S A T L S MANJESHWARA
WELCOME TO Shreemad Anantheshwara Temple School Manjeshwara
Pages
HOME
ಶಾಲಾ ಸಂಪನ್ಮೂಲ
ಚಟುವಟಿಕಾ ಕ್ಯಾಲೆಂಡರ್
ವಿದ್ಯಾರ್ಥಿ ಮೂಲೆ
ತರಗತಿ ಕೋಣೆ
ಪತ್ರಿಕಾ ವರದಿ
ಶಾಲಾ ಇತಿಹಾಸ
ವಿದ್ಯಾರ್ಥಿಗಳ ಸಂಖ್ಯೆ
ಹೇಳಿಕೆ
Friday, 14 November 2014
ರಕ್ಷಕರ ಸಮ್ಮೇಳನ
ಮಾಹಿತಿ ಶಿಬಿರ 2014-2015
14-11-2014 ರಂದು ಮಕ್ಕಳ ದಿನಾಚರಣೆಯ ಪ್ರಯುಕ್ತ ಹೆತ್ತವರಿಗಾಗಿ ವಿಶೇಷ ಮಾಹಿತಿ ಶಿಬಿರ ಅಪರಾಹ್ನ 2 ಗಂಟೆ ಸರಿಯಾಗಿ ಆರಂಭವಾಯಿತು. ವಾರ್ಡು ಸದಸ್ಯ ಆನಂದ ಮಾಸ್ತರ್ ಶಿಬಿರವನ್ನು ಉದ್ಘಾಟಿಸಿದರು. PTA ಅಧ್ಯಕ್ಷರುಗಳಾದ ನಿತೀನ್ ಚಂದ್ರ ಪೈ, ಪುತ್ತಬ್ಬ ಕುಂಜತ್ತೂರು, ಆಡಳಿತ ಮಂಡಳಿಯ ಸಲಹಾ ಸಮಿತಿಯ ಸದಸ್ಯೆ ಲಿಲ್ಲಿ ಟೀಚರ್, LP ಶಾಲಾ ಮುಖ್ಯೋಪಾಧ್ಯಾಯಿನಿ ಸುದತಿ ಬಿ. ಉಪಸ್ಥಿತರಿದ್ದರು. ಹಿರಿಯ ಶಿಕ್ಷಕ ಪುಂಡಲೀಕ ನಾಯಕ್ ಕಾರ್ಯಕ್ರಮದ ನೇತೃತ್ವ ವಹಿಸಿದರು. ಮಹೇಶ ಕೆ. ಸಹಕಾರ ನೀಡಿದರು. ಶಿಬಿರದಲ್ಲಿ ಉದ್ದೇಶಗಳು, ಮೌಲ್ಯಗಳು, ಮನೋಭಾವಗಳು, ಅಭ್ಯಾಸಗಳು ಕಲಿಕೆಗೆ ಬೆಂಬಲ ನೀಡುವುದು ಹೇಗೆ ಇತ್ಯಾದಿ ವಿಚಾರಗಳ ಬಗ್ಗೆ ಹೆತ್ತವರಿಗೆ ಮಾಹಿತಿ ನೀಡಲಾಯಿತು. ಮನೆಯ ವಾತಾವರಣ, ಭಾವನಾತ್ಮಕ ಬೆಂಬಲ, ಮಗನೋ ಮಗಳೋ ಒಂದೇ ಇತ್ಯಾದಿ ವಿಚಾರಗಳನ್ನು ವಿವರಿಸಲಾಯಿತು. ಹೆತ್ತವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಸಾಕ್ಷರ 2014-2015
ಸಾಂಸ್ಕೃತಿಕ ಕಾರ್ಯಕ್ರಮಗಳು
ಸಾಕ್ಷರ ಮಕ್ಕಳಿಗಾಗಿ 14-11-2014 ಶುಕ್ರವಾರದಂದು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. PTA ಅಧ್ಯಕ್ಷ ಪುತ್ತಬ್ಬ ಕುಂಜತ್ತೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುದತಿ ಬಿ. ಉಪಸ್ಥಿತರಿದ್ದರು. ಮಕ್ಕಳು ಗುಂಪು ಸಂಗೀತ, ಕತೆ ಹೇಳುವುದು, ಪದ್ಯ ಹಾಡುವುದು ಇತ್ಯಾದಿ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಪ್ರಹಸನ, ಸ್ಮರಣಶಕ್ತಿ ಪರೀಕ್ಷೆ, ಮಂಜಟ್ಟಿ ಹೆಕ್ಕುವ ಆಟ, ಭಾಷಾ ಆಟ ಮೊದಲಾದ ಚಟುವಟಿಕೆಗಳು ನಡೆದವು. ಶಿಕ್ಷಕರಾದ ಮಹೇಶ ಕೆ., ಶ್ರೀಕೃಷ್ಣ, ತೇಜಸ್, ಪದ್ಮಿನಿ, ಅನಸೂಯ ಚಟುವಟಿಕೆಗಳನ್ನು ನಡೆಸಿಕೊಟ್ಟರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮಕ್ಕಳ ದಿನಾಚರಣೆ
