Thursday, 11 June 2015

C.P.T.A. Meeting



              10.06.2015 ರಂದು ಒಂದನೇ ತರಗತಿಯಿಂದ ನಾಲ್ಕನೇ ತರಗತಿಗಳ ವರೆಗಿನ CPTA ಸಭೆ ಜರಗಿತು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ತರಗತಿಯ ಚಟುವಟಿಕೆಗಳ ಕ್ರಮ, ಮನೆಯಲ್ಲಿ ನಡೆಯುವ ಮುಂದುವರಿದ ಚಟುವಟಿಕೆಯಲ್ಲಿ ಹೆತ್ತವರ ಪಾತ್ರ, ತರಗತಿಯ ಶಿಸ್ತಿನ ಕ್ರಮ, ಸಮವಸ್ತ್ರ, ಸಂಗ್ರಹಕ್ಕೆ ಹೆತ್ತವರು ಮಾಡಬೇಕಾದ ಸಹಾಯ, ಶಾಲೆಯ ನಿಯಮಗಳು ಇವೇ ಮೊದಲಾದ ವಿಚಾರಗಳ ಕುರಿತು ಆಯಾ ತರಗತಿಯ ಅಧ್ಯಾಪಕರು  ಹೆತ್ತವರಿಗೆ ಮಾಹಿತಿ ನೀಡಿದರು.

Saturday, 6 June 2015

ವಿಶ್ವ ಪರಿಸರ ದಿನ



             05.06.2015 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಬೆಳಗ್ಗೆ 10 ಗಂಟೆಗೆ ಸರಿಯಾಗಿ ಅಸೆಂಬ್ಲಿ ಸೇರಲಾಯಿತು. ಮುಖ್ಯೋಪಾಧ್ಯಾಯಿನಿ ಸುದತಿ ಬಿ. ಪರಿಸರ ದಿನದ ಮಹತ್ವವನ್ನು ತಿಳಿಸಿ  ಗಿಡಗಳನ್ನು ಉಳಿಸಿ-ಬೆಳೆಸಬೇಕಾದ ಅನಿವಾರ್ಯತೆಯನ್ನು ತಿಳಿಸಿದರು. ಅಧ್ಯಾಪಕ ಮಹೇಶ ಕೆ. ಪರಿಸರಗೀತೆಯನ್ನು ಹಾಡಿಸಿದರು. ಮಕ್ಕಳು ಉತ್ಸಾಹದಿಂದ ಹಾಡಿದರು. ನಂತರ ಪರಿಸರ ಉಳಿಸಿ ಬೆಳೆಸುವ ಪ್ರತಿಜ್ಞೆಯನ್ನು ಬೋಧಿಸಲಾಯಿತು. ಬಳಿಕ ಸುದತಿ ಟೀಚರ್ ಗಿಡಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಅಪರಾಹ್ನ 3 ಗಂಟೆಗೆ ಸರಿಯಾಗಿ ಮೂರು ಮತ್ತು ನಾಲ್ಕನೇ ತರಗತಿಯ ಎಲ್ಲಾ ಮಕ್ಕಳಿಗೆ ಸರಕಾರದಿಂದ ಒದಗಿಸಲ್ಪಟ್ಟ ಗಿಡಗಳನ್ನು ವಿತರಿಸಲಾಯಿತು. ಗಿಡಗಳನ್ನು ನೆಟ್ಟು ಬೆಳೆಸುವ ಜವಾಬ್ದಾರಿಯ ಬಗ್ಗೆ ತಿಳಿ ಹೇಳಲಾಯಿತು. ಶಾಲಾ ಪರಿಸರದಲ್ಲಿ ಕೆಲವು ಗಿಡಗಳನ್ನು ನೆಡಲಾಯಿತು.ಗಿಡಗಳನ್ನು ನೋಡಿಕೊಳ್ಳಲು ನಾಲ್ಕನೇ ತರಗತಿ ಮಕ್ಕಳಿಗೆ ಜವಾಬ್ದಾರಿ ವಹಿಸಲಾಯಿತು.

