21-08-2015 ರಂದು ಓಣಂ ಹಬ್ಬದ ಆಚರಣೆ ಬಹಳ ವಿಜೃಂಭಣೆಯಿಂದ ಜರಗಿತು. ಮಕ್ಕಳು ಅಧ್ಯಾಪಕರು ಸೇರಿ ಅನಂತ ವಿಧ್ಯಾ ಸಭಾಂಗಣದಲ್ಲಿ ಬಹಳ ಉತ್ತಮವಾದ, ಆಕರ್ಷಕವಾದ ಪೂಕಳಂ ರಚಿಸಿದರು. ನಾಲ್ಕನೆಯ ತರಗತಿಯ ಕಿಶನ್ ಮಹಾಬಲಿ ವೇಷಧಾರಿಯಾಗಿಯೂ ಆತ್ಮಿಕ, ಪ್ರಜಿನ, ವರ್ಷಿತ ಮತ್ತು ತನುಶ್ರೀ ತಿರುವಾದಿರ ವೇಷಧಾರಿಗಳಾಗಿ ಮಕ್ಕಳ ಗಮನ ಸೆಳೆದರು. ನಂತರ ಮಕ್ಕಳಿಗೆ ಓಣಂ ಹಬ್ಬದ ಹಿನ್ನೆಲೆ, ಮಹತ್ವವನ್ನು ತಿಳಿಸಲಾಯಿತು. ಓಣಂ ಸಂಬಂಧಿಸಿದ ವೀಡಿಯೋ ಪ್ರದರ್ಶಿಸಲಾಯಿತು. ಮಧ್ಯಾಹ್ನ ಓಣಂ ಸದ್ಯ ಜರಗಿತು. ಔತಣಕ್ಕೆ ಉಪ್ಪಿನಕಾಯಿ, ಪಚ್ಚಡಿ, ಪಲ್ಯ, ಗಸಿ, ಹಪ್ಪಳ, ಸಾರು, ಅನ್ನ, ಪಾಯಸ, ಇತ್ಯಾದಿ ಬಗೆಗಳಿದ್ದುವು. ಬೆಳಗ್ಗೆ ಎಲ್ಲಾ ಮಕ್ಕಳಿಗೆ ಹೋಳಿಗೆ ವಿತರಿಸಲಾಯಿತು.
Saturday, 22 August 2015
Sunday, 16 August 2015
ಸ್ವಾತಂತ್ರ್ಯ ದಿನಾಚರಣೆ
15-08-2015 ಶನಿವಾರದಂದು ಸ್ವಾತಂತ್ರ್ಯ ದಿನಾಚರಣೆ ಬಹಳ ಯಶಸ್ವಿಯಾಗಿ ಜರಗಿತು. ಶಾಲಾ ಆಡಳಿತ ಮಂಡಳಿ ಪ್ರತಿನಿಧಿ ಎಂ. ಜೆ. ಕಿಣಿಯವರು ಧ್ವಜಾರೋಹಣ ಗೈದರು. ನಂತರ ಸಭಾಕಾರ್ಯಕ್ರಮ ಜರಗಿತು. ವಾರ್ಡ್ ಸದಸ್ಯರಾದ ಆನಂದ ಮಾಸ್ಟರ್, ಪಿ.ಟಿ.ಎ. ಅಧ್ಯಕ್ಷರು, ಎಂ.ಪಿ.ಟಿ.ಎ. ಅಧ್ಯಕ್ಷರು, ಲಿಲ್ಲಿಭಾಯಿ ಟೀಚರ್, ಮುಖೋಪಾಧ್ಯಾಯಿನಿ ಸುದತಿ ಬಿ. ಮೊದಲಾದವರು ಉಪಸ್ಥಿತರಿದ್ದರು. ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಛದ್ಮವೇಷ ಸ್ಪರ್ಧೆ, ದೇಶಭಕ್ತಿಗೀತೆ, ಭಾಷಣ ಮೊದಲಾದವುಗಳು ಜರಗಿದುವು.ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು.
Monday, 10 August 2015
ಯುದ್ಧ ವಿರೋಧಿ ದಿನ
09-08-2015 ರಂದು ಹಿರೋಶಿಮ ಮತ್ತು ನಾಗಸಾಕಿ ದುರಂತದ ನೆನಪಿಗಾಗಿ ಯುದ್ಧ ವಿರೋಧಿ ದಿನವನ್ನಾಗಿ ಆಚರಿಸಲಾಯಿತು. ಈ ದುರಂತದ ಪರಿಣಾಮಗಳು ಯುದ್ಧದಿಂದ ಉಂಟಾಗುವ ಭೀಕರ ಪರಿಣಾಮಗಳ ಕುರಿತು ವಿವರಿಸಲಾಯಿತು. ಪ್ರತಿಯೊಬ್ಬರೂ ಶಾಂತಿಯನ್ನು ಬಯಸುವ ಸಂದೇಶವನ್ನು ನೀಡಲಾಯಿತು. ಯುದ್ಧಕ್ಕೆ ಎದುರಾದ ಘೋಷಣಾ ವಾಕ್ಯಗಳನ್ನು ತಯಾರಿಸಲಾಯಿತು.
Subscribe to:
Posts (Atom)
-
ತರಗತಿಯ ರಕ್ಷಕ – ಶಿಕ್ಷಕ ಸಂಘದ ಸಭೆಗಳು 30.09.2014 ರಂದು ಜರಗಿತು. ಎಲ್ಲಾ ತರಗತಿಯಲ್ಲೂ ಆಯಾ ತರಗತಿ ಅಧ್ಯಾಪಕರು ಸಭೆಯ ನೇತೃತ್ವವನ್ನು ವಹಿಸಿದ...