಂಕ). ನಾಲ್ಕನೇ ತರಗತಿಯ ಅಶ್ರಿಫ ಕಾರ್ಯಕ್ರಮ ನಿರೂಪಿಸಿದರು. ಶಿಲ್ಪ IV B ಸ್ವಾಗತಿಸಿ ಪ್ರಜ್ಞ  IV B ಧನ್ಯವಾದ ನೀಡಿದರು.

No comments:

Post a Comment

ಗಣರಾಜ್ಯೋತ್ಸವ