Tuesday, 2 June 2015

ಪ್ರವೇಶೋತ್ಸವ 2015



           01.06.2015 ಸೋಮವಾರ ಪ್ರವೇಶೋತ್ಸವದೊಂದಿಗೆ 2015-16 ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಂಡಿತು. ಬೆಳಗ್ಗೆ 10 ಗಂಟೆಗೆ ಸರಿಯಾಗಿ ಅಸೆಂಬ್ಲಿ ಸೇರಲಾಯಿತು. ಪ್ರತಿಜ್ಞೆಯನ್ನು ಬೋಧಿಸಲಾಯಿತು. ನಂತರ ಹೊಸತಾಗಿ ಶಾಲೆಗೆ ಸೇರಿದ ಮಕ್ಕಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಬ್ಯಾಂಡ್ ಸೆಟ್ ವಿಶೇಷ ಮೆರುಗು ನೀಡಿತು.
        ಬಳಿಕ ಅನಂತವಿಧ್ಯಾ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ಜರಗಿತು. ವಾರ್ಡಿನ ಸದಸ್ಯ ಆನಂದ ಮಾಸ್ತರ್ ಬಲೂನು ಸಿಡಿಸುವ ಮೂಲಕ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ನಂತರ ಪ್ರವೇಶೋತ್ಸವ ಗೀತೆಯನ್ನು ಹಾಡಲಾಯಿತು. ಒಂದನೇ ತರಗತಿಯ ಮಕ್ಕಳಿಗೆ ಸಮವಸ್ತ್ರ ಹಾಗೂ 'ಕಲಿಕಾ ಕಿಟ್ ' ನ್ನು ಸಾಂಕೇತಿಕವಾಗಿ ಈ ಸಂದರ್ಭದಲ್ಲಿ ವಿತರಿಸಲಾಯಿತು. ಶಾಲಾ ಪ್ರಬಂಧಕ ದಿನೇಶ್ ಶೆಣೈ ಅಧ್ಯಕ್ಷತೆ ವಹಿಸಿದರು. ಶ್ರೀಮತಿ ಲಿಲ್ಲಿ  ಟೀಚರ್ ಶುಭ ಹಾರೈಸಿದರು. ಮುಖ್ಯೋಪಾಧ್ಯಾಯಿನಿ ಸುದತಿ ಬಿ. ಸಾಮಾನ್ಯ ಸೂಚನೆಗಳನ್ನು ನೀಡಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಮನೋರಮ ಕಿಣಿ ಉಪಸ್ಥಿತರಿದ್ದರು. ಶ್ರೀಕೃಷ್ಣ ಡಿ.ಕೆ. ಸ್ವಾಗತಿಸಿ ದಾಸಪ್ಪ ರೈ ವಂದಿಸಿದರು. ವಿರೇಶ್ವರ ಭಟ್ ನಿರೂಪಿಸಿದರು.
        ಸಭಾಕಾರ್ಯಕ್ರಮದ ಬಳಿಕ ಮಕ್ಕಳಿಗೆ ಕೆಲವು ಹಾಡುಗಳು ಹಾಗೂ ವೈವಿಧ್ಯಮಯ ಚಟುವಟಿಕೆಗಳು ಜರಗಿದವು. ಸಿಹಿತಿಂಡಿ ವಿತರಿಸಲಾಯಿತು. ಹೆತ್ತವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Saturday, 21 March 2015

