Saturday, 25 June 2016
Wednesday, 8 June 2016
ವಿಶ್ವ ಪರಿಸರ ದಿನಾಚರಣೆ
07-06-2016 ರಂದು ಪರಿಸರ ದಿನಾಚರಣೆ ಅಂಗವಾಗಿ ಪರಿಸರದ ಮಹತ್ವವನ್ನು ತಿಳಿಸಲಾಯಿತು. ಪರಿಸರ ಸಂರಕ್ಷಣೆ ಕುರಿತಾದ ಪ್ರತಿಜ್ಞೆ ಸ್ವೀಕಾರ, ಗಿಡಗಳ ವಿತರಣೆ ಇತ್ಯಾದಿ ಕಾರ್ಯಕ್ರಮಗಳು ಜರಗಿದವು.
Saturday, 4 June 2016
ಸಿ.ಪಿ.ಟಿ.ಎ
03-06-2016 ರಂದು ಎಲ್ಲಾ ತರಗತಿಗಳ ಸಿ.ಪಿ.ಟಿ.ಎ. ಸಭೆ ನಡೆಯಿತು. ಹೆತ್ತವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಹೆತ್ತವರಿಗೆ ಮಕ್ಕಳ ಶಾಲಾ ಚಟುವಟಿಕೆಗಳ ಬಗ್ಗೆ, ಪುಸ್ತಕ, ಹಾಜರಾತಿ, ಮಧ್ಯಾಹ್ನದ ಊಟ ಇತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ನೀಡಲಾಯಿತು.
Thursday, 2 June 2016
ಪ್ರವೇಶೋತ್ಸವ
01.06.2016 ರಂದು ಪ್ರವೇಶೋತ್ಸವ ಕಾರ್ಯಕ್ರಮ ಜರಗಿತು. ಬ್ಯಾಂಡ್ ಮೇಳದ ಮೆರವಣಿಗೆಯೊಂದಿಗೆ ಮಕ್ಕಳನ್ನು ಸ್ವಾಗತಿಸಲಾಯಿತು. ಶಾಲಾ ಪ್ರಬಂಧಕ ದಿನೇಶ್ ಶೆಣೈ ಮೆರವಣಿಗೆಯನ್ನು ಸ್ವಾಗತಿಸಿದರು. ನಂತರ 'ಅನಂತ ವಿಧ್ಯಾ' ಸಭಾಂಗಣದಲ್ಲಿ ನಡೆದ ಸಭಾಕಾರ್ಯಕ್ರಮವನ್ನು ವಾರ್ಡ್ ಸದಸ್ಯೆ ಸುಪ್ರಿಯಾ ಶೆಣೈ ಉದ್ಘಾಟಿಸಿದರು. ಪಿ.ಟಿ.ಎ. ಅಧ್ಯಕ್ಷ ಫರೀದ್ M P ಅಧ್ಯಕ್ಷತೆ ವಹಿಸಿದ್ದರು. ಲಿಲ್ಲಿ ಭಾಯಿ ಟೀಚರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಮಹೇಶ ಕೆ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ತೇಜಸ್ ಕಿರಣ್ ಸ್ವಾಗತಿಸಿ ಅನುಸೂಯ ಟೀಚರ್ ವಂದಿಸಿದರು. ಶ್ರೀಕೃಷ್ಣ ಡಿ.ಕೆ. ಕಾರ್ಯಕ್ರಮ ನಿರೂಪಿಸಿದರು. ಒಂದನೇ ತರಗತಿಯ ಮಕ್ಕಳಿಗೆ ಉಚಿತ ಕಿಟ್ ನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಪಿ.ಟಿ.ಎ. ಅಧ್ಯಕ್ಷರ ವತಿಯಿಂದ ಸಿಹಿತಿಂಡಿ, ಬಲೂನ್ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
Sunday, 31 January 2016
Thursday, 14 January 2016
ವಿಧ್ಯಾರಂಗ ಕಲಾಸಾಹಿತ್ಯ ವೇದಿಕೆ
ವಿದ್ಯಾರಂಗ ಕಲಾಸಾಹಿತ್ಯ ವೇದಿಕೆಯ ಅಂಗವಾಗಿ
ಮಕ್ಕಳಲ್ಲಿ ಕಲೆ, ಸಾಹಿತ್ಯಗಳಲ್ಲಿ ಆಸಕ್ತಿಯನ್ನು ಬೆಳೆಸಲು
ತರಗತಿಗಳಲ್ಲಿ ಕಥೆ, ಕವಿತೆ, ಬಾಯಿತಾಳ, ಒಗಟು, ಚಿತ್ರ ರಚನೆ ಇತ್ಯಾದಿ ಚಟುವಟಿಕೆಗಳನ್ನು ನಡೆಸಲಾಯಿತು. ಈ ಚಟುವಟಿಕೆಗಳ
ಉದ್ಘಾಟನೆಯನ್ನು ದಿನಾಂಕ 11-01-2016 ರಂದು ಅಸೆಂಬ್ಲಿಯಲ್ಲಿ ನಡೆಸಲಾಯಿತು.
