2014-2015 ನೇ ಸಾಲಿನ 'ಹಿರಿಮೆ ' ಕಾರ್ಯಕ್ರಮ 18-03-2015 ರಂದು 'ಅನಂತವಿಧ್ಯಾ' ಸಭಾಂಗಣದಲ್ಲಿ ಜರಗಿತು. ಬೆಳಗ್ಗೆ 10.30 ಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಯಿತು. ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಅನುಸೂಯ ಟೀಚರ್ ಅತಿಥಿಗಳನ್ನು ಸ್ವಾಗತಿಸಿದರು. PTA ಅಧ್ಯಕ್ಷ ಪುತ್ತಬ್ಬ ಕುಂಜತ್ತೂರು ಸಭಾಧ್ಯಕ್ಷತೆ ವಹಿಸಿದರು. ಹಿರಿಯರಾದ ಲಿಲ್ಲಿ ಟೀಚರ್ ಹಿರಿಮೆ ಕಾರ್ಯಕ್ರಮವನ್ನು ಔಪಚಾರಿಕವಾಗಿ ಉಧ್ಘಾಟಿಸಿದರು. ಕಾರ್ಯಕ್ರಮಗಳ ಛಾಯಾಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಉಧ್ಘಾಟಿಸಲಾಯಿತು. 2014-15 ನೇ ಸಾಲಿನಲ್ಲಿ ಜರಗಿದ ವಿವಿಧ ಕಾರ್ಯಕ್ರಮಗಳ ಕಿರು ನೋಟವನ್ನು ಹೆತ್ತವರಿಗೆ ಪ್ರೋಜೆಕ್ಟರ್ ಮೂಲಕ ತೋರಿಸಲಾಯಿತು. ನಂತರ ಆಯಾ ತರಗತಿಗಳಲ್ಲಿ ಪ್ರದರ್ಶಿಸಲಾದ ಕಲಿಕೋಪಕರಣಗಳನ್ನು ಹಾಗೂ ಮಕ್ಕಳ ಉತ್ಪನ್ನಗಳನ್ನು ವೀಕ್ಷಿಸಲು ಅವಕಾಶ ನೀಡಲಾಯಿತು. ಹೆತ್ತವರು ಪ್ರದರ್ಶನ ವೀಕ್ಷಿಸಿ ತಮ್ಮ ಅಭಿಪ್ರಾಯವನ್ನು ಪುಸ್ತಕದಲ್ಲಿ ದಾಖಲಿಸಿದರು. ನಂತರ ಸಭಾಕಾರ್ಯಕ್ರಮ ಮುಂದುವರಿಯಿತು. ಪ್ರೌಢಶಾಲೆ ಮುಖೋಪಾಧ್ಯಾಯಿನಿ ಮನೋರಮ ಕಿಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಮುಖೋಪಾಧ್ಯಾಯಿನಿ ಸುದತಿ ಬಿ. ಮುಂದಿನ ವರ್ಷದ ಸಾಮಾನ್ಯ ಯೋಜನೆಗಳು, ಈ ವರ್ಷದ ಹಿರಿಮೆಗಳ ಬಗ್ಗೆ ಸಂಕ್ಷಿಪ್ತ ವಿವರಗಳನ್ನು ನೀಡಿದರು. ಹೆತ್ತವರು ಹೆಚ್ಚಿನ ಸಹಕಾರ ನೀಡುವಂತೆ ಕೇಳಿಕೊಂಡರು. ಹೆತ್ತವರ ಪರವಾಗಿ ಕಿರಣ್ ಕುಮಾರ್ ಕೆಲವು ಸಲಹೆಗಳನ್ನು ನೀಡಿದರು. PTA ಪದಾಧಿಕಾರಿಗಳಾದ ಫರೀದ್, ನವೀನ್ ಅಡಪ್ಪ, MPTA ಅಧ್ಯಕ್ಷೆ ಶಾರದಾ ಉಪಸ್ಥಿತರಿದ್ದರು. ಹೆತ್ತವರಿಗೆ ಲಘ ಉಪಹಾರ ನೀಡಲಾಯಿತು. ಮಹೇಶ ಕೆ. ವಂದಿಸಿ, ಶ್ರೀಕೃಷ್ಣ ಡಿ.ಕೆ. ನಿರೂಪಿಸಿದರು. ಶಿಕ್ಷಕ ತೇಜಸ್ ಕಿರಣ್ ಸಹಕರಿಸಿದರು.