ಹಿರಿಮೆ ಉತ್ಸವ



             2014-2015 ನೇ ಸಾಲಿನ 'ಹಿರಿಮೆ ' ಕಾರ್ಯಕ್ರಮ 18-03-2015 ರಂದು 'ಅನಂತವಿಧ್ಯಾ' ಸಭಾಂಗಣದಲ್ಲಿ ಜರಗಿತು. ಬೆಳಗ್ಗೆ 10.30 ಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಯಿತು. ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಅನುಸೂಯ ಟೀಚರ್ ಅತಿಥಿಗಳನ್ನು ಸ್ವಾಗತಿಸಿದರು. PTA ಅಧ್ಯಕ್ಷ ಪುತ್ತಬ್ಬ ಕುಂಜತ್ತೂರು ಸಭಾಧ್ಯಕ್ಷತೆ ವಹಿಸಿದರು. ಹಿರಿಯರಾದ ಲಿಲ್ಲಿ ಟೀಚರ್ ಹಿರಿಮೆ ಕಾರ್ಯಕ್ರಮವನ್ನು ಔಪಚಾರಿಕವಾಗಿ ಉಧ್ಘಾಟಿಸಿದರು. ಕಾರ್ಯಕ್ರಮಗಳ ಛಾಯಾಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಉಧ್ಘಾಟಿಸಲಾಯಿತು. 2014-15 ನೇ ಸಾಲಿನಲ್ಲಿ ಜರಗಿದ ವಿವಿಧ ಕಾರ್ಯಕ್ರಮಗಳ ಕಿರು ನೋಟವನ್ನು ಹೆತ್ತವರಿಗೆ ಪ್ರೋಜೆಕ್ಟರ್ ಮೂಲಕ ತೋರಿಸಲಾಯಿತು. ನಂತರ ಆಯಾ ತರಗತಿಗಳಲ್ಲಿ ಪ್ರದರ್ಶಿಸಲಾದ ಕಲಿಕೋಪಕರಣಗಳನ್ನು ಹಾಗೂ ಮಕ್ಕಳ ಉತ್ಪನ್ನಗಳನ್ನು ವೀಕ್ಷಿಸಲು ಅವಕಾಶ ನೀಡಲಾಯಿತು. ಹೆತ್ತವರು ಪ್ರದರ್ಶನ ವೀಕ್ಷಿಸಿ ತಮ್ಮ ಅಭಿಪ್ರಾಯವನ್ನು ಪುಸ್ತಕದಲ್ಲಿ ದಾಖಲಿಸಿದರು. ನಂತರ ಸಭಾಕಾರ್ಯಕ್ರಮ ಮುಂದುವರಿಯಿತು. ಪ್ರೌಢಶಾಲೆ ಮುಖೋಪಾಧ್ಯಾಯಿನಿ ಮನೋರಮ ಕಿಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಮುಖೋಪಾಧ್ಯಾಯಿನಿ ಸುದತಿ ಬಿ. ಮುಂದಿನ ವರ್ಷದ ಸಾಮಾನ್ಯ ಯೋಜನೆಗಳು, ಈ ವರ್ಷದ ಹಿರಿಮೆಗಳ ಬಗ್ಗೆ ಸಂಕ್ಷಿಪ್ತ ವಿವರಗಳನ್ನು ನೀಡಿದರು. ಹೆತ್ತವರು ಹೆಚ್ಚಿನ ಸಹಕಾರ ನೀಡುವಂತೆ ಕೇಳಿಕೊಂಡರು. ಹೆತ್ತವರ ಪರವಾಗಿ ಕಿರಣ್ ಕುಮಾರ್ ಕೆಲವು ಸಲಹೆಗಳನ್ನು ನೀಡಿದರು. PTA ಪದಾಧಿಕಾರಿಗಳಾದ ಫರೀದ್, ನವೀನ್ ಅಡಪ್ಪ, MPTA ಅಧ್ಯಕ್ಷೆ ಶಾರದಾ ಉಪಸ್ಥಿತರಿದ್ದರು. ಹೆತ್ತವರಿಗೆ ಲಘ ಉಪಹಾರ ನೀಡಲಾಯಿತು. ಮಹೇಶ ಕೆ. ವಂದಿಸಿ, ಶ್ರೀಕೃಷ್ಣ ಡಿ.ಕೆ. ನಿರೂಪಿಸಿದರು. ಶಿಕ್ಷಕ ತೇಜಸ್ ಕಿರಣ್ ಸಹಕರಿಸಿದರು.

ನರ್ಸರಿ ಶಾಲಾ ಕಲಿಕೋಪಕರಣಗಳು


ಗಣರಾಜ್ಯೋತ್ಸವ