14-11-2014 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಬೆಳಗ್ಗೆ 10 ಗಂಟೆಗೆ ಸರಿಯಾಗಿ ಆರಂಭವಾದ ಸಭಾಕಾರ್ಯಕ್ರಮದಲ್ಲಿ PTA ಅಧ್ಯಕ್ಷರಾದ ಶ್ರೀಯುತ ಪುತ್ತಬ್ಬ ಕುಂಜತ್ತೂರು ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಲಿಲ್ಲಿ ಟೀಚರ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುದತಿ ಬಿ. ಯವರು ಮಕ್ಕಳ ದಿನಾಚರಣೆಯ ಸಂದೇಶವನ್ನು ನೀಡಿದರು. ಈ ಸಂದರ್ಭದಲ್ಲಿ ಶಾಲಾ ಕ್ರೀಡೋತ್ಸವ ಹಾಗೂ ಕಲೋತ್ಸವದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅದಲ್ಲದೆ ದಿ. ವಿಟ್ಟಪ್ಪ ಶೆಣೈ ಹಾಗೂ ಚಂದ್ರಕಲಾ ಭಾೈ(ನಿವೃತ್ತ ಶಿಕ್ಷಕಿ) ಇವರು ಕೊಡಮಾಡಿದ ನಗದು ಬಹುಮಾನವನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು (ಉತ್ತಮ ನಡತೆ ಮತ್ತು ಕನ್ನಡದಲ್ಲಿ ಹೆಚ್ಚು ಅಂಕ). ನಾಲ್ಕನೇ ತರಗತಿಯ ಅಶ್ರಿಫ ಕಾರ್ಯಕ್ರಮ ನಿರೂಪಿಸಿದರು. ಶಿಲ್ಪ IV B ಸ್ವಾಗತಿಸಿ ಪ್ರಜ್ಞ IV B ಧನ್ಯವಾದ ನೀಡಿದರು.
Wednesday, 12 November 2014
ಅರಳಿದ ಪ್ರತಿಭೆಗಳು.......
12-11-2014 ರಂದು ಶಾಲಾ ಮಟ್ಟದ ಕಲೋತ್ಸವವು ಬಹಳ ವಿಜೃಂಭಣೆಯಿಂದ ಜರುಗಿತು. ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
Thursday, 6 November 2014
ಕಾರ್ತಿಕ ಹುಣ್ಣಿಮೆ
06-11-2014 ರಂದು ಕಾರ್ತಿಕ ಹುಣ್ಣಿಮೆಯ ಪ್ರಯುಕ್ತ ಶ್ರೀ ಮದನಂತೇಶ್ವರ ದೇವಳದ ದೇವರು ಶಾಲೆಗೆ ಪಲ್ಲಕ್ಕಿಯನ್ನು ಏರಿ ಬರುವ ಕಾರ್ಯಕ್ರಮವು ಜರುಗಿತು. ಶೀ ದೇವರಿಗೆ ಶಾಲೆಯಲ್ಲಿ ವಿಶೇಷ ಪೂಜೆ ಜರಗಿತು. ಅಧ್ಯಾಪಕರು, ಸಿಬ್ಬಂದಿ ವರ್ಗದವರು ವಿವಿಧ ಸಮಿತಿಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಉಪ ಜಿಲ್ಲಾ ಕ್ರೀಡೋತ್ಸವ
06-11-2014 ರಂದು S.V.V.H.S.S. ಮೀಯಪದವಿನಲ್ಲಿ ನಡೆದ ಉಪ ಜಿಲ್ಲಾ ಮಟ್ಟದ ಕ್ರೀಡೋತ್ಸವದಲ್ಲಿ ಸ್ಟೇಂಡಿಂಗ್ ಬ್ರೋಡ್ ಜಂಪ್ ವಿಭಾಗದಲ್ಲಿ ನಮ್ಮ ಶಾಲೆಯ ಮನೋಜ್ ಎಂಬ ವಿದ್ಯಾರ್ಥಿಯು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾನೆ
06-11-2014 ರಂದು S.V.V.H.S.S. ಮೀಯಪದವಿನಲ್ಲಿ ನಡೆದ ಉಪ ಜಿಲ್ಲಾ ಮಟ್ಟದ ಕ್ರೀಡೋತ್ಸವದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು.
Tuesday, 4 November 2014
ತುಳಸೀ ಪೂಜೆ
4-11-2014
ರಂದು ನಮ್ಮ ಶಾಲೆಯಲ್ಲಿ ತುಳಸೀ ಪೂಜೆಯು ಜರುಗಿತು. ಪೂಜೆಯ ಬಳಿಕ
ಎಲ್ಲರಿಗೂ
ಪ್ರಸಾದವನ್ನು ವಿತರಿಸಲಾಯಿತು.
Newer Posts
Older Posts
Home
Subscribe to:
Posts (Atom)
ಗಣರಾಜ್ಯೋತ್ಸವ
Dasara Celebration
ತರಗತಿಯ ರಕ್ಷಕ – ಶಿಕ್ಷಕ ಸಂಘದ ಸಭೆ
ತರಗತಿಯ ರಕ್ಷಕ – ಶಿಕ್ಷಕ ಸಂಘದ ಸಭೆಗಳು 30.09.2014 ರಂದು ಜರಗಿತು. ಎಲ್ಲಾ ತರಗತಿಯಲ್ಲೂ ಆಯಾ ತರಗತಿ ಅಧ್ಯಾಪಕರು ಸಭೆಯ ನೇತೃತ್ವವನ್ನು ವಹಿಸಿದ...
ಗಣರಾಜ್ಯೋತ್ಸವ