ಪಿ.ಟಿ.ಎ. ಅಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಹೇಶ್ ಸರ್ ಮತ್ತು ಸುದತಿ ಟೀಚರ್ ಬಾಯಿ
ತಾಳ ಹಾಡುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುದತಿ ಟೀಚರ್ ತರಗತಿಗಳಲ್ಲಿ
ನಡೆಸಲ್ಪಡುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
Thursday, 3 December 2015
ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವ
ಜಿ.ಎಚ್.ಎಸ್.ಎಸ್. ಬೇಕೂರಿನಲ್ಲಿ ನಡೆದ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ
ಎಸ್.ಎ.ಟಿ.ಎಲ್.ಪಿ.ಶಾಲೆ ಮಂಜೇಶ್ವರದ ವಿದ್ಯಾರ್ಥಿಗಳು ಎಲ್.ಪಿ. ಸಾಮಾನ್ಯ ವಿಭಾಗದ ಗುಂಪು ಸಂಗೀತ
ಸ್ಪರ್ಧೆಯಲ್ಲಿ ಭಾಗವಹಿಸಿ 'ಎ' ಗ್ರೇಡನ್ನು, ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ
ಭಾಗವಹಿಸಿ 'ಎ' ಗ್ರೇಡಿನೊಂದಿಗೆ ದ್ವಿತೀಯ
ಸ್ಥಾನವನ್ನು, ಜಲವರ್ಣ
ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರಜೀನ ಬಿ. 'ಬಿ'ಗ್ರೇಡಿನೊಂದಿಗೆ ನಾಲ್ಕನೆಯ
ಸ್ಥಾನವನ್ನು, ಜಾನಪದ
ನೃತ್ಯ ಸ್ಪರ್ಧೆಯಲ್ಲಿ
ಭಾಗವಹಿಸಿದ ಪಾಯಲ್ ಎಮ್.ಪಿ. 'ಎ' ಗ್ರೇಡಿನೊಂದಿಗೆ ದ್ವಿತೀಯ
ಸ್ಥಾನವನ್ನು, ಭರತನಾಟ್ಯ
ಸ್ಪರ್ಧೆಯಲ್ಲಿ ಭಾಗವಹಿಸಿ 'ಬಿ' ಗ್ರೇಡನ್ನು, ಮಾಪಿಳ್ಳಪಾಟ್ ಸ್ಪರ್ಧೆಯಲ್ಲಿ
ಭಾಗವಹಿಸಿದ ಅಶ್ ಫಾನ 'ಬಿ' ಗ್ರೇಡಿನೊಂದಿಗೆ ತೃತೀಯ ಸ್ಥಾನವನ್ನು, ಕನ್ನಡ ವಿಭಾಗದ ಕಥೆ ಹೇಳುವ
ಸ್ಪರ್ಧೆಯಲ್ಲಿ ಭಾಗವಹಿಸಿದ ಭವಿಶ್ 'ಬಿ' ಗ್ರೇಡನ್ನು ಪಡೆಯುವುದರೊಂದಿಗೆ
ಎಲ್.ಪಿ.ಕನ್ನಡ ವಿಭಾಗದಲ್ಲಿ ಸಮಗ್ರ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
Subscribe to:
Posts (Atom)
