Thursday, 14 January 2016

ವಿಧ್ಯಾರಂಗ ಕಲಾಸಾಹಿತ್ಯ ವೇದಿಕೆ



    ವಿದ್ಯಾರಂಗ ಕಲಾಸಾಹಿತ್ಯ ವೇದಿಕೆಯ ಅಂಗವಾಗಿ ಮಕ್ಕಳಲ್ಲಿ ಕಲೆ, ಸಾಹಿತ್ಯಗಳಲ್ಲಿ ಆಸಕ್ತಿಯನ್ನು ಬೆಳೆಸಲು ತರಗತಿಗಳಲ್ಲಿ ಕಥೆ, ಕವಿತೆ, ಬಾಯಿತಾಳ, ಒಗಟು, ಚಿತ್ರ ರಚನೆ ಇತ್ಯಾದಿ ಚಟುವಟಿಕೆಗಳನ್ನು ನಡೆಸಲಾಯಿತು. ಈ ಚಟುವಟಿಕೆಗಳ ಉದ್ಘಾಟನೆಯನ್ನು ದಿನಾಂಕ 11-01-2016 ರಂದು ಅಸೆಂಬ್ಲಿಯಲ್ಲಿ ನಡೆಸಲಾಯಿತು. ಪಿ.ಟಿ.ಎ. ಅಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಹೇಶ್ ಸರ್ ಮತ್ತು ಸುದತಿ ಟೀಚರ್ ಬಾಯಿ ತಾಳ ಹಾಡುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುದತಿ ಟೀಚರ್ ತರಗತಿಗಳಲ್ಲಿ ನಡೆಸಲ್ಪಡುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
        ದಿನಾಂಕ 13-01-2015 ರಂದು ಮಕ್ಕಳ ಸೃಜನಾತ್ಮಕ ರಚನೆಗಳ ಪ್ರದರ್ಶನ ಮತ್ತು ಸಮಾರೋಪ ಕಾರ್ಯಕ್ರಮ ಜರಗಿತು. ನಿವೃತ್ತ ಪ್ರಾಂಶುಪಾಲರಾದ ಶೇಣಿ ಗೋಪಾಲಕೃಷ್ಣ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಆಯ್ದ ಮಕ್ಕಳ ಸೃಜನಾತ್ಮಕ ರಚನೆಗಳ ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯೋಪಾಧ್ಯಾಯಿನಿ ಸುದತಿ ಟೀಚರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಾರ್ಡ್ ಸದಸ್ಯರ ಸುಪ್ರೀಯಾ ಶೆಣೈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪಿ.ಟಿ.ಎ. ಅಧ್ಯಕ್ಷರಾದ ಫರೀದ್ ಎಂ.ಪಿ. ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮುಖ್ಯ ಅತಿಥಿಗಳು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಕಥೆ ಮತ್ತು ಕವಿತೆ ರಚಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಗಳನ್ನು ನೀಡಿದರು. ಅನಂತರ ಆಯ್ದ ಮಕ್ಕಳ ಸೃಜನಾತ್ಮಕ ರಚನೆಗಳ ಮಂಡನೆ ನಡೆಯಿತು. ಪಿ.ಯಿ.ಸಿ. ಮಟ್ಟದಲ್ಲಿ ನಡೆಯುವ ಸಾಹಿತ್ಯೋತ್ಸವಕ್ಜೆ ಆರಿಸಿದ ಮಕ್ಕಳ ಹೆಸರುಗಳನ್ನು ಘೋಷಿಸಲಾಯಿತು. ಅನುಸೂಯ ಟೀಚರ್ ಸ್ವಾಗತಿಸಿ ತೇಜೇಶ್ ಕಿರಣ್ ಸರ್ ವಂದಿಸಿದರು. ಶ್ರೀಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.
         ದಿನಾಂಕ 16-01-2016 ರಂದು ಜಿ.ಎಲ್.ಪಿ.ಶಾಲೆ ಕುಂಜತ್ತೂರಿನಲ್ಲಿ ನಡೆದ ಪಿ.ಯಿ.ಸಿ. ಮಟ್ಟದ ಸಾಹಿತ್ಯೋತ್ಸವದಲ್ಲಿ ನಮ್ಮ ಶಾಲೆಯ ಏಳು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದರು. ಕಥಾ ರಚನೆಯಲ್ಲಿ ಪ್ರಣಮ್ಯ, ಜನಪದಗೀತೆಯಲ್ಲಿ ಜಲಧಿ, ಚಿತ್ರರಚನೆಯಲ್ಲಿ ಅಭಿನ್ ಉಪಜಿಲ್ಲಾ ಮಟ್ಟದ ಸಾಹಿತ್ಯೋತ್ಸವಕ್ಕೆ ಆಯ್ಕೆಯಾದರು.
           19-01-2016 ಮಂಗಳವಾರದಂದು ಪೈವಳಿಕೆ ನಗರ ಶಾಲೆಯಲ್ಲಿ ನಡೆದ ಉಪಜಿಲ್ಲಾ ಮಟ್ಟದ ಸಾಹಿತ್ಯೋತ್ಸವದಲ್ಲಿ ಮೂರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಥಾರಚನೆಯಲ್ಲಿ ಪ್ರಣಮ್ಯ ಮತ್ತು ಜನಪದ ಗೀತೆ ಸ್ಪರ್ಧೆಯಲ್ಲಿ ಜಲಧಿ ಎಸ್. ರಾವ್ ಪ್ರಥಮ ಸ್ಥಾನವನ್ನು ಪಡೆದಿರುವರು.