Saturday, 21 March 2015
Monday, 23 February 2015
ಅಬಾಕಸ್ ತರಗತಿ
21-02-2015 ರಂದು ನಮ್ಮ ಶಾಲೆಯಲ್ಲಿ 'ಅಬಾಕಸ್' ತರಗತಿ ಆರಂಭಿಸಲಾಯಿತು. ಅಪರಾಹ್ನ 2 ಗಂಟೆಗೆ ಸರಿಯಾಗಿ ಜರಗಿದ ಸಭಾ ಕಾರ್ಯಕ್ರಮವನ್ನು ಲಿಲ್ಲೀ ಟೀಚರ್ ರವರು ಉಧ್ಘಾಟಿಸಿದರು. ಮುಖ್ಯೋಪಾಧ್ಯಾಯಿನಿ ಸುದತಿ ಬಿ. ಯವರು ಸ್ವಾಗತಿಸಿದರು. ಅಬಾಕಸ್ ತರಗತಿ ನಡೆಸುವ ಅಧ್ಯಾಪಕರಾದ ಶ್ರೀಯುತ ಉದಯ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ತರಗತಿಯ ಕುರಿತಾಗಿ ವಿವರಣೆ ನೀಡಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಮನೋರಮ ಕಿಣಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಉದಯ ಕುಮಾರ್ ತರಗತಿ ನಡೆಸಿದರು. ಸುಮಾರು 40 ವಿದ್ಯಾರ್ಥಿಗಳು ಆರಂಭದ ದಿನ ಭಾಗವಹಿಸಿದರು.
Wednesday, 18 February 2015
ಶೈಕ್ಷಣಿಕ ಪ್ರವಾಸ
ನಾಲ್ಕನೆಯ ತರಗತಿಯ ಮಕ್ಕಳಿಗೆ ಶಾಲಾ ಪ್ರವಾಸ ಏರ್ಪಡಿಸಿಲಾಯಿತು. 59 ಮಕ್ಕಳು ಹಾಗೂ 7 ಅಧ್ಯಾಪಕರು ಒಟ್ಟಾಗಿ 9 ಗಂಟೆಗೆ ಶಾಲೆಯಿಂದ ಹೊರಟು ಮಂಗಳೂರಿಗೆ ಬಂದೆವು. ಬೆಳಗ್ಗೆ ಕದ್ರಿ ಪಾರ್ಕ್ ನಲ್ಲಿ ಉಪಹಾರ ಮುಗಿಸಿದೆವು. ಅಲ್ಲಿಂದ ಬಿಜೈನಲ್ಲಿರುವ ಪುರಾತನ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದೆವು. ಅಲ್ಲಿರುವ ಪುರಾತನ ವಸ್ತುಗಳನ್ನು ಮಕ್ಕಳು ಆಸಕ್ತಿಯಿಂದ ವೀಕ್ಷಿಸಿದರು. ನಂತರ ಎಯ್ಯಾಡಿಯಲ್ಲಿರುವ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದೆವು. ಹೊಸದಿಗಂತ ಪ್ರೆಸ್, ಪ್ಲಾಸ್ಟಿಕ್ ವಸ್ತುಗಳ ತಯಾರಿ, ಕಬ್ಬಿಣದ ಡಬ್ಬ ತಯಾರಿ ಮತ್ತು ಆಹಾರ ವಸ್ತುಗಳನ್ನು ತಯಾರಿಸುವ ಕೈಗಾರಿಕೆಗಳನ್ನು ಸಂದರ್ಶಿಸಿದೆವು. ಅಲ್ಲಿನ ಕೆಲಸ ಕಾರ್ಯಗಳ ವಿಧಾನವನ್ನು ತಿಳಿದುಕೊಂಡರು. ಮಧ್ಯಾಹ್ನದ ಊಟವನ್ನು ಅಲ್ಲೇ ಸಮೀಪದ ಸಭಾಂಗಣದಲ್ಲಿ ಪೂರೈಸಲಾಯಿತು. ಅಲ್ಲಿಂದ ಪಿಲಿಕುಳ ಮೃಗಾಲಯವನ್ನು ಸಂದರ್ಶಿಸಿದೆವು. ಅಲ್ಲಿ ಪ್ರಾಣಿಗಳು, ಪಕ್ಷಿಗಳು ಮತ್ತು ಉರಗಗಳನ್ನು ವೀಕ್ಷಿಸಿದೆವು. ಬಳಿಕ ಪಿಲಿಕುಳ ಕಲಾ ಗ್ರಾಮಕ್ಕೆ ಭೇಟಿ ನೀಡಿದೆವು. ಅಲ್ಲಿ ಮಡಿಕೆ ತಯಾರಿ, ಅವಲಕ್ಕಿ ತಯಾರಿ, ಎತ್ತಿನ ಗಾಣ, ಕಬ್ಬಿಣ ಕೆಲಸ, ಕೈ ಮಗ್ಗ ಮತ್ತು ಬೆತ್ತದ ಪಿಠೋಪಕರಣಗಳ ತಯಾರಿ ಇತ್ಯಾದಿಗಳನ್ನು ವೀಕ್ಷಿಸಿದೆವು. ನಂತರ 4 ಗಂಟೆಗೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ತಲಪಿದೆವು. ಅಲ್ಲಿ ಅನೇಕ ವಿಜ್ಞಾನದ ಕೌತುಕಗಳು, ವಸ್ತುಗಳು ಮತ್ತು 3ಡಿ ಪ್ರದರ್ಶನವನ್ನು ವೀಕ್ಷಿಸಿದೆವು. 5.30 ಕ್ಕೆ ಸರಿಯಾಗಿ ಊರಿಗೆ ಹೊರಟೆವು. ಒಟ್ಟಿನಲ್ಲಿ ಪ್ರವಾಸ ಮಕ್ಕಳಿಗೂ, ಅಧ್ಯಾಪಕರಿಗೂ ಉತ್ತಮ ಅನುಭವಗಳನ್ನು ನೀಡಿತು.
Thursday, 12 February 2015
ಮೆಟ್ರಿಕ್ ಶಿಬಿರ
10-02-2015 ನೇ ಮಂಗಳವಾರ ನಮ್ಮ ಶಾಲೆಯಲ್ಲಿ ಮೆಟ್ರಿಕ್ ಶಿಬಿರ ಜರಗಿತು. ಬೆಳಗ್ಗೆ 10 ಗಂಟೆಗೆ ಸರಿಯಾಗಿ ಶಾಲಾ ಮುಖೋಪಾಧ್ಯಾಯಿನಿ ಸುದತಿ ಬಿ. ಯವರು ಶಿಬಿರವನ್ನು ಉಧ್ಘಾಟಿಸಿ ಮಾತನಾಡಿದರು. ಶಿಬಿರದ ಉದ್ದೇಶ ಹಾಗೂ ಚಟುವಟಿಕೆಗಳ ಕಿರು ವಿವರಣೆ ನೀಡಿದರು. ನಂತರ ಅಧ್ಯಾಪಕರಾದ ತೇಜಸ್ ಕಿರಣ್ ತರಗತಿ ನಡೆಸಿಕೊಟ್ಟರು. ಪದ್ಮಿನಿ, ಗುಲಾಬಿ, ಶ್ರೀಕೃಷ್ಣ ಡಿ.ಕೆ. ಮೊದಲಾದ ಅಧ್ಯಾಪಕರು ಸಹಕಾರ ನೀಡಿದರು. ಶಿಬಿರದಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. ಅಳತೆ, ಭಾರ, ಒಳಹಿಡಿವು ಮೊದಲಾದವುಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಲಾಯಿತು.
Wednesday, 4 February 2015
"ಅಮ್ಮ ತಿಳಿಯಲು''
Saturday, 20 December 2014
Subscribe to:
Posts (Atom)
-
ತರಗತಿಯ ರಕ್ಷಕ – ಶಿಕ್ಷಕ ಸಂಘದ ಸಭೆಗಳು 30.09.2014 ರಂದು ಜರಗಿತು. ಎಲ್ಲಾ ತರಗತಿಯಲ್ಲೂ ಆಯಾ ತರಗತಿ ಅಧ್ಯಾಪಕರು ಸಭೆಯ ನೇತೃತ್ವವನ್ನು ವಹಿಸಿದ...