Monday, 23 February 2015

ಅಬಾಕಸ್ ತರಗತಿ



         21-02-2015 ರಂದು ನಮ್ಮ ಶಾಲೆಯಲ್ಲಿ 'ಅಬಾಕಸ್' ತರಗತಿ ಆರಂಭಿಸಲಾಯಿತು. ಅಪರಾಹ್ನ 2 ಗಂಟೆಗೆ ಸರಿಯಾಗಿ ಜರಗಿದ ಸಭಾ ಕಾರ್ಯಕ್ರಮವನ್ನು ಲಿಲ್ಲೀ ಟೀಚರ್ ರವರು ಉಧ್ಘಾಟಿಸಿದರು. ಮುಖ್ಯೋಪಾಧ್ಯಾಯಿನಿ ಸುದತಿ ಬಿ. ಯವರು ಸ್ವಾಗತಿಸಿದರು. ಅಬಾಕಸ್ ತರಗತಿ ನಡೆಸುವ ಅಧ್ಯಾಪಕರಾದ ಶ್ರೀಯುತ ಉದಯ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ತರಗತಿಯ ಕುರಿತಾಗಿ ವಿವರಣೆ ನೀಡಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಮನೋರಮ ಕಿಣಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಉದಯ ಕುಮಾರ್ ತರಗತಿ ನಡೆಸಿದರು. ಸುಮಾರು 40 ವಿದ್ಯಾರ್ಥಿಗಳು ಆರಂಭದ ದಿನ ಭಾಗವಹಿಸಿದರು.

Wednesday, 18 February 2015

ಶೈಕ್ಷಣಿಕ ಪ್ರವಾಸ



             ನಾಲ್ಕನೆಯ ತರಗತಿಯ ಮಕ್ಕಳಿಗೆ ಶಾಲಾ ಪ್ರವಾಸ ಏರ್ಪಡಿಸಿಲಾಯಿತು. 59 ಮಕ್ಕಳು ಹಾಗೂ 7 ಅಧ್ಯಾಪಕರು ಒಟ್ಟಾಗಿ 9 ಗಂಟೆಗೆ ಶಾಲೆಯಿಂದ ಹೊರಟು ಮಂಗಳೂರಿಗೆ ಬಂದೆವು. ಬೆಳಗ್ಗೆ ಕದ್ರಿ ಪಾರ್ಕ್ ನಲ್ಲಿ ಉಪಹಾರ ಮುಗಿಸಿದೆವು. ಅಲ್ಲಿಂದ ಬಿಜೈನಲ್ಲಿರುವ ಪುರಾತನ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದೆವು. ಅಲ್ಲಿರುವ ಪುರಾತನ ವಸ್ತುಗಳನ್ನು ಮಕ್ಕಳು ಆಸಕ್ತಿಯಿಂದ ವೀಕ್ಷಿಸಿದರು. ನಂತರ ಎಯ್ಯಾಡಿಯಲ್ಲಿರುವ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದೆವು. ಹೊಸದಿಗಂತ ಪ್ರೆಸ್, ಪ್ಲಾಸ್ಟಿಕ್ ವಸ್ತುಗಳ ತಯಾರಿ, ಕಬ್ಬಿಣದ ಡಬ್ಬ ತಯಾರಿ ಮತ್ತು ಆಹಾರ ವಸ್ತುಗಳನ್ನು ತಯಾರಿಸುವ ಕೈಗಾರಿಕೆಗಳನ್ನು ಸಂದರ್ಶಿಸಿದೆವು. ಅಲ್ಲಿನ ಕೆಲಸ ಕಾರ್ಯಗಳ ವಿಧಾನವನ್ನು ತಿಳಿದುಕೊಂಡರು. ಮಧ್ಯಾಹ್ನದ ಊಟವನ್ನು ಅಲ್ಲೇ ಸಮೀಪದ ಸಭಾಂಗಣದಲ್ಲಿ ಪೂರೈಸಲಾಯಿತು. ಅಲ್ಲಿಂದ ಪಿಲಿಕುಳ ಮೃಗಾಲಯವನ್ನು ಸಂದರ್ಶಿಸಿದೆವು. ಅಲ್ಲಿ ಪ್ರಾಣಿಗಳು, ಪಕ್ಷಿಗಳು ಮತ್ತು ಉರಗಗಳನ್ನು ವೀಕ್ಷಿಸಿದೆವು. ಬಳಿಕ ಪಿಲಿಕುಳ ಕಲಾ ಗ್ರಾಮಕ್ಕೆ ಭೇಟಿ ನೀಡಿದೆವು. ಅಲ್ಲಿ ಮಡಿಕೆ ತಯಾರಿ, ಅವಲಕ್ಕಿ ತಯಾರಿ, ಎತ್ತಿನ ಗಾಣ, ಕಬ್ಬಿಣ ಕೆಲಸ, ಕೈ ಮಗ್ಗ ಮತ್ತು ಬೆತ್ತದ ಪಿಠೋಪಕರಣಗಳ ತಯಾರಿ ಇತ್ಯಾದಿಗಳನ್ನು ವೀಕ್ಷಿಸಿದೆವು. ನಂತರ 4 ಗಂಟೆಗೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ತಲಪಿದೆವು. ಅಲ್ಲಿ ಅನೇಕ ವಿಜ್ಞಾನದ ಕೌತುಕಗಳು, ವಸ್ತುಗಳು ಮತ್ತು 3ಡಿ ಪ್ರದರ್ಶನವನ್ನು ವೀಕ್ಷಿಸಿದೆವು. 5.30 ಕ್ಕೆ ಸರಿಯಾಗಿ ಊರಿಗೆ ಹೊರಟೆವು. ಒಟ್ಟಿನಲ್ಲಿ ಪ್ರವಾಸ ಮಕ್ಕಳಿಗೂ, ಅಧ್ಯಾಪಕರಿಗೂ ಉತ್ತಮ ಅನುಭವಗಳನ್ನು ನೀಡಿತು.