Thursday, 3 December 2015

ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವ


           ಜಿ.ಎಚ್.ಎಸ್.ಎಸ್. ಬೇಕೂರಿನಲ್ಲಿ ನಡೆದ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಎಸ್.ಎ.ಟಿ.ಎಲ್.ಪಿ.ಶಾಲೆ ಮಂಜೇಶ್ವರದ ವಿದ್ಯಾರ್ಥಿಗಳು ಎಲ್.ಪಿ. ಸಾಮಾನ್ಯ ವಿಭಾಗದ ಗುಂಪು ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ '' ಗ್ರೇಡನ್ನು, ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ '' ಗ್ರೇಡಿನೊಂದಿಗೆ ದ್ವಿತೀಯ ಸ್ಥಾನವನ್ನು, ಜಲವರ್ಣ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರಜೀನ ಬಿ. 'ಬಿ'ಗ್ರೇಡಿನೊಂದಿಗೆ ನಾಲ್ಕನೆಯ ಸ್ಥಾನವನ್ನು, ಜಾನಪದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಪಾಯಲ್ ಎಮ್.ಪಿ. '' ಗ್ರೇಡಿನೊಂದಿಗೆ ದ್ವಿತೀಯ ಸ್ಥಾನವನ್ನು, ಭರತನಾಟ್ಯ ಸ್ಪರ್ಧೆಯಲ್ಲಿ ಭಾಗವಹಿಸಿ 'ಬಿ' ಗ್ರೇಡನ್ನು, ಮಾಪಿಳ್ಳಪಾಟ್ ಸ್ಪರ್ಧೆಯಲ್ಲಿ ಭಾಗವಹಿಸಿದ ಅಶ್ ಫಾನ 'ಬಿ' ಗ್ರೇಡಿನೊಂದಿಗೆ ತೃತೀಯ ಸ್ಥಾನವನ್ನು, ಕನ್ನಡ ವಿಭಾಗದ ಕಥೆ ಹೇಳುವ ಸ್ಪರ್ಧೆಯಲ್ಲಿ ಭಾಗವಹಿಸಿದ ಭವಿಶ್ 'ಬಿ' ಗ್ರೇಡನ್ನು ಪಡೆಯುವುದರೊಂದಿಗೆ ಎಲ್.ಪಿ.ಕನ್ನಡ ವಿಭಾಗದಲ್ಲಿ ಸಮಗ್ರ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ಅಭಿನಿವೆಶ್


       ಜಿ.ಎಚ್.ಎಸ್.ಎಸ್. ಬೇಕೂರಿನಲ್ಲಿ ನಡೆದ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಎಸ್.ಎ.ಟಿ.ಎಲ್.ಪಿ.ಶಾಲೆ ಮಂಜೇಶ್ವರದ ಅಭಿನಿವೆಶ್ ಕನ್ನಡ ವಿಭಾಗದ ಒಗಟು ಸ್ಪರ್ಧೆಯಲ್ಲಿ ಭಾಗವಹಿಸಿ ''ಗ್ರೇಡಿನೊಂದಿಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾನೆ.


