2014-2015 ನೇ ಸಾಲಿನ 'ಹಿರಿಮೆ ' ಕಾರ್ಯಕ್ರಮ 18-03-2015 ರಂದು 'ಅನಂತವಿಧ್ಯಾ' ಸಭಾಂಗಣದಲ್ಲಿ ಜರಗಿತು. ಬೆಳಗ್ಗೆ 10.30 ಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಯಿತು. ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಅನುಸೂಯ ಟೀಚರ್ ಅತಿಥಿಗಳನ್ನು ಸ್ವಾಗತಿಸಿದರು. PTA ಅಧ್ಯಕ್ಷ ಪುತ್ತಬ್ಬ ಕುಂಜತ್ತೂರು ಸಭಾಧ್ಯಕ್ಷತೆ ವಹಿಸಿದರು. ಹಿರಿಯರಾದ ಲಿಲ್ಲಿ ಟೀಚರ್ ಹಿರಿಮೆ ಕಾರ್ಯಕ್ರಮವನ್ನು ಔಪಚಾರಿಕವಾಗಿ ಉಧ್ಘಾಟಿಸಿದರು. ಕಾರ್ಯಕ್ರಮಗಳ ಛಾಯಾಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಉಧ್ಘಾಟಿಸಲಾಯಿತು. 2014-15 ನೇ ಸಾಲಿನಲ್ಲಿ ಜರಗಿದ ವಿವಿಧ ಕಾರ್ಯಕ್ರಮಗಳ ಕಿರು ನೋಟವನ್ನು ಹೆತ್ತವರಿಗೆ ಪ್ರೋಜೆಕ್ಟರ್ ಮೂಲಕ ತೋರಿಸಲಾಯಿತು. ನಂತರ ಆಯಾ ತರಗತಿಗಳಲ್ಲಿ ಪ್ರದರ್ಶಿಸಲಾದ ಕಲಿಕೋಪಕರಣಗಳನ್ನು ಹಾಗೂ ಮಕ್ಕಳ ಉತ್ಪನ್ನಗಳನ್ನು ವೀಕ್ಷಿಸಲು ಅವಕಾಶ ನೀಡಲಾಯಿತು. ಹೆತ್ತವರು ಪ್ರದರ್ಶನ ವೀಕ್ಷಿಸಿ ತಮ್ಮ ಅಭಿಪ್ರಾಯವನ್ನು ಪುಸ್ತಕದಲ್ಲಿ ದಾಖಲಿಸಿದರು. ನಂತರ ಸಭಾಕಾರ್ಯಕ್ರಮ ಮುಂದುವರಿಯಿತು. ಪ್ರೌಢಶಾಲೆ ಮುಖೋಪಾಧ್ಯಾಯಿನಿ ಮನೋರಮ ಕಿಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಮುಖೋಪಾಧ್ಯಾಯಿನಿ ಸುದತಿ ಬಿ. ಮುಂದಿನ ವರ್ಷದ ಸಾಮಾನ್ಯ ಯೋಜನೆಗಳು, ಈ ವರ್ಷದ ಹಿರಿಮೆಗಳ ಬಗ್ಗೆ ಸಂಕ್ಷಿಪ್ತ ವಿವರಗಳನ್ನು ನೀಡಿದರು. ಹೆತ್ತವರು ಹೆಚ್ಚಿನ ಸಹಕಾರ ನೀಡುವಂತೆ ಕೇಳಿಕೊಂಡರು. ಹೆತ್ತವರ ಪರವಾಗಿ ಕಿರಣ್ ಕುಮಾರ್ ಕೆಲವು ಸಲಹೆಗಳನ್ನು ನೀಡಿದರು. PTA ಪದಾಧಿಕಾರಿಗಳಾದ ಫರೀದ್, ನವೀನ್ ಅಡಪ್ಪ, MPTA ಅಧ್ಯಕ್ಷೆ ಶಾರದಾ ಉಪಸ್ಥಿತರಿದ್ದರು. ಹೆತ್ತವರಿಗೆ ಲಘ ಉಪಹಾರ ನೀಡಲಾಯಿತು. ಮಹೇಶ ಕೆ. ವಂದಿಸಿ, ಶ್ರೀಕೃಷ್ಣ ಡಿ.ಕೆ. ನಿರೂಪಿಸಿದರು. ಶಿಕ್ಷಕ ತೇಜಸ್ ಕಿರಣ್ ಸಹಕರಿಸಿದರು.
Subscribe to:
Posts (Atom)
-
ತರಗತಿಯ ರಕ್ಷಕ – ಶಿಕ್ಷಕ ಸಂಘದ ಸಭೆಗಳು 30.09.2014 ರಂದು ಜರಗಿತು. ಎಲ್ಲಾ ತರಗತಿಯಲ್ಲೂ ಆಯಾ ತರಗತಿ ಅಧ್ಯಾಪಕರು ಸಭೆಯ ನೇತೃತ್ವವನ್ನು ವಹಿಸಿದ...