Thursday, 12 February 2015

ಮೆಟ್ರಿಕ್ ಶಿಬಿರ



                10-02-2015 ನೇ ಮಂಗಳವಾರ ನಮ್ಮ  ಶಾಲೆಯಲ್ಲಿ ಮೆಟ್ರಿಕ್ ಶಿಬಿರ ಜರಗಿತು. ಬೆಳಗ್ಗೆ 10 ಗಂಟೆಗೆ ಸರಿಯಾಗಿ ಶಾಲಾ ಮುಖೋಪಾಧ್ಯಾಯಿನಿ ಸುದತಿ ಬಿ. ಯವರು ಶಿಬಿರವನ್ನು ಉಧ್ಘಾಟಿಸಿ ಮಾತನಾಡಿದರು. ಶಿಬಿರದ ಉದ್ದೇಶ ಹಾಗೂ ಚಟುವಟಿಕೆಗಳ ಕಿರು ವಿವರಣೆ ನೀಡಿದರು. ನಂತರ ಅಧ್ಯಾಪಕರಾದ ತೇಜಸ್ ಕಿರಣ್ ತರಗತಿ ನಡೆಸಿಕೊಟ್ಟರು. ಪದ್ಮಿನಿ, ಗುಲಾಬಿ, ಶ್ರೀಕೃಷ್ಣ ಡಿ.ಕೆ. ಮೊದಲಾದ ಅಧ್ಯಾಪಕರು ಸಹಕಾರ ನೀಡಿದರು. ಶಿಬಿರದಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. ಅಳತೆ, ಭಾರ, ಒಳಹಿಡಿವು ಮೊದಲಾದವುಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಲಾಯಿತು.

