Saturday, 25 June 2016
Wednesday, 8 June 2016
ವಿಶ್ವ ಪರಿಸರ ದಿನಾಚರಣೆ
07-06-2016 ರಂದು ಪರಿಸರ ದಿನಾಚರಣೆ ಅಂಗವಾಗಿ ಪರಿಸರದ ಮಹತ್ವವನ್ನು ತಿಳಿಸಲಾಯಿತು. ಪರಿಸರ ಸಂರಕ್ಷಣೆ ಕುರಿತಾದ ಪ್ರತಿಜ್ಞೆ ಸ್ವೀಕಾರ, ಗಿಡಗಳ ವಿತರಣೆ ಇತ್ಯಾದಿ ಕಾರ್ಯಕ್ರಮಗಳು ಜರಗಿದವು.
Saturday, 4 June 2016
ಸಿ.ಪಿ.ಟಿ.ಎ
03-06-2016 ರಂದು ಎಲ್ಲಾ ತರಗತಿಗಳ ಸಿ.ಪಿ.ಟಿ.ಎ. ಸಭೆ ನಡೆಯಿತು. ಹೆತ್ತವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಹೆತ್ತವರಿಗೆ ಮಕ್ಕಳ ಶಾಲಾ ಚಟುವಟಿಕೆಗಳ ಬಗ್ಗೆ, ಪುಸ್ತಕ, ಹಾಜರಾತಿ, ಮಧ್ಯಾಹ್ನದ ಊಟ ಇತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ನೀಡಲಾಯಿತು.
Thursday, 2 June 2016
ಪ್ರವೇಶೋತ್ಸವ
01.06.2016 ರಂದು ಪ್ರವೇಶೋತ್ಸವ ಕಾರ್ಯಕ್ರಮ ಜರಗಿತು. ಬ್ಯಾಂಡ್ ಮೇಳದ ಮೆರವಣಿಗೆಯೊಂದಿಗೆ ಮಕ್ಕಳನ್ನು ಸ್ವಾಗತಿಸಲಾಯಿತು. ಶಾಲಾ ಪ್ರಬಂಧಕ ದಿನೇಶ್ ಶೆಣೈ ಮೆರವಣಿಗೆಯನ್ನು ಸ್ವಾಗತಿಸಿದರು. ನಂತರ 'ಅನಂತ ವಿಧ್ಯಾ' ಸಭಾಂಗಣದಲ್ಲಿ ನಡೆದ ಸಭಾಕಾರ್ಯಕ್ರಮವನ್ನು ವಾರ್ಡ್ ಸದಸ್ಯೆ ಸುಪ್ರಿಯಾ ಶೆಣೈ ಉದ್ಘಾಟಿಸಿದರು. ಪಿ.ಟಿ.ಎ. ಅಧ್ಯಕ್ಷ ಫರೀದ್ M P ಅಧ್ಯಕ್ಷತೆ ವಹಿಸಿದ್ದರು. ಲಿಲ್ಲಿ ಭಾಯಿ ಟೀಚರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಮಹೇಶ ಕೆ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ತೇಜಸ್ ಕಿರಣ್ ಸ್ವಾಗತಿಸಿ ಅನುಸೂಯ ಟೀಚರ್ ವಂದಿಸಿದರು. ಶ್ರೀಕೃಷ್ಣ ಡಿ.ಕೆ. ಕಾರ್ಯಕ್ರಮ ನಿರೂಪಿಸಿದರು. ಒಂದನೇ ತರಗತಿಯ ಮಕ್ಕಳಿಗೆ ಉಚಿತ ಕಿಟ್ ನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಪಿ.ಟಿ.ಎ. ಅಧ್ಯಕ್ಷರ ವತಿಯಿಂದ ಸಿಹಿತಿಂಡಿ, ಬಲೂನ್ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
Subscribe to:
Posts (Atom)
-
ತರಗತಿಯ ರಕ್ಷಕ – ಶಿಕ್ಷಕ ಸಂಘದ ಸಭೆಗಳು 30.09.2014 ರಂದು ಜರಗಿತು. ಎಲ್ಲಾ ತರಗತಿಯಲ್ಲೂ ಆಯಾ ತರಗತಿ ಅಧ್ಯಾಪಕರು ಸಭೆಯ ನೇತೃತ್ವವನ್ನು ವಹಿಸಿದ...