ಪ್ರಣಮ್ಯ


       ಜಿ.ಎಚ್.ಎಸ್.ಎಸ್. ಬೇಕೂರಿನಲ್ಲಿ ನಡೆದ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಎಸ್.ಎ.ಟಿ.ಎಲ್.ಪಿ.ಶಾಲೆ ಮಂಜೇಶ್ವರದ ಪ್ರಣಮ್ಯ ಕನ್ನಡ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ''ಗ್ರೇಡಿನೊಂದಿಗೆ ಪ್ರಥಮ ಸ್ಥಾನವನ್ನು, ಸಾಮಾನ್ಯ ವಿಭಾಗದ ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ಭಾಗವಹಿಸಿ ''ಗ್ರೇಡನ್ನು ಪಡೆದಿರುತ್ತಾಳೆ.

ಜಲಧಿ ಎಸ್. ರಾವ್


               ಜಿ.ಎಚ್.ಎಸ್.ಎಸ್. ಬೇಕೂರಿನಲ್ಲಿ ನಡೆದ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಎಸ್.ಎ.ಟಿ.ಎಲ್.ಪಿ. ಶಾಲೆ ಮಂಜೇಶ್ವರದ ಜಲಧಿ ಎಸ್. ರಾವ್ ಸಾಮಾನ್ಯ ವಿಭಾಗದ ಲಘ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ '' ಗ್ರೇಡಿನೊಂದಿಗೆ ಪ್ರಥಮ ಸ್ಥಾನವನ್ನು,ಕನ್ನಡ ವಿಭಾಗದ ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸಿ '' ಗ್ರೇಡಿನೊಂದಿಗೆ ನಾಲ್ಕನೆಯ ಸ್ಥಾನವನ್ನು ಪಡೆದಿರುತ್ತಾಳೆ.

Friday, 20 November 2015

ಫಾತಿಮತ್ ಅಸ್ನಾ ತಮನ್ನಾ ಎ.ಕೆ.

           
     ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ನಡೆದ ವೃತ್ತಿ ಪರಿಚಯ ಮೇಳದ ಪಪ್ಪೆಟ್ ತಯಾರಿ ಸ್ಪರ್ಧೆಯಲ್ಲಿ ಎಸ್.ಎ.ಟಿ.ಎಲ್.ಪಿ.ಶಾಲೆ ಮಂಜೇಶ್ವರದ ವಿದ್ಯಾರ್ಥಿನಿ ಫಾತಿಮತ್ ಅಸ್ನಾ ತಮನ್ನಾ ಎ.ಕೆ. '' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ 'ಬಿ' ಗ್ರೇಡನ್ನು ಪಡೆದಿರುತ್ತಾಳೆ.

ಪ್ರಜೀನ ಬಿ.


        ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ನಡೆದ ವೃತ್ತಿ ಪರಿಚಯ ಮೇಳದ ಫೇಬ್ರಿಕ್ ಪೈಂಟಿಂಗ್ (ವೆಜಿಟೇಬಲ್) ವಿಭಾಗದಲ್ಲಿ ಎಸ್.ಎ.ಟಿ.ಎಲ್.ಪಿ.ಶಾಲೆ ಮಂಜೇಶ್ವರದ ವಿದ್ಯಾರ್ಥಿನಿ ಪ್ರಜೀನ ಬಿ. '' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ 'ಬಿ' ಗ್ರೇಡನ್ನು ಪಡೆದಿರುತ್ತಾಳೆ.

ಗಣರಾಜ್ಯೋತ್ಸವ