Wednesday, 4 February 2015

"ಅಮ್ಮ ತಿಳಿಯಲು''

             ಮಂಜೇಶ್ವರ ಬಿ.ಆರ್.ಸಿ. ವತಿಯಿಂದ ಹಿಂದುಳಿದ ವಿಭಾಗದ ಮುಸ್ಲಿಂ ಮಕ್ಕಳ ತಾಯಂದಿರಿಗೆ ಒಂದು ದಿನದ ತರಬೇತಿಯಾದ ಅಮ್ಮ ತಿಳಿಯಲು ಕಾರ್ಯಕ್ರಮ ತಾ. 28-01-2015 ಬುಧವಾರ ಮಂಜೇಶ್ವರ ಎಸ್.ಎ.ಟಿ. ಶಾಲೆಯಲ್ಲಿ ಬೆಳಗ್ಗೆ 10 ಗಂಟೆಗೆ ಆರಂಭಗೊಂಡಿತು. ಎಸ್.ಎ.ಟಿ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮನೋರಮ ಕಿಣಿ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಸುದತಿ ಬಿ. ಯವರು ಶುಭಾಸಂಶನೆ ಗೈದರು. ಸಂಪನ್ಮೂಲ ವ್ಯಕ್ತಿಯಾದ ಬಿ.ಪಿ.ಒ. ವಿಜಯ್ ಕುಮಾರ್ ತರಗತಿ ನಡೆಸಿಕೊಟ್ಟರು. ಸಹಾಯಕರಾದ ಉಷಾ ವಿನ್ಸೆಂಟ್, ಸಂಜುಮೋಲ್ ಜೋಸ್ ಟೀಚರ್, ಸುಮತಿ ಟೀಚರ್, ಅನುಸೂಯ ಹಾಗೂ ಪದ್ಮಿನಿ ಟೀಚರ್ ರವರು ಉಪಸ್ಥಿತರಿದ್ದರು.

Wednesday, 10 December 2014

"ಸಾಕ್ಷರ ಘೋಷಣೆ"



             10-12-2014 ರಂದು "ಸಾಕ್ಷರ ಘೋಷಣೆ" ಕಾರ್ಯಕ್ರಮ ಜರುಗಿತು. ಶಾಲಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ನಮ್ಮ ಶಾಲಾ ಪಿ.ಟಿ.ಎ. ಅಧ್ಯಕ್ಷರಾದ ಶ್ರೀಯುತ ಪುತ್ತಬ್ಬ ಕುಂಜತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿಯ ಸಲಹಾ ಸಮಿತಿಯ ಸದಸ್ಯರಾದ ಶ್ರೀಮತಿ ಲಿಲ್ಲೀ ಟೀಚರ್ ರವರು ಅತಿಥಿಗಳಾಗಿ ಉಪಸ್ಥಿತರಿದ್ದು ಭಾಷಾ ಕಲಿಕೆಯ ನಾಲ್ಕು ಹಂತಗಳಾದ ಆಲಿಸುವಿಕೆ, ಮಾತುಗಾರಿಕೆ, ಬರವಣಿಗೆ ಮತ್ತು ಓದುವಿಕೆಯ ಪ್ರಾಧಾನ್ಯತೆಯನ್ನು ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಸುದತಿ ಬಿ. ಯವರು ಸಾಕ್ಷರತೆಯ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಶಿಕ್ಷಕರಾದ ಮಹೇಶರವರು ಸಾಕ್ಷರತೆಗೆ ಸಂಬಂಧಿಸಿದ ಘೋಷಣೆಗಳನ್ನು ಬೋಧಿಸಿದರು. ಶಿಕ್ಷಕ ತೇಜಸ್ ರವರು ಸ್ವಾಗತಿಸಿದರು. ಶಿಕ್ಷಕರಾದ ಶ್ರೀಕೃಷ್ಣರವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದವನಿತ್ತರು.

Saturday, 6 December 2014

ಕಲೋತ್ಸವ ವಿಜಯೋತ್ಸವ...........



           04-12-2014 ರಂದು ಕಲೋತ್ಸವದಲ್ಲಿ ಬಹುಮಾನ ಗಳಿಸಿದ ವಿದ್ಯಾರ್ಥಿಗಳು ಶಾಲಾ ವಿದ್ಯಾರ್ಥಿಗಳು ಜೊತೆಗೂಡಿ ಬ್ಯಾಂಡ್ ಮೇಳಗಳೊಂದಿಗೆ ವಿಜಯೋತ್ಸವ ಮೆರವಣಿಗೆಯನ್ನು ನಡೆಸಲಾಯಿತು. 

ಗಣರಾಜ್ಯೋತ್ಸವ