Wednesday, 29 October 2014

"ರಸೋಯಿ ಘರ್"




             29-10-2014 ರಂದು ಹಿಂದಿ ಪಾಠ ಭಾಗದ"ಅಡುಗೆ ಮನೆ"ಎಂಬ ಚಟುವಟಿಕೆಯನ್ನು ನಡೆಸಲಾಯಿತು. ವಿದ್ಯಾರ್ಥಿಗಳನ್ನು ಐದು ಗುಂಪುಗಳಾಗಿ ವಿಂಗಡಿಸಲಾಯಿತು. ವಿವಿಧ ಗುಂಪುಗಳಲ್ಲಿ ಕುಳಿತ ವಿದ್ಯಾರ್ಥಿಗಳು ಅವಲಕ್ಕಿ, ಚಹಾ ಮತ್ತು ಕಾಫಿಯನ್ನು ಸಿದ್ಧಪಡಿಸಿ ಸವಿದರು. ಉತ್ತಮ ರೀತಿಯಲ್ಲಿತಿಂಡಿ ತಯಾರಿಸಿದ ಗುಂಪುಗಳಿಗೆ ಬಹುಮಾನ ನೀಡಲಾಯಿತು. ಈ ಚಟುವಟಿಕೆಯನ್ನು ಸಲಹಾ ಸಮಿತಿಯ ಸದಸ್ಯೆಯಾದ ಶ್ರೀಮತಿ ಲಿಲ್ಲಿ ಟೀಚರ್ ರವರು ನಡೆಸಿಕೊಟ್ಟರು. 

Thursday, 23 October 2014

ವೇಗದ ಓಟ

ಶಾಲಾ ಮಟ್ಟದ ಕ್ರೀಡೋತ್ಸವ

              23-10-2014 ರಂದು ಶಾಲಾ ಮಟ್ಟದ ಕ್ರೀಡೋತ್ಸವವು ಜರಗಿತು.

"BEST BLOG AWARD 2014-2015"


                2014-2015 ನೇ ಶೈಕ್ಷಣಿಕ ವರ್ಷದಲ್ಲಿ ನಮ್ಮ ಶಾಲಾ ಬ್ಲಾಗ್ ಮಂಜೇಶ್ವರ ಉಪ ಜಿಲ್ಲಾ ಮಟ್ಟದಲ್ಲಿ "ಉತ್ತಮ ಬ್ಲಾಗ್" ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ.

Friday, 17 October 2014

ಸಾಧನೆ

     

            16-10-2014 ರಂದು ಮತ್ತು 17-10-2014 ರಂದು ಸಂತ ಜೋಸೆಫ್ ಕಳಿಯೂರಿನಲ್ಲಿ ನಡೆದ ವೃತ್ತಿ ಪರಿಚಯ ಮೇಳದಲ್ಲಿ ಬುಕ್ ಬೈಂಡಿಂಗ್ ನಲ್ಲಿ ನಮ್ಮ ಶಾಲಾ  ದೀಕ್ಷಿತ್ ರಾಜ್ ಎಂಬ ವಿದ್ಯಾರ್ಥಿ ಎ ಗ್ರೇಡ್ ನೊಂದಿಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾನೆ.
            
              16-10-2014 ರಂದು ಮತ್ತು 17-10-2014 ರಂದು ಸಂತ ಜೋಸೆಫ್ ಕಳಿಯೂರಿನಲ್ಲಿ ನಡೆದ ಮೇಳಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು.

ಮೇಳಗಳು

                  16-10-2014 ರಂದು ಮತ್ತು 17-10-2014 ರಂದು ಸಂತ ಜೋಸೆಫ್ ಕಳಿಯೂರಿನಲ್ಲಿ ನಡೆದ ವಿಜ್ಞಾನ ಮೇಳ, ಗಣಿತ ಮೇಳ, ಸಮಾಜ ವಿಜ್ಞಾನ ಮೇಳ ಮತ್ತು ವೃತ್ತಿ ಕರಕುಶಲ ಮೇಳಗಳಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.



               

Sunday, 5 October 2014

ಶ್ರೀ ಶಾರದಾ ಮಹೋತ್ಸವ

               ನಮ್ಮ ಶಾಲೆಯಲ್ಲಿ ಶ್ರೀ ಶಾರದಾ ಮಹೋತ್ಸವವು ತಾ 30-9-2014 ರಿಂದ 4-10-2014 ತನಕ ಜರುಗಿತುಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಕ್ತಿ ಶ್ರದ್ಧೆಯಿಂದ ಪಾಲ್ಗೊಂಡರು.

Friday, 3 October 2014

ಗಾಂಧೀ ಜಯಂತಿ ಆಚರಣೆ



               02-10-2014ರಂದು ಗಾಂಧೀಜಯಂತಿಯನ್ನು ಆಚರಿಸಲಾಯಿತು. ಸ್ಕೌಟ್ ಗೈಡ್ ದಳದವರು ಮತ್ತು ಅಧ್ಯಾಪಕ ವೃಂದದವರಿಂದ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಶಾಲಾ ಪ್ರಾರ್ಥನೆಯೊಂದಿಗೆ ಸಭಾಕಾರ್ಯಕ್ರಮ ಪ್ರಾರಂಭವಾಯಿತು. LP ಶಾಲಾ ಮುಖ್ಯೋಪಾಧ್ಯಾಯಿನಿ ಸುದತಿ ಬಿ. ಯವರು ಗಾಂಧೀಜೀಯವರ ಭಾವಾಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಸ್ವಚ್ಛ ಭಾರತದ ಕುರಿತಾದ ಪ್ರತಿಜ್ಞೆಯನ್ನು ಬೋಧಿಸಿದರು. ವಿದ್ಯಾರ್ಥಿಗಳಿಂದ ದೇಶಭಕ್ಕಿಗೀತೆ ಸ್ಪರ್ಧೆ, ತಕಲಿಯಿಂದ ನೂಲು ತೆಗೆಯುವ ಸ್ಪರ್ಧೆ ನಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಅಧಾಪಕರು ಜೊತೆಗೂಡಿ ಶಾಲಾ ಪರಿಸರವನ್ನು ಶುಚಿಗೊಳಿಸುವ ಕಾರ್ಯಕ್ರಮ ಜರುಗಿತು.

ಗಣರಾಜ್ಯೋತ್ಸವ